Ninna Thaaynelava Lyrics

in Super Nanna Maga

Video:

LYRIC

-
ನಿನ್ನ ತಾಯ್ನೆಲವ ನಿನ್ನ ತಾಯ್ನುಡಿಯ
ಜನ್ಮ ಜನ್ಮದಲೂ ಮರೆಯದಿರು
ದಿವ್ಯ ವೈಭವದಿ ಒಮ್ಮೆ ಮೆರೆದಿಹುದು
ಇಂಥ ನಾಡ ಕಡೆಗಣಿಸದಿರು
ಏಳು ಏಳು ಕನ್ನಡಿಗ
ನಿನ್ನನ್ನೆ ನಂಬಿದೆ ಈ ಬಳಗ
 
||ನಿನ್ನ ತಾಯ್ನೆಲವ ನಿನ್ನ ತಾಯ್ನುಡಿಯ
ಜನ್ಮ ಜನ್ಮದಲೂ ಮರೆಯದಿರು
ದಿವ್ಯ ವೈಭವದಿ ಒಮ್ಮೆ ಮೆರೆದಿಹುದು
ಇಂಥ ನಾಡ ಕಡೆಗಣಿಸದಿರು
ಏಳು ಏಳು ಕನ್ನಡಿಗ
ನಿನ್ನನ್ನೆ ನಂಬಿದೆ ಈ ಬಳಗ||
 
ಶತ್ರು ಬಂದರೆ ಖಡ್ಗದುತ್ತರ
ನೀಡುತ ಅಟ್ಟುವ ಮನೆವರೆಗು
ತಾಯ್ನುಡಿ ಮರೆವಂತ ಜನರ
ನಾಲಿಗೆಯ ಸೀಳಿರಿ
ಉಪ್ಪು ಉಂಡ ನೆಲ ಋಣವ
ದುಡಿದಷ್ಟು ತೀರದು ಈ ಜನುಮ
ಉಸಿರು ಮಿಡಿಯುವ ತನಕ
ಈ ಮಾತೃಭಾಷೆಯೆ ಪ್ರಥಮ
ಏಳು ಏಳು ಕನ್ನಡಿಗ
ನಿನ್ನನ್ನೆ ನಂಬಿದೆ ಈ ಬಳಗ
 
||ನಿನ್ನ ತಾಯ್ನೆಲವ ನಿನ್ನ ತಾಯ್ನುಡಿಯ
ಜನ್ಮ ಜನ್ಮದಲೂ ಮರೆಯದಿರು
ದಿವ್ಯ ವೈಭವದಿ ಒಮ್ಮೆ ಮೆರೆದಿಹುದು
ಇಂಥ ನಾಡ ಕಡೆಗಣಿಸದಿರು
ಏಳು ಏಳು ಕನ್ನಡಿಗ
ನಿನ್ನನ್ನೆ ನಂಬಿದೆ ಈ ಬಳಗ||
 
ಕವಿವರೇಣ್ಯರು ದಾಸಶ್ರೇಷ್ಟರು
ಕನಕಪುರಂದರ ಸರ್ವಜ್ಞ
ಪುಣ್ಯ ಪುರುಷರು ವೀರ ಸ್ತ್ರೀಯರು
ಮೆರೆದ ಪರಾಕ್ರಮದ ಯಜ್ಞ
ಕಾಯಕ ಕೈಲಾಸವು ಎಂದ ಬಸವಣ್ಣರ ನಾಡಿದು
ದೀನಜನರ ಸಂತೈಸೊ ಗುರುರಾಘವೇಂದ್ರರ ಭೂಮಿ
ಈ ಮಹಾತ್ಮ ಜನರನ್ನ ಸ್ಮರಿಸೋನೆ ನಾಡ ಪ್ರೇಮಿ
ಏಳು ಏಳು ಕನ್ನಡಿಗ
ನಿನ್ನ್ನೆ ನಂಬಿದೆ ಈ ಬಳಗ
 
||ನಿನ್ನ ತಾಯ್ನೆಲವ ನಿನ್ನ ತಾಯ್ನುಡಿಯ
ಜನ್ಮ ಜನ್ಮದಲೂ ಮರೆಯದಿರು
ದಿವ್ಯ ವೈಭವದಿ ಒಮ್ಮೆ ಮೆರೆದಿಹುದು
ಇಂಥ ನಾಡ ಕಡೆಗಣಿಸದಿರು
ಏಳು ಏಳು ಕನ್ನಡಿಗ
ನಿನ್ನನ್ನೆ ನಂಬಿದೆ ಈ ಬಳಗ||
 
||ನಿನ್ನ ತಾಯ್ನೆಲವ ನಿನ್ನ ತಾಯ್ನುಡಿಯ
ಜನ್ಮ ಜನ್ಮದಲೂ ಮರೆಯದಿರು
ದಿವ್ಯ ವೈಭವದಿ ಒಮ್ಮೆ ಮೆರೆದಿಹುದು
ಇಂಥ ನಾಡ ಕಡೆಗಣಿಸದಿರು
ಏಳು ಏಳು ಕನ್ನಡಿಗ
ನಿನ್ನನ್ನೆ ನಂಬಿದೆ ಈ ಬಳಗ||
 

Ninna Thaaynelava song lyrics from Kannada Movie Super Nanna Maga starring Jaggesh, Swathi Ganguli, Bank Janardhan, Lyrics penned by V Manohar Sung by Manu, Music Composed by V Manohar, film is Directed by G K Mudduraj and film is released on 1992