ಬಾರಯ್ಯ ಸಂಜೆಗೆ ಕೆಮ್ಮಣ್ಣುಗುಂಡಿಗೆ
ನನ್ನ ತಳವಾರ
ತಂಗಾಳಿ ಮಂಜಿಗೆ ತಂಗೋಣ ರಾತ್ರಿಗೆ
ನಾಳೆ ಶನಿವಾರ
ಜೀಕು ಜೀಕೆಂದು ಜೋಕಾಲಿ ಆಡುಮ
ಗಂಡ ಹೆಂಡೀರ ಆಟವ ಆಡುಮ
ಅಲ್ಲಿ ಮಣ್ಣಲ್ಲಿ ಪುಟ್ಟ ಪಾಪು ಮಾಡುಮ
ಲಾಲಿ ಸುವ್ವಾಲಿ ಜೋಗುಳ ಹಾಡುಮ
ಮುದ್ದಾದ ಸಂಪಿಗೆ ಮದ್ದೂರ ಸಂತೆಗೆ
ಬಾರೆ ನಳಿನಾಕ್ಷಿ
ಒತ್ತಾರೆ ಬಸ್ಸಿಗೆ ಹೋಗುಮ ಅಲ್ಲಿಗೆ
ಬಾರೆ ಹರಿಣಾಕ್ಷಿ
ರಾತ್ರಿ ತೊಟ್ಲಾಗೆ ಸರಸರ ಕುರುಮ
ತಲೆಗಿರಂತ ಸುತ್ತೊಗಂಟ ಸುತ್ತುಮ
ಸಂತೆ ಸುತ್ತಾಡಿ ಮಂಡ್ಯಕ್ಕೆ ಹೋಗುಮ
ಸಕ್ಕರೆ ಕಾರ್ಖಾನೆ ತೋರುಸ್ತೀನಿ ಬಾರಮ್ಮ
ಮಾಯಸಂದ್ರದ ಮಾರನೆ ನಿನ್ ಮಾತು ರಸಗುಲ್ಲ
ಪ್ರಾಯ ಚೆಂದ ಆಸೆ ಚೆಂದ ಪ್ರೀತಿ ಬಿಸಿ ಬೆಲ್ಲ
ಘಾಸಿ ಹದ ಬಿಸಿಮಾಡಿದ ಸಿಹಿ ಪಾಕ ನೀ ಹುಡುಗಿ
ಹಾಗೆ ಕುಡಿದರು ಹೀಗೆ ಸವಿದರು ತೀರದ ಸೊಬಗಿ
ಬಾರೊ ರಂಗನತಿಟ್ಟು ಪಕ್ಷಿಧಾಮಕ್ಕೆ
ಗಿಣಿ ಗುಬ್ಬಚ್ಚಿ ಹಂಗೆ ಮುದ್ದು ಮಾಡೋಕೆ
ಲಡ್ಡು ಬಾಸುಂದಿ ಮೈಯ್ಯಿನ ಮೇನಕ
ಬಾರೆ ಕೊಡ್ತೀನಿ ಹೊಟ್ಟೆ ತುಂಬ ಪಾನಕ
ಹೋಯ್ ಮಳವಳ್ಳಿ ಟೆಂಟ್ನಾಗೆ ನೋಡುಮ ಸಂಜೆಗೆ
ಭಂಡ ನನ್ನ ಗಂಡ
ಚಿರೋಟಿ ಸಜ್ಜಿಗೆ ಒಬ್ಬಟ್ಟು ಹೋಳಿಗೆ
ತಿನ್ನಿಸೊ ನನ್ನ ಪುಂಡ
ಸಿಹಿ ಜೇನೆನೆ ಮೋರೆ ಮ್ಯಾಗೆ ಐತೆ
ತುಟಿ ಕೆನ್ನೆ ಗಲ್ಲ ಜಿನುಗೈತೆ
ಇಂತ ಸೋಂಬೇರಿ ಮಾತುಕತೆ ಬೇಡ
ತಾರೊ ಸೊಗಸಾದ ಧಾರವಾಡ ಪೇಡ
ಸೊಂಟ ಕಬ್ಬಿನ ಜಲ್ಲೆಯೊ
ನಿಂದು ರಾಮನಗರನ
ಚೆನ್ನಪಟ್ಟಣದ ಗೊಂಬೆನ
ಸೊಗಸಾದ ನಿಂಬೆನ
ದಾಹ ಬಿಗಿದರೆ ಹಿಗ್ಗುವ ಉಬ್ಬುಸಾಲ ಕೊಡಿಸಯ್ಯ
ಆಸೆ ತಣಿಸುವ ತಂಪಿನ ಮದುಪಾನ ಕುಡಿಸಯ್ಯ
ಕೀರು ಜಿಲೇಬಿ ಶ್ಯಾವಿಗೆ ಪಾಯಸ
ನಿನ್ನ ಅಂಗಾಂಗ ಜಹಂಗೀರು ಬಾದುಷ
ಬೆಣ್ಣೆ ಸವಿಯೋಣ ಸೇರಿ ನಾಗಮಂಗಲ
ರಾತ್ರಿ ಹೀರೋಣ ಹಾಲು ಬೆಳದಿಂಗಳ
||ಮುದ್ದಾದ ಸಂಪಿಗೆ ಮದ್ದೂರ ಸಂತೆಗೆ
ಬಾರೆ ನಳಿನಾಕ್ಷಿ
ಒತ್ತಾರೆ ಬಸ್ಸಿಗೆ ಹೋಗುಮ ಅಲ್ಲಿಗೆ
ಬಾರೆ ಹರಿಣಾಕ್ಷಿ
ರಾತ್ರಿ ತೊಟ್ಲಾಗೆ ಸರಸರ ಕುರುಮ
ತಲೆಗಿರಂತ ಸುತ್ತೊಗಂಟ ಸುತ್ತುಮ
ಸಂತೆ ಸುತ್ತಾಡಿ ಮಂಡ್ಯಕ್ಕೆ ಹೋಗುಮ
ಸಕ್ಕರೆ ಕಾರ್ಖಾನೆ ತೋರುಸ್ತೀನಿ ಬಾರಮ್ಮ||