Aakaashave Ee Shraavana Sanje Lyrics

in Shravana Sanje

Video:

LYRIC

ನೋಡು ನೋಡು ಎಲ್ಲೂ ಬೆಟ್ಟಗಳ ಸಾಲು
ಸಾಲುಗಳ ಮೇಲು ಮಕ್ಕಳ ರೈಲು
ರೈಲಿಗೊಂದು ಗಾರ್ಡು ಈ ನಮ್ಮ ಮೇಡಂ
ಮೇಡಂ ಸಿಟಿ ಉದಲು ಹೊರಟಿತು ರೈಲು
ಕೂಓಓ  ಚುಕು ಚುಕು ಚುಕು ಚುಕು ಚುಕು ಚುಕು

ಆಕಾಶವೇ ಈ ಶ್ರಾವಣ ಸಂಜೆ
ಮಿಲನಕಿದೆ ನವ ನೂತನ ಸಂಜೆ
ಆ ಪಡುವಣದಿ ಗಿರಿ ಪರ್ವತವು
ಬೆಳ್ಳಿ ಮೋಡಕ್ಕೆ ಮುತ್ತಿಟ್ಟಿದೆ
ಆ ಹರುಷದಲಿ ಋತುಗಾನವನು
ಈ ಭೂಮಿ ತಾ ಹಾಡಿದೆ
ಇದು ಸ್ನೇಹ ರಾಗ ಮಾಧುರ್ಯ ಗಾನ
ಆ ದೈವ ತಂದ ಆನಂದ ತಾಣ

|| ಆಕಾಶವೇ ಈ ಶ್ರಾವಣ ಸಂಜೆ
ಮಿಲನಕಿದೆ ನವ ನೂತನ ಸಂಜೆ ||
 
ತಕ ಧಿಮಿ ತಕ ಜನು ತಕ ಧಿಮಿ ತಕ ಜನು 
ತಜಂ ತಜಂ ತಜಂ ತಜಂ ತಕ ಧಿಮಿ

ಈ ಪ್ರಕೃತಿ ನಗುತಿಹದು 
ಬನವೆಲ್ಲಾ ಹಸಿ ಹಸಿರು
ಪ್ರೇಮಿಗಳು ಕೂಡಿರಲು
ಮೌನದಲೇ ಸರಸಗಳು
ನಗೆ ಹೊನಲು. . . .
ಬರಲು ಶೃಂಗಾರ ಮಾಸ
ವನದೇವಿ ಮಂದಹಾಸ
ಪ್ರೀತಿ ಸಂದೇಶ
ಎಲ್ಲೂ ಸಂತೋಷ
ನಿತ್ಯ ಉಲ್ಲಾಸವೇ..

|| ಆಕಾಶವೇ ಈ ಶ್ರಾವಣ ಸಂಜೆ
ಮಿಲನಕಿದೆ ನವ ನೂತನ ಸಂಜೆ ||

 
ಧುಮ್ಮಿಕ್ಕೋ ನೀರಿನಲಿ
ಹೊಮ್ಮಿ ಬರೋ  ಆಸೆಗಳು
ಝೇಂಕರಿಸೋ ದುಂಬಿಯಲಿ
ಓಂಕಾರ ನಾದಗಳು
ಹೊಸ ರಾಗ...
ಇದುವೇ ಸ್ವರ್ಗ ಧಾಮ
ಎಲ್ಲೂ ದಿವ್ಯ ಪ್ರೇಮ
ಪ್ರೀತಿ ಸಂದೇಶ
ಎಲ್ಲೂ ಸಂತೋಷ
ನಿತ್ಯ ಉಲ್ಲಾಸವೇ...

|| ಆಕಾಶವೇ ಈ ಶ್ರಾವಣ ಸಂಜೆ
ಮಿಲನಕಿದೆ ನವ ನೂತನ ಸಂಜೆ
ಆ ಪಡುವಣದಿ ಗಿರಿ ಪರ್ವತವು
ಬೆಳ್ಳಿ ಮೋಡಕ್ಕೆ ಮುತ್ತಿಟ್ಟಿದೆ
ಆ ಹರುಷದಲಿ ಋತುಗನವನು
ಈ ಭೂಮಿ ತಾ ಹಾಡಿದೆ
ಇದು ಸ್ನೇಹ ರಾಗ ಮಾಧುರ್ಯ ಗಾನ
ಆ ದೈವ ತಂದ ಆನಂದ ತಾಣ ||

 

Aakaashave Ee Shraavana Sanje song lyrics from Kannada Movie Shravana Sanje starring Charanraj, Sithara, Ramkumar, Lyrics penned by R N Jayagopal Sung by Sangeetha Katti, Music Composed by Upendra Kumar, film is Directed by A T Raghu and film is released on 1995