ಆ….ಆ……ಆ…..ಆ….ಆಆಆಆಆ….
ಪಂಜರದ ಓ ಗಿಣಿಯೇ ……
ಕಣ್ಣನ್ನು ಮುಚ್ಚಿದ ತೆರೆ
ಸರಿಸಿ ಪ್ರಕೃತಿಯ ನೀ ನೋಡು
ಬಂಧನದಿ ಏಕಿರುವೆ
ಬಾಳಿನ ಸುಂದರ ಬಾನಲ್ಲಿ
ಹಾರುತ ನೀ ಹಾಡು
ಇನ್ನು ಈ ಮೌನ ನಿನಗೇಕೆ
ಹೀಗೆ ನೀ ಅಂಜಿ ನಿಲ್ಲಲೇಕೆ
ಇನ್ನು ಈ ಮೌನ ನಿನಗೇಕೆ
ಹೀಗೆ ನೀ ಅಂಜಿ ನಿಲ್ಲಲೇಕೆ
ಬಾ ತೋರಿಸುವೆ
ಈ ಜಗದ ಅಂದ ಚಂದವ
||ಪಂಜರದ ಓ ಗಿಣಿಯೇ ……
ಕಣ್ಣನ್ನು ಮುಚ್ಚಿದ ತೆರೆ
ಸರಿಸಿ ಪ್ರಕೃತಿಯ ನೀ ನೋಡು ||
ತೆಂಗು ನಿನ್ನ ಕೈ ಬೀಸಿ
ಬಳಿ ಕರೆದಿದೆ ಬಾ ಬಾ ಎಂದು
ದಾರಿಯಲ್ಲಿ ಹೂ ಹಾಸಿ
ಸುಖ ಸ್ವಾಗತ ನಿನಗೆಂದು
ತಂಪು ಗಾಳಿ ತಾ ಬೀಸಿ
ಹೊಸ ಚೇತನ ತಂದಿದೆ ಇಲ್ಲಿ
ಜೋಡಿ ಹಕ್ಕಿ ಹಾಡುತಿದೆ
ಶೃತಿ ತಾಳದ ಸ್ವರದಲ್ಲಿ
ಈ ಸೃಷ್ಟಿ ಅಂದ ಕಣ್ಣ ಬಿಟ್ಟು ನೋಡು
ಆ ಹಕ್ಕಿ ಹಾಗೆ ನೀನು ಹಾರಾಡು
ಇನ್ನು ಈ ಶಂಕೆ ಬಿಡಬೇಕು
ಮುಂದೆ ನೀ ಹೆಜ್ಜೆ ಇಡಬೇಕು
ನೀ ಹೊಸ ಕಥೆಯ
ಬರೆ ಗೆಳೆಯ ಇಂದು ಧೈರ್ಯದಿ
||ಪಂಜರದ ಓ ಗಿಣಿಯೇ ……
ಕಣ್ಣನ್ನು ಮುಚ್ಚಿದ ತೆರೆ
ಸರಿಸಿ ಪ್ರಕೃತಿಯ ನೀ ನೋಡು
ಬಂಧನದಿ ಏಕಿರುವೆ
ಬಾಳಿನ ಸುಂದರ ಬಾನಲ್ಲಿ
ಹಾರುತ ನೀ ಹಾಡು ||
ನೋಡು ಬಂತು ಮೆರವಣಿಗೆ
ಹೊಸ ದಂಪತಿ ಜೋಡಿಯಲ್ಲಿ
ಮೇಳ ತಾಳ ಜೊತೆಗೂಡಿ
ನವರಾಗದ ಅಲೆಯಲ್ಲಿ
ಸ್ನೇಹ ಬೇಕು ಬಾಳಲ್ಲಿ
ಇದೆ ಜೀವಕೆ ಅರ್ಥ ನೋಡು
ಧೈರ್ಯ ಬೇಕು ಮನದಲ್ಲಿ
ಈ ಸಂಕೋಲೆ ನೀ ದೂಡು
ಬಂಗಾರದ ಗೂಡು ಸುಖ ಕೊಡದೆಂದು,
ಸ್ವಚ್ಚಂದ ಬಾಳೆ ಸ್ವರ್ಗ ಎಂದೆಂದೂ
ಇನ್ನು ಸಂದೇಹ ನನಗಿಲ್ಲ
ನಿನ್ನ ಸಂದೇಶ ಸಮವಿಲ್ಲ..
ಹೊಸ ದೀಪವನು
ತೋರಿಸಿದೆ ಬಾಳ ದಾರಿಗೆ
|| ಪಂಜರದ ಗಿಣಿಯನ್ನ ……
ಕಣ್ಣನ್ನು ಮುಚ್ಚಿದ ತೆರೆ
ಸರಿಸಿ ಹಾರಿದೆ ನಾ ಮೇಲೆ
ಬಂಧನವೂ ಇನ್ನಿಲ್ಲ. .
ಬಾಳಿನ ಸುಂದರ
ಬಾನಿನಲಿ ಆಡುವೆ ಉಯ್ಯಾಲೆ ||