ಪದ ಪದ ಕನ್ನಡ ಪದನೇ
ನಾನ್ ರತ್ನನ್ ಪದ ಕೇಳ್ಕೊಂಡ್ ಬೆಳ್ದೋನೆ
ಅರೆ ನೆನಸ್ಕಂಡ್ರೆ ನೊರೆ ಹಾಲ್ನ ಕುಡ್ದಂಗೈತೆ
ಎದೆಯಾಗೆ ಹರಿದಾಡ್ತೈತೆ
ಈ ಕೇರಳದ್ ಮಣ್ಣಲ್ ಕೂಡ ಕನ್ನಡದ ಗಂಧ ಚೆಲ್ಲೈತೆ
ಆ ಬೆಟ್ಟ ಈ ಗುಡ್ಡ ನಮ್ ಮಲ್ನಾಡ್ಗ್ ಅಕ್ಕ ತಂಗ್ಯಂತೆ
ಹುಟ್ಟುದ್ರೆ ಎಂದು ನಾವು ಕನ್ನಡ ನೆಲ್ದಲ್ ಹುಟ್ಟ್ಬೇಕು
ನುಡಿದರೆ ಬಾಯಿ ತುಂಬ ರತ್ನನ್ ಪದ ನುಡಿಬೇಕು
ಪದ ಪದ ಕನ್ನಡ ಪದನೇ
ನಾನ್ ರತ್ನನ್ ಪದ ಕೇಳ್ಕೊಂಡ್ ಬೆಳ್ದೋನೆ
ಕುಡಿದೋನು ನುಡಿವಾಗ್ಲು ಆ ಪದವೇನ್ ಚೆಂದ
ತಲೆ ಕೆಟ್ಟೋನು ಬಯ್ಯೊ ವಾಗ್ಲುಗ ಆ ನುಡಿ ಏನ್ ಚೆಂದ
ಮುತ್ತಿನಂಥ ಭಾಷೆಗು ಮುತ್ತನಿಟ್ರೆ ಚೆಂದಾನೆ
ಕಬ್ಬಿಗರ ತವರಿಗೆ ಹೆಜ್ಜೆ ಇಟ್ರೆ ಪುಣ್ಯಾನೆ
ಕಲಿ ಎಷ್ಟೇ ಭಾಷೆನ ನುಡಿ ಒಂದೇ ಪದಾನ
ನಿನ್ ಎಲ್ಲೆ ಇರು ಹೆಂಗೇ ಇರು ಕನ್ನಡ ಮರಿಬೇಡಣ್ಣ
|| ಪದ ಪದ ಕನ್ನಡ ಪದನೇ
ನಾನ್ ರತ್ನನ್ ಪದ ಕೇಳ್ಕೊಂಡ್ ಬೆಳ್ದೋನೆ||
ಕನ್ನಡಕ್ಕೆ ಕೈ ಎತ್ತು ನಿನ್ಗೆ ಒಳ್ಳೆದಾಯ್ತದೆ
ಕೂಗ್ ಹೇಳು ಮುರೊತ್ತು ನಮ್ ಕನ್ನಡ ಬತ್ತದೆ
ಸಕ್ಕರೆಗೆ ಹೋಲಿಸು ಅಕ್ಕರೆಯ ಭಾಷೆಯ
ಮೆಚ್ಚಿಕೊಂಡು ಪ್ರೀತಿಸು ಇಚ್ಚೆಯುಳ್ಳ ಭಾಷೆಯ
ಈ ಕನ್ನಡ ಪದನ ಎದೆ ತಟ್ಟಿ ನುಡಿಯಣ್ಣ
ನೀ ಎಲ್ಲೆ ಹೋಗು ಏನೇ ಮಾಡು ಕನ್ನಡ ಮರಿಬೇಡಣ್ಣ
|| ಪದ ಪದ ಕನ್ನಡ ಪದನೇ
ನಾನ್ ರತ್ನನ್ ಪದ ಕೇಳ್ಕೊಂಡ್ ಬೆಳ್ದೋನೆ
ಅರೆ ನೆನಸ್ಕಂಡ್ರೆ ನೊರೆ ಹಾಲ್ನ ಕುಡ್ದಂಗೈತೆ
ಎದೆಯಾಗೆ ಹರಿದಾಡ್ತೈತೆ
ಈ ಕೇರಳದ್ ಮಣ್ಣಲ್ ಕೂಡ ಕನ್ನಡದ ಗಂಧ ಚೆಲ್ಲೈತೆ
ಆ ಬೆಟ್ಟ ಈ ಗುಡ್ಡ ನಮ್ ಮಲ್ನಾಡ್ಗ್ ಅಕ್ಕ ತಂಗ್ಯಂತೆ
ಹುಟ್ಟುದ್ರೆ ಎಂದು ನಾವು ಕನ್ನಡ ನೆಲ್ದಲ್ ಹುಟ್ಟ್ಬೇಕು
ನುಡಿದರೆ ಬಾಯಿ ತುಂಬ ರತ್ನನ್ ಪದ ನುಡಿಬೇಕು
ಪದ ಪದ ಕನ್ನಡ ಪದನೇ
ನಾನ್ ರತ್ನನ್ ಪದ ಕೇಳ್ಕೊಂಡ್ ಬೆಳ್ದೋನೆ||
||ಪದ ಪದ ಕನ್ನಡ ಪದಾನೇ
ನಾವ್ ಹಾಡ್ತ ಇದ್ರೆ ಎಂತ ಚೆಂದಾನೆ
ಪದ ಪದ ಕನ್ನಡ ಪದಾನೇ
ನಾವ್ ಹಾಡ್ತ ಇದ್ರೆ ಎಂತ ಚೆಂದಾನೆ||