ಎಲ್ಲಿಯ ಎಲೆಯೋ
ಎಲ್ಲಿಯ ಅಡಿಕೆಯೋ
ಎಲ್ಲಿಯ ಎಲೆಯೋ
ಎಲ್ಲಿಯ ಅಡಿಕೆಯೋ
ಸುಣ್ಣವು ಸೇರಲು ತಾಂಬೂಲ
ರಸ ತಾಂಬೂಲ…
ಎಲ್ಲಿಯ ಹುಡುಗನೋ
ಎಲ್ಲಿಯ ಹುಡುಗಿಯೋ
ತಾಳಿಯ ಕಟ್ಟಲು ಸಂಸಾರ
ಹೊಸ ಸಂಸಾರ..ಸುಖ ಸಂಸಾರ
|| ಎಲ್ಲಿಯ ಎಲೆಯೋ
ಎಲ್ಲಿಯ ಅಡಿಕೆಯೋ
ಸುಣ್ಣವು ಸೇರಲು ತಾಂಬೂಲ
ಎಲ್ಲಿಯ ಹುಡುಗನೋ
ಎಲ್ಲಿಯ ಹುಡುಗಿಯೋ
ತಾಳಿಯ ಕಟ್ಟಲು ಸಂಸಾರ….||
ಮದುವೆ ಮದುವೆ ಈ ಮದುವೆ
ಇದು ಬಿಡಿಸದ ಬಂಧನ ಈ ಮದುವೆ
ಮದುವೆ ಮದುವೆ ಈ ಮದುವೆ
ಇದು ಬಿಡಿಸದ ಬಂಧನ ಈ ಮದುವೆ
ಇಷ್ಟು ಕಾಲವು ಕಷ್ಟ ಕಾಣದೆ
ಇದ್ದ ಬ್ರಹ್ಮಚಾರಿ…
ಇಷ್ಟದಿಂದಲೇ ಆಗ ಹೊರಟಿಹ
ಇಂದು ಸಂಸಾರಿ…
ಅಂದ ಚೆಂದ ತುಂಬಿ
ನಿನಗೆ ಕಾದಿಹಳು ಚೆಲುವೆ…
ಅಂತ ರೂಪ ಕಂಡು
ನೀನು ಸೋತು ಶರಣೆನುವೆ
ಅವಳ ಕೈಯ ಹಿಡಿದು
ನೀನು ಬಾಳಲಿ ಸುಖ ಪಡುವೆ…
ಮದುವೆ ಮದುವೆ ಈ ಮದುವೆ
ಹೊಸ ಪ್ರೇಮದ ಬಂಧನ ಈ ಮದುವೆ
ಮದುವೆ ಮದುವೆ ಈ ಮದುವೆ
ಹೊಸ ಪ್ರೇಮದ ಬಂಧನ ಈ ಮದುವೆ
ತಮ್ಮ ನಾನು ನುಡಿವುದೆಲ್ಲಾ
ಅನುಭವದ ಮಾತೆ…
ಇದೇ ನಿನ್ನ ಪಾಲಿಗೆ ಭಗವದ್ಗೀತೆ
ನಿನ್ನ ಬಾಯಿಗೆ ಎಂದೂ ಬೀಗ ಹಾಕಿಕೋ
ಮಡದಿ ನುಡಿವುದೆಲ್ಲ ಸರಿ ಎಂದು ಒಪ್ಪಿಕೋ
ಅವಳಂತೆ ಕುಣಿದರೆ ನಿನಗೆ ಸಿಗುವುದೂಟ
ಇಲ್ಲದಿದ್ದರೆ ಬಾಳೇ ಕಾಳಿಯ ಕಾಟ…
ಅವಳಂತೆ ಕುಣಿದರೆ ನಿನಗೆ ಸಿಗುವುದೂಟ
ಅರೆ ಇಲ್ಲದಿದ್ದರೆ ಬಾಳೇ ಕಾಳಿಯ ಕಾಟ…
ತಮ್ಮ..ತಮ್ಮ..ಪ್ರೀತಿಯ ತಮ್ಮ…
ಇದೇನೇ ಬಾಳಿನ ಗುಟ್ಟು ತಮ್ಮ…
ಮದುವೆ ಮದುವೆ ಈ ಮದುವೆ
ಶರಣಾದರೆ ಬಾಳಲಿ ನೀ ನಲಿವೆ
ಮದುವೆ ಮದುವೆ ಈ ಮದುವೆ
ಶರಣಾದರೆ ಬಾಳಲಿ ನೀ ನಲಿವೆ
ಆಸೆ ತುಂಬಿದ ಕಣ್ಣಿಗೆ
ನಾ ಹಚ್ಚುವೆನು ಕಾಡಿಗೆ…
ಆಸೆ ತುಂಬಿದ ಕಣ್ಣಿಗೆ
ನಾ ಹಚ್ಚುವೆನು ಕಾಡಿಗೆ…
ಮುಡಿಸುವೆ ನಾ ಮಲ್ಲಿಗೆ
ಬಂಗಾರದ ಬೊಂಬೆಗೆ
ಬೊಟ್ಟನು ಹಿಡುವೆ
ನಾನು ಬೊಟ್ಟನು ಹಿಡುವೆ
ಲಜ್ಜೆಯಿಂದ ಕೆಂಪಗಾದ ಕೆನ್ನೆಗೆ
ರಾಯ ಬರುವನು ಮೆಲ್ಲಗೆ
ಮುತ್ತನಿಡುವನು ಅಲ್ಲಿಗೆ…
ಮದುವೆ ಮದುವೆ ಈ ಮದುವೆ
ಹೊಸ ಬಾಳಿಗೆ ನಾಂದಿಯು ಈ ಮದುವೆ
ಮದುವೆ ಮದುವೆ ಈ ಮದುವೆ
ಹೊಸ ಬಾಳಿಗೆ ನಾಂದಿಯು ಈ ಮದುವೆ
ಹಸೆಯ ಮೇಗಡೆ ಕುಳಿತ ಜೋಡಿಯ
ಹರಸಿ ಬನ್ನಿರಮ್ಮಾ…
ಹರುಷ ಹೊಮ್ಮಲಿ ಸುಖವು ಚಿಮ್ಮಲಿ
ಎಂದು ಹರಸಮ್ಮಾ…
ತೌರ ಮನೆಯಿದು ಹೊಕ್ಕ ಮನೆಯದು
ಇದಕೆ ನೀನೇ ಬೆಳಕು…
ನಿನ್ನ ಮಡಿಲಲಿ ಬೇಗ ಕುಣಿಯಲಿ
ಹೊಸದು ವಂಶ ಬೆಳಕು…
ಪ್ರೇಮ ಸಹನೆಶೀಲ
ಮೂರು ಗಂಟಿನ ಈ ಬಂಧ
ನಿಮ್ಮ ಬೆಸೆವ ನಂಟು
ಜೀವ ಜೀವದ ಸಂಬಂಧ
ನಿಮಗೆ ತರಲಿ ದಿನವೂ ದಿನವೂ
ನೂತನ ಆನಂದ…
ಮದುವೆ ಮದುವೆ ಈ ಮದುವೆ
ಹೊಸ ಪ್ರೇಮದ ಬಂಧನ ಈ ಮದುವೆ
ಮದುವೆ ಮದುವೆ ಈ ಮದುವೆ
ಇದು ಬಿಡಿಸದ ಬಂಧನ ಈ ಮದುವೆ
ಎಲ್ಲಿಯ ಎಲೆಯೋ
ಎಲ್ಲಿಯ ಅಡಿಕೆಯೋ
ಎಲ್ಲಿಯ ಎಲೆಯೋ
ಎಲ್ಲಿಯ ಅಡಿಕೆಯೋ
ಸುಣ್ಣವು ಸೇರಲು ತಾಂಬೂಲ
ರಸ ತಾಂಬೂಲ…
ಎಲ್ಲಿಯ ಹುಡುಗನೋ
ಎಲ್ಲಿಯ ಹುಡುಗಿಯೋ
ತಾಳಿಯ ಕಟ್ಟಲು ಸಂಸಾರ
ಹೊಸ ಸಂಸಾರ..ಸುಖ ಸಂಸಾರ
|| ಎಲ್ಲಿಯ ಎಲೆಯೋ
ಎಲ್ಲಿಯ ಅಡಿಕೆಯೋ
ಸುಣ್ಣವು ಸೇರಲು ತಾಂಬೂಲ
ಎಲ್ಲಿಯ ಹುಡುಗನೋ
ಎಲ್ಲಿಯ ಹುಡುಗಿಯೋ
ತಾಳಿಯ ಕಟ್ಟಲು ಸಂಸಾರ….||
ಮದುವೆ ಮದುವೆ ಈ ಮದುವೆ
ಇದು ಬಿಡಿಸದ ಬಂಧನ ಈ ಮದುವೆ
ಮದುವೆ ಮದುವೆ ಈ ಮದುವೆ
ಇದು ಬಿಡಿಸದ ಬಂಧನ ಈ ಮದುವೆ
ಇಷ್ಟು ಕಾಲವು ಕಷ್ಟ ಕಾಣದೆ
ಇದ್ದ ಬ್ರಹ್ಮಚಾರಿ…
ಇಷ್ಟದಿಂದಲೇ ಆಗ ಹೊರಟಿಹ
ಇಂದು ಸಂಸಾರಿ…
ಅಂದ ಚೆಂದ ತುಂಬಿ
ನಿನಗೆ ಕಾದಿಹಳು ಚೆಲುವೆ…
ಅಂತ ರೂಪ ಕಂಡು
ನೀನು ಸೋತು ಶರಣೆನುವೆ
ಅವಳ ಕೈಯ ಹಿಡಿದು
ನೀನು ಬಾಳಲಿ ಸುಖ ಪಡುವೆ…
ಮದುವೆ ಮದುವೆ ಈ ಮದುವೆ
ಹೊಸ ಪ್ರೇಮದ ಬಂಧನ ಈ ಮದುವೆ
ಮದುವೆ ಮದುವೆ ಈ ಮದುವೆ
ಹೊಸ ಪ್ರೇಮದ ಬಂಧನ ಈ ಮದುವೆ
ತಮ್ಮ ನಾನು ನುಡಿವುದೆಲ್ಲಾ
ಅನುಭವದ ಮಾತೆ…
ಇದೇ ನಿನ್ನ ಪಾಲಿಗೆ ಭಗವದ್ಗೀತೆ
ನಿನ್ನ ಬಾಯಿಗೆ ಎಂದೂ ಬೀಗ ಹಾಕಿಕೋ
ಮಡದಿ ನುಡಿವುದೆಲ್ಲ ಸರಿ ಎಂದು ಒಪ್ಪಿಕೋ
ಅವಳಂತೆ ಕುಣಿದರೆ ನಿನಗೆ ಸಿಗುವುದೂಟ
ಇಲ್ಲದಿದ್ದರೆ ಬಾಳೇ ಕಾಳಿಯ ಕಾಟ…
ಅವಳಂತೆ ಕುಣಿದರೆ ನಿನಗೆ ಸಿಗುವುದೂಟ
ಅರೆ ಇಲ್ಲದಿದ್ದರೆ ಬಾಳೇ ಕಾಳಿಯ ಕಾಟ…
ತಮ್ಮ..ತಮ್ಮ..ಪ್ರೀತಿಯ ತಮ್ಮ…
ಇದೇನೇ ಬಾಳಿನ ಗುಟ್ಟು ತಮ್ಮ…
ಮದುವೆ ಮದುವೆ ಈ ಮದುವೆ
ಶರಣಾದರೆ ಬಾಳಲಿ ನೀ ನಲಿವೆ
ಮದುವೆ ಮದುವೆ ಈ ಮದುವೆ
ಶರಣಾದರೆ ಬಾಳಲಿ ನೀ ನಲಿವೆ
ಆಸೆ ತುಂಬಿದ ಕಣ್ಣಿಗೆ
ನಾ ಹಚ್ಚುವೆನು ಕಾಡಿಗೆ…
ಆಸೆ ತುಂಬಿದ ಕಣ್ಣಿಗೆ
ನಾ ಹಚ್ಚುವೆನು ಕಾಡಿಗೆ…
ಮುಡಿಸುವೆ ನಾ ಮಲ್ಲಿಗೆ
ಬಂಗಾರದ ಬೊಂಬೆಗೆ
ಬೊಟ್ಟನು ಹಿಡುವೆ
ನಾನು ಬೊಟ್ಟನು ಹಿಡುವೆ
ಲಜ್ಜೆಯಿಂದ ಕೆಂಪಗಾದ ಕೆನ್ನೆಗೆ
ರಾಯ ಬರುವನು ಮೆಲ್ಲಗೆ
ಮುತ್ತನಿಡುವನು ಅಲ್ಲಿಗೆ…
ಮದುವೆ ಮದುವೆ ಈ ಮದುವೆ
ಹೊಸ ಬಾಳಿಗೆ ನಾಂದಿಯು ಈ ಮದುವೆ
ಮದುವೆ ಮದುವೆ ಈ ಮದುವೆ
ಹೊಸ ಬಾಳಿಗೆ ನಾಂದಿಯು ಈ ಮದುವೆ
ಹಸೆಯ ಮೇಗಡೆ ಕುಳಿತ ಜೋಡಿಯ
ಹರಸಿ ಬನ್ನಿರಮ್ಮಾ…
ಹರುಷ ಹೊಮ್ಮಲಿ ಸುಖವು ಚಿಮ್ಮಲಿ
ಎಂದು ಹರಸಮ್ಮಾ…
ತೌರ ಮನೆಯಿದು ಹೊಕ್ಕ ಮನೆಯದು
ಇದಕೆ ನೀನೇ ಬೆಳಕು…
ನಿನ್ನ ಮಡಿಲಲಿ ಬೇಗ ಕುಣಿಯಲಿ
ಹೊಸದು ವಂಶ ಬೆಳಕು…
ಪ್ರೇಮ ಸಹನೆಶೀಲ
ಮೂರು ಗಂಟಿನ ಈ ಬಂಧ
ನಿಮ್ಮ ಬೆಸೆವ ನಂಟು
ಜೀವ ಜೀವದ ಸಂಬಂಧ
ನಿಮಗೆ ತರಲಿ ದಿನವೂ ದಿನವೂ
ನೂತನ ಆನಂದ…
ಮದುವೆ ಮದುವೆ ಈ ಮದುವೆ
ಹೊಸ ಪ್ರೇಮದ ಬಂಧನ ಈ ಮದುವೆ
ಮದುವೆ ಮದುವೆ ಈ ಮದುವೆ
ಇದು ಬಿಡಿಸದ ಬಂಧನ ಈ ಮದುವೆ
Elliya Eleyo song lyrics from Kannada Movie Sneha Sambandha starring Ambarish, Ramakrishna, Sundar Krishna Urs, Lyrics penned by R N Jayagopal Sung by S P Balasubrahmanyam, Manjula Gururaj, Music Composed by G K Venkatesh, film is Directed by Rajachandra and film is released on 1985