Manasu Balangochi Lyrics

in Super Shastry

Video:

LYRIC

ಮನಸ್ಸು ಬಾಲಂಗೋಚಿ ಶುರುವಾಯ್ತು ಟಪ್ಪಾಂಗುಚ್ಚಿ
ಮನಸ್ಸು ಬಾಲಂಗೋಚಿ ಶುರುವಾಯ್ತು ಟಪ್ಪಾಂಗುಚ್ಚಿ
ಅವಳ್ಮುಂದೆ ನಾನು ಪಾಗಲ್‌ ಅವಳ್‌ ಕಣ್ಣೆ ನನಗೆ ಗೂಗಲ್‌
ಆ ನಗುವೆ ಸಾಕು ಸ್ಯಾಂಪಲ್‌ ಲೈಫೆ ಹೌಸ್ ಫುಲ್‌
ಮನಸ್ಸು ಬಾಲಂಗೋಚಿ ಶುರುವಾಯ್ತು ಟಪ್ಪಾಂಗುಚ್ಚಿ
 
ಆ ಹಂಸಲೇಖ ಬರೆಯೊ ಹಾಗೆ ನಾನು ಕವಿಯು ಅಲ್ಲ
ಆದ್ರೂನು ನನಗೆ ಪ್ರೇಮಲೋಕ ಕಟ್ಟಿಕೊಟ್ಟೆಯಲ್ಲ
ಯೋಗರಾಜ್‌ ಭಟ್ರ ಮುಂಗಾರುಮಳೆ ನಾನು ಸುರಿಸಲಿಲ್ಲ
ಆದ್ರೂನು ನನ್ನ ಮನದ ಹೃದಯ ನೀನು ಗೆದ್ದೆಯಲ್ಲ
ಪಾಠನೆ ಓದೆ ಇಲ್ಲ ಎಕ್ಸಾಮ್‌ ಬರದೆ ಇಲ್ಲ
ಆದ್ರೂನು ರ್ಯಾಂಕ್‌ ಬಂದಂಗೆ
ಕಣ್ಮುಚ್ಚಿ ಕುಂತೆ ಇಲ್ಲ ನಿದ್ರೇನ ಮಾಡೆ ಇಲ್ಲ
ಆದ್ರೂನು ಕನಸ್ಸು ಬಂದಂಗೆ
ಮಿಣುಕ ಮಿಣುಕ ಕಣ್ಣಿನ ಒಳಗೆ
ಏನೊ ಪುಳಕ ಪುಳಕ
ಅರೆ ನೆಟ್ಟಗೆ  ಇದ್ದ ಹೃದಯ ಕೂಡ ಆಯ್ತು ತಳಕಂಬಳಕ
 
||ಮನಸ್ಸು ಬಾಲಂಗೋಚಿ ಶುರುವಾಯ್ತು ಟಪ್ಪಾಂಗುಚ್ಚಿ||
 
ಅದು ಯಾಕೊ ಏನೊ ನಿನ್ನ ಕಂಡ್ರೆ ತುಂಬ ಇಷ್ಟ ನಂಗೆ
ಅದು ಎಷ್ಟು ಕಾಲ ಆದ್ರು ಮರೆಯದ ಟೈಟಾನಿಕ್ಕಂಗೆ
ಇನ್ಮುಂದೆಯಾವುದೆ ಸ್ಟೋರಿ ರೈಟರ್‌ ಸಿಕ್ಕಿದರೆ ನಂಗೆ
ನಮ್ಮಿಬ್ರ ಲವ್‌ ಸೀನ್ಸ್‌ ಬರೆಯದೆ ಹೋಗ್ಲೆಬಾರ್ದು ಹಂಗೆ
ನಾ ನಿನ್ನ ಮುಟ್ಲೆ ಇಲ್ಲ ಕೆನನೆನ ತಟ್ಲೆ ಇಲ್ಲ
ಆದ್ರೂನು ಜ್ವರ ಬಂದಂಗೆ
ಮೈಕನ್ನ ಹಿಡಿಲೆ ಇಲ್ಲ ಗಿಟಾರ್‌ ಬಾರ್ಸ್ಲೆ ಇಲ್ಲ
ಆದ್ರೂನು ಸ್ವರ ಬಂದಂಗೆ
ಮಿಣುಕ ಮಿಣುಕ ಕಣ್ಣಿನ ಒಳಗೆ
ಏನೊ ಪುಳಕ ಪುಳಕ
ಅರೆ ನೆಟ್ಟಗೆ  ಇದ್ದ ಹೃದಯ ಕೂಡ ಆಯ್ತು ತಳಕಂಬಳಕ
 
||ಮನಸ್ಸು ಬಾಲಂಗೋಚಿ ಶುರುವಾಯ್ತು ಟಪ್ಪಾಂಗುಚ್ಚಿ
ಅವಳ್ಮುಂದೆ ನಾನು ಪಾಗಲ್‌ ಅವಳ್‌ ಕಣ್ಣೆ ನನಗೆ ಗೂಗಲ್‌
ಆ ನಗುವೆ ಸಾಕು ಸ್ಯಾಂಪಲ್‌ ಲೈಫೆ ಹೌಸ್ ಫುಲ್‌||

Manasu Balangochi song lyrics from Kannada Movie Super Shastry starring Prajwal Devaraj, Haripriya, Bullet Prakash, Lyrics penned by K Kalyan Sung by Prasanna, Chorus, Music Composed by Deva, film is Directed by Raviraj and film is released on 2012