-
ಈ ಜೀವದಲ್ಲಿ ಪ್ರೀತಿ ಏಕೆ ಮೂಡಿದೆ
ವ್ಯಾಮೋಹದಲ್ಲಿಏಕೆ ನನ್ನ ದೂಡಿದೆ
ತಾಯ ಮಮತೆ ಕಾಣೆ ತಂದೆ ಒಲವು ಕಾಣೆ
ಇಂದು ಯಾವ ದಾಹ ಸೇರಿತೆನ್ನ ದೇಹ
ದೈವ ಲೀಲೆ ಏನೊ ಕಾಣೆ
ವಾತ್ಸಲ್ಯ ನಾ ಕಂಡೆ ಏಕೆಂದು ನಾ ಕಾಣೆ
ವ್ಯಾಮೋಹದಲ್ಲಿಏಕೆ ನನ್ನ ದೂಡಿದೆ
ನೀನೆ ತಾಯಿ ಎಂದಾಗ ಕರುಳೆ ಹಿಂಡಿತು
ನಿನ್ನ ಮಮತೆ ಸಿಕ್ಕದೆ ಬಾಳೆ ಸೊರಗಿತು
ನೀನು ಯಾರ ದಾಳಿಗೆ ಪ್ರಾಣ ನೀಡಿದೆ
ನನ್ನ ತಂಗಿ ಸಾವಿಗೆ ಜೀವ ಬಾಡಿದೆ
ಸವಿಬಂಧ ಅನುಬಂಧ ಬಿಡದೆಂದಿಗು
ಬಾಳಿನಲಿ ಯಾವ ಮೋಹವಿಂದು ನನ್ನ ಕಾಡಿದೆ
ವ್ಯಾಮೋಹದಲ್ಲಿಏಕೆ ನನ್ನ ದೂಡಿದೆ
ಪ್ರೀತಿ ಕಂಪು ನೀ ತಂದೆ ನನ್ನ ಎದೆಯಲ್ಲಿ
ಹಸುಳೆ ಕಂದ ನಾನಾದೆ ನಿನ್ನ ಮಡಿಲಲ್ಲಿ
ನನ್ನ ದುಃಖ ದೂಡಿದೆ ಧೈರ್ಯ ನೀಡಿದೆ
ನನ್ನ ಕ್ರೌರ್ಯ ಜೀವಕ್ಕೆ ಸ್ನೇಹ ತುಂಬಿದೆ
ಎದೆಯಲ್ಲಿ ಮಧು ಚೆಲ್ಲಿ ಒಲವೆಂದೆಂಧು ಮೂಡಿಸಿದೆ
ಏಕೆ ಇಂದು ನನ್ನ ಒಂಟಿ ಮಾಡಿದೆ
ಈ ಬಾಳಿನಲ್ಲಿ ಬರಿ ಕಹಿಯೆ ತುಂಬಿದೆ
ಈ ಜೀವದಲ್ಲಿ ಸಾವು ಸರಸ ಆಡಿದೆ
ಪ್ರೀತಿಬೆಳಕು ತೋರಿ ಈಗ ಸರಿಯಬೇಕೆ
ನೀತಿ ಮಾತು ಹೇಳಿ ಮಸಣ ಸೇರಬೇಕೆ
ದೈವಲೀಲೆ ಏನೊ ಕಾಣೆ
ಈ ನೋವು ಈ ಸಾವು ಹೀಗೇಕೊ ನಾ ಕಾಣೆ
-
ಈ ಜೀವದಲ್ಲಿ ಪ್ರೀತಿ ಏಕೆ ಮೂಡಿದೆ
ವ್ಯಾಮೋಹದಲ್ಲಿಏಕೆ ನನ್ನ ದೂಡಿದೆ
ತಾಯ ಮಮತೆ ಕಾಣೆ ತಂದೆ ಒಲವು ಕಾಣೆ
ಇಂದು ಯಾವ ದಾಹ ಸೇರಿತೆನ್ನ ದೇಹ
ದೈವ ಲೀಲೆ ಏನೊ ಕಾಣೆ
ವಾತ್ಸಲ್ಯ ನಾ ಕಂಡೆ ಏಕೆಂದು ನಾ ಕಾಣೆ
ವ್ಯಾಮೋಹದಲ್ಲಿಏಕೆ ನನ್ನ ದೂಡಿದೆ
ನೀನೆ ತಾಯಿ ಎಂದಾಗ ಕರುಳೆ ಹಿಂಡಿತು
ನಿನ್ನ ಮಮತೆ ಸಿಕ್ಕದೆ ಬಾಳೆ ಸೊರಗಿತು
ನೀನು ಯಾರ ದಾಳಿಗೆ ಪ್ರಾಣ ನೀಡಿದೆ
ನನ್ನ ತಂಗಿ ಸಾವಿಗೆ ಜೀವ ಬಾಡಿದೆ
ಸವಿಬಂಧ ಅನುಬಂಧ ಬಿಡದೆಂದಿಗು
ಬಾಳಿನಲಿ ಯಾವ ಮೋಹವಿಂದು ನನ್ನ ಕಾಡಿದೆ
ವ್ಯಾಮೋಹದಲ್ಲಿಏಕೆ ನನ್ನ ದೂಡಿದೆ
ಪ್ರೀತಿ ಕಂಪು ನೀ ತಂದೆ ನನ್ನ ಎದೆಯಲ್ಲಿ
ಹಸುಳೆ ಕಂದ ನಾನಾದೆ ನಿನ್ನ ಮಡಿಲಲ್ಲಿ
ನನ್ನ ದುಃಖ ದೂಡಿದೆ ಧೈರ್ಯ ನೀಡಿದೆ
ನನ್ನ ಕ್ರೌರ್ಯ ಜೀವಕ್ಕೆ ಸ್ನೇಹ ತುಂಬಿದೆ
ಎದೆಯಲ್ಲಿ ಮಧು ಚೆಲ್ಲಿ ಒಲವೆಂದೆಂಧು ಮೂಡಿಸಿದೆ
ಏಕೆ ಇಂದು ನನ್ನ ಒಂಟಿ ಮಾಡಿದೆ
ಈ ಬಾಳಿನಲ್ಲಿ ಬರಿ ಕಹಿಯೆ ತುಂಬಿದೆ
ಈ ಜೀವದಲ್ಲಿ ಸಾವು ಸರಸ ಆಡಿದೆ
ಪ್ರೀತಿಬೆಳಕು ತೋರಿ ಈಗ ಸರಿಯಬೇಕೆ
ನೀತಿ ಮಾತು ಹೇಳಿ ಮಸಣ ಸೇರಬೇಕೆ
ದೈವಲೀಲೆ ಏನೊ ಕಾಣೆ
ಈ ನೋವು ಈ ಸಾವು ಹೀಗೇಕೊ ನಾ ಕಾಣೆ
Ee Jeevadalli song lyrics from Kannada Movie Shakthi Yukthi starring Ananthnag, Pramod Chakravarthy, Vinaya Prasad, Lyrics penned by M N Vyasa Rao Sung by S P Balasubrahmanyam, Music Composed by Manoranjan Prabhakar, film is Directed by B Ramamurthy and film is released on 1992