Suriva Maleyali Lyrics

in Swathi

Video:

LYRIC

ಸುರಿವ ಮಳೆಯಲಿ ಕೊರೆಯುವ ಚಳಿ ಚಳಿ
ಬೆರೆವ ಬಯಕೆಯು ನಿನ್ನಯ ತೋಳಲಿ
ಒಂಟಿಯಾಗಿಹೆ ಬಾರೆ ನೀ ಪ್ರೀತಿಸು ಮನಸಾರೆ
ಬೇಗ ನನ್ನನ್ನು ಸೆರೆ ನಾ ತಾಳೆನು ಜಲಧಾರೆ
ಈ ಚುಂಬನ ರೋಮಾಂಚನ

|| ಸುರಿವ ಮಳೆಯಲಿ ಕೊರೆಯುವ ಚಳಿ ಚಳಿ
ಬೆರೆವ ಬಯಕೆಯು ನಿನ್ನಯ ತೋಳಲಿ ||

ಬದುಕಿನಲಿ ಹೊಸತು ಬೆಳಕು
ತೋರಿ ಬಳಿಗೆ ನೀನು ಸೆಳೆದೆ
ಪ್ರೀತಿಯ ಮಧುರ ಮಳೆಯ
ಸುಖದ ಸುಧೆಯ ಇಂದು ಸವಿದೆ
ಪರಿಚಯ ಪ್ರೇಮವಾಯಿತು
ಸಲುಗೆಯು ಮೂಡಿತು
ಹೃದಯವು ಕೂಗಿ ಹಾಡಿತು
ನಿದಿರೆಯು ಹಾರಿತು
ಈ ಪ್ರೀತಿಯ ಈ ಸೇತುವೆ
ಸೇರದ ದಡಗಳ ಬೆಸೆಯಿತು

|| ಸುರಿವ ಮಳೆಯಲಿ ಕೊರೆಯುವ ಚಳಿ ಚಳಿ
ಬೆರೆವ ಬಯಕೆಯು ನಿನ್ನಯ ತೋಳಲಿ ||

 
ಒಲವಿನ ಜಗದ ಸಿರಿಯ
ಗೆಳೆಯ ನಿನ್ನ ಸಂಗ ಪಡೆದೆ
ಮಲಗಿದ ಬಯಕೆ ಹೆಡೆಯ
ಕೆಣಕಿ ಮನವ ನೀನು ಮಿಡಿದೆ
ಮಿಲನದ ಭಾವ ಕಾಡಿತು
ಸಂಯಮ ಜಾರಿತು
ಎಲ್ಲೇ ಮೇರೆ ಮೀರಿತು
ತನುವಿದು ಸೇರಿತು
ಸಂಗಾತಿಯ ಸಂತೋಷದಿ
ನನ್ನಯ ಬಾಳಿನ ಆಸೆಯು

|| ಸುರಿವ ಮಳೆಯಲಿ ಕೊರೆಯುವ ಚಳಿ ಚಳಿ
ಬೆರೆವ ಬಯಕೆಯು ನಿನ್ನಯ ತೊಳಲಿ
ಒಂಟಿಯಾಗಿತೇ ಬಾರೆ ನೀ ಪ್ರೀತಿಸು ಮನಸಾರೆ
ಬೇಗ ನನ್ನನ್ನು ಸೆರೆ ನಾ ತಾಳೆನು ಜಲಧಾರೆ
ಈ ಚುಂಬನ ರೋಮಾಂಚನ
ಈ ಚುಂಬನ ರೋಮಾಂಚನ ||

Suriva Maleyali song lyrics from Kannada Movie Swathi starring Shashikumar, Sudharani, Vajramuni, Lyrics penned by Shyamasundar Kulkarni Sung by S P Balasubrahmanyam, Chithra, Music Composed by M M Keeravani, film is Directed by Shivamani and film is released on 1994