ಪರದೆ ಎತ್ತಿ ಪನ್ನೀರ ಚೆಲ್ಲಿ
ಹಣೆಗೆ ಬೊಟ್ಟು ಇಟ್ಟೋನೇ...
ತುಟಿಯ ಮೇಲೆ ತುಟಿಯ ಒತ್ತಿ
ಬಿಸಿಯ ಮುತ್ತು ಕೊಟ್ಟೋನೇ..
ಪ್ರೇಮ ಮಂದಿರ ಕಟ್ಟೋಣ ಬಾ
ಸುಖದ ಬಾಗಿಲ ತಟ್ಟೋಣ ಬಾ
ಎಳೆಯ ಪ್ರಾಯ ಅರಳಿದಾಗ ಸುಡುವ
ಬಿಸಿ ಬಿಸಿ ಬಯಕೆಯು ಎದೆಯೊಳಗೆ...
|| ಪರದೆ ಎತ್ತಿ ಪನ್ನೀರ ಚೆಲ್ಲಿ
ಹಣೆಗೆ ಬೊಟ್ಟು ಇಟ್ಟೋನೇ...
ತುಟಿಯ ಮೇಲೆ ತುಟಿಯ ಒತ್ತಿ
ಬಿಸಿಯ ಮುತ್ತು ಕೊಟ್ಟೋನೇ ||
ಕಣ್ಣು ಕಣ್ಣು ಕಲೆತು
ಜೊತೆ ಜೊತೆಗೆ ಜೀವ ಭಾವ ಬೆರೆತು
ಮನಸು ಮನಸು ಅರಿತು
ನಲಿಯುತಲಿ ಲೋಕವನ್ನೇ ಮರೆತು
ತೋಳಲ್ಲಿ ನನ್ನ ತನುವನು ಬಳಸುತ,
ಹರುಷದಿಂದ ಕುಲುಕುತ ಬಳುಕುತ ಬಾ.. ಬಳಿಗೆ ಬಾ..
ಚೆಲುವೆ ದಂತದಲ್ಲಿ ತಿದ್ದಿದಂತ ಚಿನ್ನದಲ್ಲಿ ಅದ್ದಿದಂತ
ಗೊಂಬೆ ನನ್ನ ರಂಭೆ ನಿನ್ನ ಸಂಗವನ್ನು ಬಯಸಿರುವೇ...
|| ಪರದೆ ಎತ್ತಿ ಪನ್ನೀರ ಚೆಲ್ಲಿ
ಹಣೆಗೆ ಬೊಟ್ಟು ಇಟ್ಟೋನೇ...
ತುಟಿಯ ಮೇಲೆ ತುಟಿಯ ಒತ್ತಿ
ಬಿಸಿಯ ಮುತ್ತು ಕೊಟ್ಟೋನೇ ||
ಮೆಚ್ಚಿ ಬಂದ ಚೆಲುವೆ
ಪ್ರೇಮದಲಿ ಹುಚ್ಚನಾದೆ ನಿನಗೆ
ಒಲವೇ ನಮ್ಮ ಒಡವೆ
ಬದುಕಿನಲಿ ನೀನೆ ನಲ್ಲ ನನಗೆ
ಪ್ರಣಯರಾಗ ನುಡಿದಿದೆ ಸರಿಗಮ,
ಮನದ ತುಂಬಾ ಒಲವಿನ ಜುಮಾ ಜುಮಾ
ಬಾ.. ಬಳಿಗೆ ಬಾ...
ಇರುಳು ಹೊತ್ತು ಜಾರಿ ಕತ್ತಲಾಗಿ
ಕತ್ತಲ್ಲಲ್ಲಿ ಬೆತ್ತಲಾಗಿ
ಮುತ್ತಿನಂಥ ಮತ್ತಿನಲ್ಲೆ
ಮತ್ತೇ ಬಂದೆ ನಿನ್ನ ಬಳಿಗೆ
ಬೆನ್ನ ಹಿಂದೆ ಗುಟ್ಟಾಗಿ ಬಂದು
ನನ್ನ ಕಣ್ಣ ಮುಚ್ಚೋಳೆ
ಮೈಗೆ ಮೈಯಿ ಟಚ್ ಆದ ಮೇಲೆ
ಮನದ ಆಸೆ ಬಿಚ್ಚೋಳೇ
ಮುಗಿಲ ಮಿಂಚಿನ ಚಿಂತಾಮಣಿ
ನಗುವ ಚೆಲುವಿನ ಚೂಡಾಮಣಿ
ನಿನ್ನ ನೋಟ ಮೈಯ ಮಾಟ
ಮನವ ಕೆಣಕಲು ಚಳಿ ಚಳಿ ಎದೆಯೊಳಗೆ
|| ಪರದೆ ಎತ್ತಿ ಪನ್ನೀರ ಚೆಲ್ಲಿ
ಹಣೆಗೆ ಬೊಟ್ಟು ಇಟ್ಟೋನೇ...
ತುಟಿಯ ಮೇಲೆ ತುಟಿಯ ಒತ್ತಿ
ಬಿಸಿಯ ಮುತ್ತು ಕೊಟ್ಟೋನೇ..||