-
ಕನ್ನಡಾಂಬೆ ನಾಡಿನಲ್ಲಿ ಸ್ವರ್ಗವಿದೆ
ಸ್ವರ್ಗವನ್ನು ಮೀರಿಸೊ ನಿಸರ್ಗವಿದೆ
ಪ್ರೀತಿಯಿಂದ ಪ್ರೀತಿ ಪಡೆಯೊ ನಮ್ಮ ಪ್ರಕೃತಿ
ಸಾವಿರಾರು ಕಾಲದಿಂದ ಬಂದ ಸಂಸ್ಕೃತಿ
||ಕನ್ನಡಾಂಬೆ ನಾಡಿನಲ್ಲಿ ಸ್ವರ್ಗವಿದೆ
ಸ್ವರ್ಗವನ್ನು ಮೀರಿಸೊ ನಿಸರ್ಗವಿದೆ||
ಪಂಪನ ಕಾಗಿನೆಲೆ ರನ್ನನ ಸ್ಪೂರ್ತಿಸೆಲೆ
ಶರಣರ ಕೈಲಾಸ ದಾಸರ ವೈಕುಂಠ
ಕಲೆಗಳ ಶೃಂಗಾರ ಕಲಿಗಳ ಔದಾರ್ಯ
ಚಿನ್ನದ ಕೋಲಾರ ಜನಪದ ಸಿಂಗಾರ
ಚರಿತೆಯಲಿ ಕವಿತೆಯಲಿ ಹಿರಿಮೆಗಳ ರಾಯಕುಲ
ಭಕುತಿಯಲಿ ಮುಕುತಿಯಲಿ ಅನುಭವದ ಸಂಘಕುಲ
ಪ್ರೀತಿಯಿಂದ ಪ್ರೀತಿ ಪಡೆಯೊ ನಮ್ಮ ಪ್ರಕೃತಿ
ಸಾವಿರಾರು ಕಾಲದಿಂದ ಬಂದ ಸಂಸ್ಕೃತಿ
||ಕನ್ನಡಾಂಬೆ ನಾಡಿನಲ್ಲಿ ಸ್ವರ್ಗವಿದೆ
ಸ್ವರ್ಗವನ್ನು ಮೀರಿಸೊ ನಿಸರ್ಗವಿದೆ||
ಗಗನವ ಚುಂಬಿಸಿದೆ ಸಹ್ಯಾದ್ರಿ ಗಿರಿಮಾಲೆ
ಧರೆಯನು ನಡುಗಿಸಿದೆ ಜೋಗದ ಜಲದಾರೆ
ಕಡಲಿನ ತಂಗಾಳಿ ಕರೆದಿದೆ ಕೈಬೀಸಿ
ಬಯಲಿನ ತೆನೆರಾಶಿ ಹರಸಿದೆ ಮೈತುಂಬಿ
ಮಲ್ಲಿಗೆಯ ಮನಸ್ಸಿರುವ ಚೆಲುವೆಯರ ಸಿರಿನಾಡು
ವರಿಸಿದರೆ ಒಲವಿಡುವ ಮನಸಿಜರ ಕಲೆನಾಡು
ಪ್ರೀತಿಯಿಂದ ಪ್ರೀತಿ ಪಡೆಯೊ ನಮ್ಮ ಪ್ರಕೃತಿ
ಸಾವಿರಾರು ಕಾಲದಿಂದ ಬಂದ ಸಂಸ್ಕೃತಿ
||ಕನ್ನಡಾಂಬೆ ನಾಡಿನಲ್ಲಿ ಸ್ವರ್ಗವಿದೆ
ಸ್ವರ್ಗವನ್ನು ಮೀರಿಸೊ ನಿಸರ್ಗವಿದೆ||
-
ಕನ್ನಡಾಂಬೆ ನಾಡಿನಲ್ಲಿ ಸ್ವರ್ಗವಿದೆ
ಸ್ವರ್ಗವನ್ನು ಮೀರಿಸೊ ನಿಸರ್ಗವಿದೆ
ಪ್ರೀತಿಯಿಂದ ಪ್ರೀತಿ ಪಡೆಯೊ ನಮ್ಮ ಪ್ರಕೃತಿ
ಸಾವಿರಾರು ಕಾಲದಿಂದ ಬಂದ ಸಂಸ್ಕೃತಿ
||ಕನ್ನಡಾಂಬೆ ನಾಡಿನಲ್ಲಿ ಸ್ವರ್ಗವಿದೆ
ಸ್ವರ್ಗವನ್ನು ಮೀರಿಸೊ ನಿಸರ್ಗವಿದೆ||
ಪಂಪನ ಕಾಗಿನೆಲೆ ರನ್ನನ ಸ್ಪೂರ್ತಿಸೆಲೆ
ಶರಣರ ಕೈಲಾಸ ದಾಸರ ವೈಕುಂಠ
ಕಲೆಗಳ ಶೃಂಗಾರ ಕಲಿಗಳ ಔದಾರ್ಯ
ಚಿನ್ನದ ಕೋಲಾರ ಜನಪದ ಸಿಂಗಾರ
ಚರಿತೆಯಲಿ ಕವಿತೆಯಲಿ ಹಿರಿಮೆಗಳ ರಾಯಕುಲ
ಭಕುತಿಯಲಿ ಮುಕುತಿಯಲಿ ಅನುಭವದ ಸಂಘಕುಲ
ಪ್ರೀತಿಯಿಂದ ಪ್ರೀತಿ ಪಡೆಯೊ ನಮ್ಮ ಪ್ರಕೃತಿ
ಸಾವಿರಾರು ಕಾಲದಿಂದ ಬಂದ ಸಂಸ್ಕೃತಿ
||ಕನ್ನಡಾಂಬೆ ನಾಡಿನಲ್ಲಿ ಸ್ವರ್ಗವಿದೆ
ಸ್ವರ್ಗವನ್ನು ಮೀರಿಸೊ ನಿಸರ್ಗವಿದೆ||
ಗಗನವ ಚುಂಬಿಸಿದೆ ಸಹ್ಯಾದ್ರಿ ಗಿರಿಮಾಲೆ
ಧರೆಯನು ನಡುಗಿಸಿದೆ ಜೋಗದ ಜಲದಾರೆ
ಕಡಲಿನ ತಂಗಾಳಿ ಕರೆದಿದೆ ಕೈಬೀಸಿ
ಬಯಲಿನ ತೆನೆರಾಶಿ ಹರಸಿದೆ ಮೈತುಂಬಿ
ಮಲ್ಲಿಗೆಯ ಮನಸ್ಸಿರುವ ಚೆಲುವೆಯರ ಸಿರಿನಾಡು
ವರಿಸಿದರೆ ಒಲವಿಡುವ ಮನಸಿಜರ ಕಲೆನಾಡು
ಪ್ರೀತಿಯಿಂದ ಪ್ರೀತಿ ಪಡೆಯೊ ನಮ್ಮ ಪ್ರಕೃತಿ
ಸಾವಿರಾರು ಕಾಲದಿಂದ ಬಂದ ಸಂಸ್ಕೃತಿ
||ಕನ್ನಡಾಂಬೆ ನಾಡಿನಲ್ಲಿ ಸ್ವರ್ಗವಿದೆ
ಸ್ವರ್ಗವನ್ನು ಮೀರಿಸೊ ನಿಸರ್ಗವಿದೆ||
Kannadambe Naadinalli Swargavide song lyrics from Kannada Movie Stunt Master starring Siddarth, Sudharani, Sadashiva Saliyan, Lyrics penned by Hamsalekha Sung by Chithra, Music Composed by Hamsalekha, film is Directed by V Chandrahas and film is released on 1996