Entha Sogasu Maguvina Manasu Lyrics

in Thayige Thakka Maga

Video:

LYRIC

ಎಂಥಾ ಸೊಗಸು ಮಗುವಿನ ಮನಸು
ಎಂಥಾ ಸೊಗಸು ಪ್ರೇಮದ ಕನಸು
ಎಂಥಾ ಸೊಗಸು ಮಗುವಿನ ಮನಸು 
ಎಂಥಾ ಸೊಗಸು ಪ್ರೇಮದ ಕನಸು
 
ಎಲ್ಲಾ ಕಾಲವು ವಸಂತವಾದರೆ
ಋತುವಿನ ಸೊಗಸೇ ಸೊಗಸು
ಎಲ್ಲಾ ವಯಸು ಯೌವ್ವನವಾದರೆ
ಎಲ್ಲಾ ವಯಸು ಯೌವ್ವನವಾದರೆ
ಜೀವನವೆಂಥಾ ಸೊಗಸು
 
|| ಎಂಥಾ ಸೊಗಸು ಮಗುವಿನ ಮನಸು 
ಎಂಥಾ ಸೊಗಸು ಪ್ರೇಮದ ಕನಸು…||
 
ಬಯಸಿದ ಹಾಗೆ ನಡೆದರೆ ಎಲ್ಲಾ
ಬಾಳುವ ರೀತಿಯೇ ಸೊಗಸು
ಬಯಸಿದ ಹಾಗೆ ನಡೆದರೆ ಎಲ್ಲಾ
ಬಾಳುವ ರೀತಿಯೇ ಸೊಗಸು
ನುಡಿಯುವುದೆಲ್ಲಾ ಕವನವೇ ಆದರೆ
ನುಡಿಯುವುದೆಲ್ಲಾ ಕವನವೇ ಆದರೆ
ಕವಿಯು ಕಾಣದ ಸೊಗಸು
 
|| ಎಂಥಾ ಸೊಗಸು ಮಗುವಿನ ಮನಸು
ಎಂಥಾ ಸೊಗಸು ಪ್ರೇಮದ ಕನಸು…||
 
ರಾತ್ರಿಗಳೆಲ್ಲಾ ಹುಣ್ಣಿಮೆಯಾದರೆ
ರಸಿಕರಿಗೆಂಥಾ ಸೊಗಸು
ಮಾತಿನಲೆಲ್ಲಾ ಪ್ರೀತಿಯೇ ಹರಿದರೆ
ಮಾತಿನಲೆಲ್ಲಾ ಪ್ರೀತಿಯೇ ಹರಿದರೆ
ಆ ಅನುಭವವೇ ..
 
|| ಎಂಥಾ ಸೊಗಸು ಮಗುವಿನ ಮನಸು
ಎಂಥಾ ಸೊಗಸು ಪ್ರೇಮದ ಕನಸು…||

Entha Sogasu Maguvina Manasu song lyrics from Kannada Movie Thayige Thakka Maga starring Dr Rajkumar, Padmapriya, Sahukar Janaki, Lyrics penned by Chi Udayashankar Sung by Dr Rajkumar, Music Composed by T G Lingappa, film is Directed by V Somashekar and film is released on 1978