-
ನಲ್ಲೆ ನಿನ್ನ ಮುಡಿಗೆ ನಾ ಮಲ್ಲೆ ಹೂವ ಮುಡಿಸಿ
ಬಿಗಿದಪ್ಪಿಕೊಟ್ಟ ಸವಿಮುತ್ತ ಏಕೆ ಎಂದು ತಿಳಿಯಿತೆ ನಿನಗೆ
ಓ ಮುದ್ದು ಇನಿಯ ನನ್ನ ಹಿಂದೆ ಮುಂದೆ ಸುಳಿದು
ನೀ ಅಂದುಕೊಟ್ಟ ಸಿಹಿಮುತ್ತು ಏಕೆ ಇಂದು ತಿಳಿಯಿತು ನನಗೆ
ಮನಸ್ಸಿನ ಆಸೆಯೊಂದು ಹೊಸತನ ತುಂಬಿಕೊಂಡು
ಬದುಕಿನ ಹಾದಿಯಲ್ಲಿ ಬೆಳಕನ್ನು ಚೆಲ್ಲಿ ನಿಂದು
ಹೊಸರಾಗ ಹಾಡಿ ತಾಳಮೇಳಗಳು ಕೂಡಿ ಬಂದಮೇಲೆ
ಚೈತ್ರದ ಹೊನಲು
||ಓ ಮುದ್ದು ಇನಿಯ ನನ್ನ ಹಿಂದೆ ಮುಂದೆ ಸುಳಿದು

ಚೈತ್ರದ ಹೊನಲು||
ಮುದ್ದಾದ ಮಗುವೊಂದು ಬರುವ ದಿನಗಳಲ್ಲಿ
ಜೋಪಾನವಾಗಿರು ನೀ ಪ್ರೀತಿಯ ಓ ನಲ್ಲೆ
ಕಣ್ಣಿಗೆ ರೆಪ್ಪೆಯಂತೆ ಜೊತೆಯಲ್ಲಿ ನೀನಿರಲು
ಬಾಳೆಲ್ಲ ನಗುವೇನೆ ಪ್ರೀತಿಯ ಒ ನಲ್ಲ
ನನ್ನ ಹೃದಯದಲ್ಲಿ ದೇವತೆ ನೀನಾದೆ
ನನ್ನಯ ನೋಟದಲ್ಲಿ ಬಿಂಬವು ನೀನಾದೆ
ನುಡಿಯಲು ಮಾತೆ ಇಲ್ಲ ನೀನೆ ನನ್ನ ಜೀವ
||ಓ ಮುದ್ದು ಇನಿಯ ನನ್ನ ಹಿಂದೆ ಮುಂದೆ ಸುಳಿದು
ನೀ ಅಂದುಕೊಟ್ಟ ಸಿಹಿಮುತ್ತು ಏಕೆ ಇಂದು ತಿಳಿಯಿತು ನನಗೆ||
ತಾಯಿಯ ಬಯಕೆಗಳು ನನ್ನಲ್ಲಿ ಮೂಡುತ್ತಿದೆ
ತೊಟ್ಟಿಲನು ತೂಗುವಾಸೆ ಮನದಲ್ಲಿ ತುಂಬಿರಲು
ಸಿಂಗಾರ ಮಾಡಿ ನಿಂಗೆ ಸೀಮಂತ ಮಾಡಿಸುವೆ
ಬಂಗಾರಿ ನಗು ಕಂಡು ಉಲ್ಲಾಸವ ನಾ ಪಡುವೆ
ಕಂದ ಬರುವಾಗ ಸಂತಸ ತರುವಾಗ
ಕಂದನ ತೊದಲು ನುಡಿ ಸಂಭ್ರಮ ತಂದಾಗ
ಜೊತೆಯಲ್ಲಿ ನಾನು ನೀನು ಸೇರಿ ಲಾಲಿ ಹಾಡೋಣ
||ನಲ್ಲೆ ನಿನ್ನ ಮುಡಿಗೆ ನಾ ಮಲ್ಲೆ ಹೂವ ಮುಡಿಸಿ