Elu Kollada Ellamma Lyrics

ಏಳು ಕೊಳ್ಳದ ಎಲ್ಲಮ್ಮ Lyrics

in Sri Renukadevi

in ಶ್ರೀ ರೇಣುಕಾದೇವಿ

LYRIC

Song Details Page after Lyrice

-
ಏಳು ಕೊಳ್ಳದ ಎಲ್ಲಮ್ಮ
ಏಳು ಕೊಳ್ಳದ ಎಲ್ಲಮ್ಮ
ನಿನ್ನ ಕಥೆಯ ಹೇಳುತೀವಿ ಕೇಳಮ್ಮ
ಮಕ್ಕಳು ನಾವು ಮಕ್ಕಳು ನಾವು
ನಿನ್ನ ಮಕ್ಕಳು ನಾವು
 
||ಏಳು ಕೊಳ್ಳದ ಎಲ್ಲಮ್ಮ||
ಕಾಶ್ಮೀರದರಸ ರೇಣುಕ ರಾಜನಿಗೆ  
ಆಹಾ
ಮಕ್ಕಳಿಲ್ಲದಿರಲು                        
ಓಹೊ
ಮಹರ್ಷಿಗಳ ಮಾತಿನಂತೆ  ಯಜ್ಞವಾಯಿತು 
ಹೌದ್ರೀ…
 
ಆಗ ಅಗ್ನಿ ಗರ್ಭದಿಂದ
ಓಹೊ
ಕಮಲದ ಪುಷ್ಪವೊಂದ್‌ ಅರಳಿ
ಅರಳಿ
ಜಗವೆಲ್ಲಾ ಬೆರಗಾಯಿತು
ಓಹೊಹೊ ಉಧೋ ಉಧೋ
 
ಉಧೋ ಉಧೋ ಸುರರತಾಯಿ
ಉಧೋ ಉಧೋ ಅದಿತಿದೇವಿ
ಉಧೋ ಉಧೋ ತಾನೆ ಮಗುವಾಗಿ
ಉದ್ಭವಿಸಿದಳು  ಜಗನ್ಮಾತೆಯಾಗಿ
 
 
ಹೋ
ಇಂತು ರೇಣುಕಾದೇವಿ ಅವತಾರವಾಯಿತು
ಅಂಬರದಿಂದಾಗ ಅಮರರ ಪುಷ್ಪವೃಷ್ಟಿಯಾಯಿತು
ಹೌದ್ರೀ…
ಹೌದ್ರೀ…
 
||ಏಳು ಕೊಳ್ಳದ ಎಲ್ಲಮ್ಮ
ನಿನ್ನ ಕಥೆಯ ಹೇಳುತೀವಿ ಕೇಳಮ್ಮ
ಮಕ್ಕಳು ನಾವು ಮಕ್ಕಳು ನಾವು
ನಿನ್ನ ಒಕ್ಕಲು ನಾವು||
 
ಜಗನ್ಮಾತೆಯು  ಸೇವಿಸಲೊ
ಎಂಬಂತೆ ವಸಂತ ಋತುವೇ
ಯೌವನವಾಯ್ತು
ಧರ್ಮವೇ ಆಕೆ ಮುಡಿವ
ಕಮಲವಾಯ್ತು
 
ಜಲಕ್ರೀಡೆಯಲ್ಲಿರುವಾಗ ಆಹುವು
ಸಂಧ್ಯಾವಂದಿಸುತ್ತಿದ್ದ ಜಮದಗ್ನಿಯ ಕೈಗೆ ಸೇರಿತು
ಭವಬಂಧನವೆಂಬ ಮೊಸಳೆ ದೇವಿಯನ್ನು
ಹಿಡಿಯುವುದನ್ನು ಆಹುದಲ್ಲಿ ಕಂಡ
ಮುನಿ ಕಾರಣಕರ್ತರಾಗಿ ಮೊಸಳೆಯನ್ನು ದಿಗ್ಬಂಧಿಸಿದರು
ಋಷಿಯ ತೇಜೋಮಯ ಹೂಬಾಣಗಳು
ದೇವಿಯ ಕಂಗಳಪ್ರವೇಶಿಸಿತು
 
ಯಾರಿರಬಹುದು ಈ ಸುಂದರಾಂಗ
 ಶೋಭಿತಾಂಗ
 
ಯಾರು ಹೆತ್ತಮಗಳೀ ಸುಮವಾಣಿ
ಲಾವಣ್ಯಲಾವಣಿ
 
ಮನ್ಮಥನೆ ಋಷಿವೇಷ ತೊಟ್ಟುಬಂದನೇ
 
ಸೃಷ್ಟಿಯ ಅಂದವೆಲ್ಲಾ ಹೊತ್ತು ತಂದಳೆ
 
ಕಣ್ಗಳೆರಡು ಸಾಲದಲ್ಲಾ ಅವರ ನೋಡಲು
ಅವರಲ್ಲಿ ಸೇರಲು
 
ಪ್ರೇಮವೇ ಭೇದವಾಯ್ತು ಒಪ್ಪಿಕೊಳ್ಳಲು
ನಾ ಒಪ್ಪಿಕೊಳ್ಳಲು
 
ನನ್ನ ಮಾತ್‌ ಎನ್ನ ಮಾತೆ ಕೇಳದಾಗಿದೆ
 
ನನ್ನ ಮನ ಅವಳ ಮನೆಯಾಗಿ ಹೋಗಿದೆ
 
ಒಹೊ ಒಹೊ ಶುದ್ಧರಿಬ್ಬರರು
ಸದಾ ಸದಾ ವಿರಹದಲ್ಲಿ ಬಿದ್ದರು
ಜಪತಪ ಮರೆತೆಹೋದರು
ಜಗತ್‌ ಕಲ್ಯಾಣಕೆ ಬೀಜವಿತ್ತರು……
 
ಮದುವೆಗೆ ಮಹಾರಾಜರು ಒಪ್ಕೊಂಡ್ರೇನ್ರಿ
ಊಹೂ
ಸಾಮ್ರಾಟ್‌ ರಿಗೆ ಸನ್ಯಾಸಿಗೆ ಸಂಬಂಧವೇ
ಸಹವಾಸವೇ ಸಮಾಗಮವೇ
 
ಇದು ಸಲ್ಲದು ಎಂದ ಮಹಾರಾಜ
 
ಅಯ್ಯಯ್ಯೋ ಅಮೇಲೇ ಎನಾಯ್ತ್ರಿ
 
ಕುಲದೇವತೆ ಭ್ರಮರಾಂಬೆ
ಬಂದು ಬುದ್ದಿ ಹೇಳಿದಳು ರಾಜನಿಗೆ
ಮದುವೆ ಮಾಡು ಮಹಿಮೆಗೆ ನಾಂದಿ ಹಾಡು
ಲೋಕದಿ ನಿನ್ನ ಮಗಳ ಪವಾಡ ನೋಡು
 
||ಏಳು ಕೊಳ್ಳದ ಎಲ್ಲಮ್ಮ||
 
ಅತ್ತೆ ಸತ್ಯವತಿದೇವಿ ರೇಣುಕಾದೇವಿಯನ್ನು
ಸೊಸೆಯಂತಲ್ಲದೆ ಮಗಳಂತೆ ಮನಸಿನಲ್ಲ ಇಟ್ಟುಕೊಂಡಳು
ಹೌದ್ರಿ
ತನ್ನ ಮಗ ಜಮದಗ್ನಿ ಕೈಯಲ್ಲಿ ರೇಣುಕೆಯ ಕೈಯನ್ನು ಇಟ್ಟು ಮಗನೇ ಇಂದಿನಿಂದ
ನೀವು ಇಬ್ಬರಲ್ಲಾ ಒಂದೇ ಎಂದರೂ
 
ಪ್ರಕೃತಿ ಪುರುಷ ರಿಬ್ಬರಲ್ಲಿ ಒಂದಾದರಿಲ್ಲಿ
ಪಾವನ ಜೀವನ ಕರ್ತವಾಗಿಆನಂದವಾಗಿ
ಸುಂದರ ಸೃಷ್ಟಿಯಲ್ಲಿ ಸುಗ್ಗಿ ತಂದರು
ನಲ್ಮೆಯ ನಾಲ್ವರು ಮಕ್ಕಳಾದರು
 
ಸಾಧುಜನ ಸಂರಕ್ಷಣೆ ಮಾಡೋ ಸಂಕಲ್ಪದಿಂದ
ಸಾಕ್ಷಾತ್‌ ಶ್ರೀ ಹರಿ ಸಾಗಿ ಬಂದ
ಸಂತೋಷದಿಂದ
ತಾಯಿ ಗರ್ಭಕ್ಷೇತ್ರದಲ್ಲಿ ವಾಸಮಾಡಿದ
ಅಪರರಾಮಭದ್ರಾವತಾರ ಎತ್ತಿದ
ಯಶೋಧನರು ಐವರು ಮಕ್ಕಳು
ತಪೋವನಗಳಿಗೆ ಸೇರಿಹೋದರು
ನಿರಾಭಯೋಗ ಸಿದ್ದಿಯಲ್ಲಿ ಪ್ರಬುದ್ಧರಾದರೂ ಪ್ರಸಿದ್ಧರಾದರೂ
 
ಜಗಜ್ಜೀವನ ಚಕ್ರದಲ್ಲಿ ಜಮದಗ್ನಿರೇಣುಕೆಯ ಕಾಮಪ್ರೇಮಗಳ ಗ್ರಹಸ್ತಾಶ್ರಮ ತೀರಿತು
ಯಮನಿಯಮಗಳ ವಾನಪ್ರಸ್ಥಕ್ಕೆ ಹೆಜ್ಜೆ ಇಟ್ಟರು
 
ಯಜ್ಞನಿರ್ವಹಣೆಗಾಗಿ ಮಲಪ್ರಭೆಯ ಪುಣ್ಯ ತೀರ್ಥಬೇಕು
ನಾಗರಹಾವಿನ ಸಿಂಬೆ ಮೇಲೆಮರಳಿನ ಮಡಿಕೆಯಲ್ಲಿ ನೀರು ತರಬೇಕು
ಸಾಧ್ವಿಗೆ ಋಷಿಯಾಜ್ಞೆ (ಋಷಿಯಾಜ್ಞೆ ಋಷಿಯಾಜ್ಞೆ ಋಷಿಯಾಜ್ಞೆ ಋಷಿಯಾಜ್ಞೆ)
 
ಕಲ್ಪಕಲ್ಪಾಂತರಗಳಲ್ಲೂಕಂಡುಕೇಳದ ಆಜ್ಞೆಯಮ್ಮ
ಹಾವಿನ ಸಿಂಬೆ ಮರಳಮಡಿಕೆಅದರ ತುಂಬ ನೀರ ತುಂಬಿಹರಸಿ ಕಳಿಸು ಬಂದೆ ನಂಬಿ
ಓಂ ಪತಿದೇವಾಯ ನಮಃ
ಓಂ ಪತಿದೇವಾಯ ನಮಃ
ಉಧೋ ಉಧೋ ಹೇ ರೇಣುಕಾಂಬೆ
ಉಧೋ ಉಧೋ ಪತಿವ್ರತಾಮಣೆ
ಉಧೋ ಉಧೋ ವಜ್ರಸಂಕಲ್ಪೇ
ಉಧೋ ಉಧೋ ಸತ್ಯಸೌಭಾಗ್ಯೆ…ಏಏ
 
||ಏಳು ಕೊಳ್ಳದ ಎಲ್ಲಮ್ಮ
ನಿನ್ನ ಕಥೆಯ ಹೇಳುತೀವಿ ಕೇಳಮ್ಮ
ಮಕ್ಕಳು ನಾವು ಮಕ್ಕಳು ನಾವು
ನಿನ್ನ ಒಕ್ಕಲು ನಾವು||
 
||ಏಳು ಕೊಳ್ಳದ ಎಲ್ಲಮ್ಮ||

-
ಏಳು ಕೊಳ್ಳದ ಎಲ್ಲಮ್ಮ
ಏಳು ಕೊಳ್ಳದ ಎಲ್ಲಮ್ಮ
ನಿನ್ನ ಕಥೆಯ ಹೇಳುತೀವಿ ಕೇಳಮ್ಮ
ಮಕ್ಕಳು ನಾವು ಮಕ್ಕಳು ನಾವು
ನಿನ್ನ ಮಕ್ಕಳು ನಾವು
 
||ಏಳು ಕೊಳ್ಳದ ಎಲ್ಲಮ್ಮ||
ಕಾಶ್ಮೀರದರಸ ರೇಣುಕ ರಾಜನಿಗೆ  
ಆಹಾ
ಮಕ್ಕಳಿಲ್ಲದಿರಲು                        
ಓಹೊ
ಮಹರ್ಷಿಗಳ ಮಾತಿನಂತೆ  ಯಜ್ಞವಾಯಿತು 
ಹೌದ್ರೀ…
 
ಆಗ ಅಗ್ನಿ ಗರ್ಭದಿಂದ
ಓಹೊ
ಕಮಲದ ಪುಷ್ಪವೊಂದ್‌ ಅರಳಿ
ಅರಳಿ
ಜಗವೆಲ್ಲಾ ಬೆರಗಾಯಿತು
ಓಹೊಹೊ ಉಧೋ ಉಧೋ
 
ಉಧೋ ಉಧೋ ಸುರರತಾಯಿ
ಉಧೋ ಉಧೋ ಅದಿತಿದೇವಿ
ಉಧೋ ಉಧೋ ತಾನೆ ಮಗುವಾಗಿ
ಉದ್ಭವಿಸಿದಳು  ಜಗನ್ಮಾತೆಯಾಗಿ
 
 
ಹೋ
ಇಂತು ರೇಣುಕಾದೇವಿ ಅವತಾರವಾಯಿತು
ಅಂಬರದಿಂದಾಗ ಅಮರರ ಪುಷ್ಪವೃಷ್ಟಿಯಾಯಿತು
ಹೌದ್ರೀ…
ಹೌದ್ರೀ…
 
||ಏಳು ಕೊಳ್ಳದ ಎಲ್ಲಮ್ಮ
ನಿನ್ನ ಕಥೆಯ ಹೇಳುತೀವಿ ಕೇಳಮ್ಮ
ಮಕ್ಕಳು ನಾವು ಮಕ್ಕಳು ನಾವು
ನಿನ್ನ ಒಕ್ಕಲು ನಾವು||
 
ಜಗನ್ಮಾತೆಯು  ಸೇವಿಸಲೊ
ಎಂಬಂತೆ ವಸಂತ ಋತುವೇ
ಯೌವನವಾಯ್ತು
ಧರ್ಮವೇ ಆಕೆ ಮುಡಿವ
ಕಮಲವಾಯ್ತು
 
ಜಲಕ್ರೀಡೆಯಲ್ಲಿರುವಾಗ ಆಹುವು
ಸಂಧ್ಯಾವಂದಿಸುತ್ತಿದ್ದ ಜಮದಗ್ನಿಯ ಕೈಗೆ ಸೇರಿತು
ಭವಬಂಧನವೆಂಬ ಮೊಸಳೆ ದೇವಿಯನ್ನು
ಹಿಡಿಯುವುದನ್ನು ಆಹುದಲ್ಲಿ ಕಂಡ
ಮುನಿ ಕಾರಣಕರ್ತರಾಗಿ ಮೊಸಳೆಯನ್ನು ದಿಗ್ಬಂಧಿಸಿದರು
ಋಷಿಯ ತೇಜೋಮಯ ಹೂಬಾಣಗಳು
ದೇವಿಯ ಕಂಗಳಪ್ರವೇಶಿಸಿತು
 
ಯಾರಿರಬಹುದು ಈ ಸುಂದರಾಂಗ
 ಶೋಭಿತಾಂಗ
 
ಯಾರು ಹೆತ್ತಮಗಳೀ ಸುಮವಾಣಿ
ಲಾವಣ್ಯಲಾವಣಿ
 
ಮನ್ಮಥನೆ ಋಷಿವೇಷ ತೊಟ್ಟುಬಂದನೇ
 
ಸೃಷ್ಟಿಯ ಅಂದವೆಲ್ಲಾ ಹೊತ್ತು ತಂದಳೆ
 
ಕಣ್ಗಳೆರಡು ಸಾಲದಲ್ಲಾ ಅವರ ನೋಡಲು
ಅವರಲ್ಲಿ ಸೇರಲು
 
ಪ್ರೇಮವೇ ಭೇದವಾಯ್ತು ಒಪ್ಪಿಕೊಳ್ಳಲು
ನಾ ಒಪ್ಪಿಕೊಳ್ಳಲು
 
ನನ್ನ ಮಾತ್‌ ಎನ್ನ ಮಾತೆ ಕೇಳದಾಗಿದೆ
 
ನನ್ನ ಮನ ಅವಳ ಮನೆಯಾಗಿ ಹೋಗಿದೆ
 
ಒಹೊ ಒಹೊ ಶುದ್ಧರಿಬ್ಬರರು
ಸದಾ ಸದಾ ವಿರಹದಲ್ಲಿ ಬಿದ್ದರು
ಜಪತಪ ಮರೆತೆಹೋದರು
ಜಗತ್‌ ಕಲ್ಯಾಣಕೆ ಬೀಜವಿತ್ತರು……
 
ಮದುವೆಗೆ ಮಹಾರಾಜರು ಒಪ್ಕೊಂಡ್ರೇನ್ರಿ
ಊಹೂ
ಸಾಮ್ರಾಟ್‌ ರಿಗೆ ಸನ್ಯಾಸಿಗೆ ಸಂಬಂಧವೇ
ಸಹವಾಸವೇ ಸಮಾಗಮವೇ
 
ಇದು ಸಲ್ಲದು ಎಂದ ಮಹಾರಾಜ
 
ಅಯ್ಯಯ್ಯೋ ಅಮೇಲೇ ಎನಾಯ್ತ್ರಿ
 
ಕುಲದೇವತೆ ಭ್ರಮರಾಂಬೆ
ಬಂದು ಬುದ್ದಿ ಹೇಳಿದಳು ರಾಜನಿಗೆ
ಮದುವೆ ಮಾಡು ಮಹಿಮೆಗೆ ನಾಂದಿ ಹಾಡು
ಲೋಕದಿ ನಿನ್ನ ಮಗಳ ಪವಾಡ ನೋಡು
 
||ಏಳು ಕೊಳ್ಳದ ಎಲ್ಲಮ್ಮ||
 
ಅತ್ತೆ ಸತ್ಯವತಿದೇವಿ ರೇಣುಕಾದೇವಿಯನ್ನು
ಸೊಸೆಯಂತಲ್ಲದೆ ಮಗಳಂತೆ ಮನಸಿನಲ್ಲ ಇಟ್ಟುಕೊಂಡಳು
ಹೌದ್ರಿ
ತನ್ನ ಮಗ ಜಮದಗ್ನಿ ಕೈಯಲ್ಲಿ ರೇಣುಕೆಯ ಕೈಯನ್ನು ಇಟ್ಟು ಮಗನೇ ಇಂದಿನಿಂದ
ನೀವು ಇಬ್ಬರಲ್ಲಾ ಒಂದೇ ಎಂದರೂ
 
ಪ್ರಕೃತಿ ಪುರುಷ ರಿಬ್ಬರಲ್ಲಿ ಒಂದಾದರಿಲ್ಲಿ
ಪಾವನ ಜೀವನ ಕರ್ತವಾಗಿಆನಂದವಾಗಿ
ಸುಂದರ ಸೃಷ್ಟಿಯಲ್ಲಿ ಸುಗ್ಗಿ ತಂದರು
ನಲ್ಮೆಯ ನಾಲ್ವರು ಮಕ್ಕಳಾದರು
 
ಸಾಧುಜನ ಸಂರಕ್ಷಣೆ ಮಾಡೋ ಸಂಕಲ್ಪದಿಂದ
ಸಾಕ್ಷಾತ್‌ ಶ್ರೀ ಹರಿ ಸಾಗಿ ಬಂದ
ಸಂತೋಷದಿಂದ
ತಾಯಿ ಗರ್ಭಕ್ಷೇತ್ರದಲ್ಲಿ ವಾಸಮಾಡಿದ
ಅಪರರಾಮಭದ್ರಾವತಾರ ಎತ್ತಿದ
ಯಶೋಧನರು ಐವರು ಮಕ್ಕಳು
ತಪೋವನಗಳಿಗೆ ಸೇರಿಹೋದರು
ನಿರಾಭಯೋಗ ಸಿದ್ದಿಯಲ್ಲಿ ಪ್ರಬುದ್ಧರಾದರೂ ಪ್ರಸಿದ್ಧರಾದರೂ
 
ಜಗಜ್ಜೀವನ ಚಕ್ರದಲ್ಲಿ ಜಮದಗ್ನಿರೇಣುಕೆಯ ಕಾಮಪ್ರೇಮಗಳ ಗ್ರಹಸ್ತಾಶ್ರಮ ತೀರಿತು
ಯಮನಿಯಮಗಳ ವಾನಪ್ರಸ್ಥಕ್ಕೆ ಹೆಜ್ಜೆ ಇಟ್ಟರು
 
ಯಜ್ಞನಿರ್ವಹಣೆಗಾಗಿ ಮಲಪ್ರಭೆಯ ಪುಣ್ಯ ತೀರ್ಥಬೇಕು
ನಾಗರಹಾವಿನ ಸಿಂಬೆ ಮೇಲೆಮರಳಿನ ಮಡಿಕೆಯಲ್ಲಿ ನೀರು ತರಬೇಕು
ಸಾಧ್ವಿಗೆ ಋಷಿಯಾಜ್ಞೆ (ಋಷಿಯಾಜ್ಞೆ ಋಷಿಯಾಜ್ಞೆ ಋಷಿಯಾಜ್ಞೆ ಋಷಿಯಾಜ್ಞೆ)
 
ಕಲ್ಪಕಲ್ಪಾಂತರಗಳಲ್ಲೂಕಂಡುಕೇಳದ ಆಜ್ಞೆಯಮ್ಮ
ಹಾವಿನ ಸಿಂಬೆ ಮರಳಮಡಿಕೆಅದರ ತುಂಬ ನೀರ ತುಂಬಿಹರಸಿ ಕಳಿಸು ಬಂದೆ ನಂಬಿ
ಓಂ ಪತಿದೇವಾಯ ನಮಃ
ಓಂ ಪತಿದೇವಾಯ ನಮಃ
ಉಧೋ ಉಧೋ ಹೇ ರೇಣುಕಾಂಬೆ
ಉಧೋ ಉಧೋ ಪತಿವ್ರತಾಮಣೆ
ಉಧೋ ಉಧೋ ವಜ್ರಸಂಕಲ್ಪೇ
ಉಧೋ ಉಧೋ ಸತ್ಯಸೌಭಾಗ್ಯೆ…ಏಏ
 
||ಏಳು ಕೊಳ್ಳದ ಎಲ್ಲಮ್ಮ
ನಿನ್ನ ಕಥೆಯ ಹೇಳುತೀವಿ ಕೇಳಮ್ಮ
ಮಕ್ಕಳು ನಾವು ಮಕ್ಕಳು ನಾವು
ನಿನ್ನ ಒಕ್ಕಲು ನಾವು||
 
||ಏಳು ಕೊಳ್ಳದ ಎಲ್ಲಮ್ಮ||

Elu Kollada Ellamma song lyrics from Kannada Movie Sri Renukadevi starring Saikumar, Soundarya, Jayaprada, Lyrics penned by Hamsalekha Sung by Sriranjini, Chetan Sosca, Music Composed by Hamsalekha, film is Directed by Nagendra Magadi (Pandu) and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ