ಹಳ್ಳಿ ರೈತಂಗೆ
ಹಳ್ಳಿ ರೈತಂಗೆ ನೆರವಾಗಬೇಕು...
ಡಿಲ್ಲಿ ಹಳ್ಳಿಗೆ ವರವಾಗಬೇಕು
ಧಣಿ ಒಕ್ಕಲಿಗೆ ನೆರಳಾಗಬೇಕು...
ಮನುಷ್ಯ ಮನುಷ್ಯಂಗೆ ನೆರವಾಗಬೇಕು
ಮಣ್ಣಿನಿಂದ ಮನೆಯಂತೆ ಗಾಳಿಯಿಂದ ಉಸಿರಂತೆ
ನೀರಿನಿಂದ ಬೆಳೆಯಂತೆ ಬೆಂಕಿಯಿಂದ ಬೆಳಕಂತೆ
ಒಬ್ಬನದು ಅಲ್ಲ ಜೀವನ
ಹಳ್ಳಿ ರೈತಂಗೆ ನೆರವಾಗಬೇಕು...
ಡಿಲ್ಲಿ ಹಳ್ಳಿಗೆ ವರವಾಗಬೇಕು
ಒಂದು ಕಡೆ ಇದ್ರೆ ಹೊಂದಿಕೊಂಡು ಹೋಗಬೇಕು
ಕಷ್ಟಗಳು ಬಂದ್ರೆ ಹಂಚಿಕೊಂಡು ಬಾಳಬೇಕು
ಜಡ್ಡುಗಟ್ಟಿ ದುಡ್ಡು ಒಂದೆ ಕಡೆ ಕುಳಿಬಾರದು
ಮಡುವುಗಟ್ಟಿ ಬದುಕು ನಿಂತ ಕೆರೆ ಆಗಬಾರದು
ಹರಿಯುವಳಿಲ್ಲಿ ಕಾವೇರಿ ಉಳುಮೆಗೆ ಅವಳು ಉಪಕಾರಿ
ಅವಳಿಗೆ ದೇವರೆ ಅಧಿಕಾರಿ ಅವಳನು ಮರೆತವ ಸೋಮಾರಿ
ಆಗಲಣ್ಣ ಕೈಕೆಸರು ಆಗುವುದು ಬಾಯಿ ಮೊಸರು
ಇಳಿಯಲಣ್ಣ ಮೈ ಬೆವರು ಉಳಿವುದು ಊರ ಹೆಸರು
ದುಡಿದರೆ ತಾನೆ ಜೀವನ….
||ಹಳ್ಳಿ ರೈತಂಗೆ ನೆರವಾಗಬೇಕು...
ಡಿಲ್ಲಿ ಹಳ್ಳಿಗೆ ವರವಾಗಬೇಕು||
ದೇಶದಲ್ಲಿ ಎಲ್ಲು ಸುಖ ಶಾಂತಿ ಇಲ್ಲವಂತೆ
ಪ್ರತಿಪ್ರಜೆಯ ತಲೆಗು ಎಷ್ಟೊ ಸಾಲ ಇದೆಯಂತೆ
ಬೆಳೆದು ಬೆಳೆದು ಕುಟ್ರು ಇಲ್ಲಿ ಹೊಟ್ಟೆ ತುಂಬದು ಯಾಕೆ
ಬೆಳೆದ ಮೇಲೆ ಇಲ್ಲಿ ಬಡತನ ಬೆಳೆಯೋದ್ಯಾಕೆ
ಬಡವನು ಇಲ್ಲಿ ಓದಿಲ್ಲ ಓದಿದ ಮೇಲೆ ದುಡಿಯಲ್ಲ
ದುಡಿಮೆಗೆ ಇಲ್ಲಿ ಬೆಲೆ ಇಲ್ಲ ಬೆಳೆಯೊ ರೈತನಿಗೆ ಸುಖವಿಲ್ಲ
ಓಟಿನ ಅಧಿಕಾರ ಇರುವುದು ನಮ್ಮ ಕೈಲಿ
ಒಳ್ಳೆಯ ಸರಕಾರ ಬರುವುದು ನಮ್ಮ ಕೈಲಿ
ಅರಿತರೆ ತಾನೆ ಜೀವನ…
||ಹಳ್ಳಿ ರೈತಂಗೆ ನೆರವಾಗಬೇಕು...
ಡಿಲ್ಲಿ ಹಳ್ಳಿಗೆ ವರವಾಗಬೇಕು
ಧಣಿ ಒಕ್ಕಲಿಗೆ ನೆರಳಾಗಬೇಕು...
ಮನುಷ್ಯ ಮನುಷ್ಯಂಗೆ ನೆರವಾಗಬೇಕು||
ಹಳ್ಳಿ ರೈತಂಗೆ
ಹಳ್ಳಿ ರೈತಂಗೆ ನೆರವಾಗಬೇಕು...
ಡಿಲ್ಲಿ ಹಳ್ಳಿಗೆ ವರವಾಗಬೇಕು
ಧಣಿ ಒಕ್ಕಲಿಗೆ ನೆರಳಾಗಬೇಕು...
ಮನುಷ್ಯ ಮನುಷ್ಯಂಗೆ ನೆರವಾಗಬೇಕು
ಮಣ್ಣಿನಿಂದ ಮನೆಯಂತೆ ಗಾಳಿಯಿಂದ ಉಸಿರಂತೆ
ನೀರಿನಿಂದ ಬೆಳೆಯಂತೆ ಬೆಂಕಿಯಿಂದ ಬೆಳಕಂತೆ
ಒಬ್ಬನದು ಅಲ್ಲ ಜೀವನ
ಹಳ್ಳಿ ರೈತಂಗೆ ನೆರವಾಗಬೇಕು...
ಡಿಲ್ಲಿ ಹಳ್ಳಿಗೆ ವರವಾಗಬೇಕು
ಒಂದು ಕಡೆ ಇದ್ರೆ ಹೊಂದಿಕೊಂಡು ಹೋಗಬೇಕು
ಕಷ್ಟಗಳು ಬಂದ್ರೆ ಹಂಚಿಕೊಂಡು ಬಾಳಬೇಕು
ಜಡ್ಡುಗಟ್ಟಿ ದುಡ್ಡು ಒಂದೆ ಕಡೆ ಕುಳಿಬಾರದು
ಮಡುವುಗಟ್ಟಿ ಬದುಕು ನಿಂತ ಕೆರೆ ಆಗಬಾರದು
ಹರಿಯುವಳಿಲ್ಲಿ ಕಾವೇರಿ ಉಳುಮೆಗೆ ಅವಳು ಉಪಕಾರಿ
ಅವಳಿಗೆ ದೇವರೆ ಅಧಿಕಾರಿ ಅವಳನು ಮರೆತವ ಸೋಮಾರಿ
ಆಗಲಣ್ಣ ಕೈಕೆಸರು ಆಗುವುದು ಬಾಯಿ ಮೊಸರು
ಇಳಿಯಲಣ್ಣ ಮೈ ಬೆವರು ಉಳಿವುದು ಊರ ಹೆಸರು
ದುಡಿದರೆ ತಾನೆ ಜೀವನ….
||ಹಳ್ಳಿ ರೈತಂಗೆ ನೆರವಾಗಬೇಕು...
ಡಿಲ್ಲಿ ಹಳ್ಳಿಗೆ ವರವಾಗಬೇಕು||
ದೇಶದಲ್ಲಿ ಎಲ್ಲು ಸುಖ ಶಾಂತಿ ಇಲ್ಲವಂತೆ
ಪ್ರತಿಪ್ರಜೆಯ ತಲೆಗು ಎಷ್ಟೊ ಸಾಲ ಇದೆಯಂತೆ
ಬೆಳೆದು ಬೆಳೆದು ಕುಟ್ರು ಇಲ್ಲಿ ಹೊಟ್ಟೆ ತುಂಬದು ಯಾಕೆ
ಬೆಳೆದ ಮೇಲೆ ಇಲ್ಲಿ ಬಡತನ ಬೆಳೆಯೋದ್ಯಾಕೆ
ಬಡವನು ಇಲ್ಲಿ ಓದಿಲ್ಲ ಓದಿದ ಮೇಲೆ ದುಡಿಯಲ್ಲ
ದುಡಿಮೆಗೆ ಇಲ್ಲಿ ಬೆಲೆ ಇಲ್ಲ ಬೆಳೆಯೊ ರೈತನಿಗೆ ಸುಖವಿಲ್ಲ
ಓಟಿನ ಅಧಿಕಾರ ಇರುವುದು ನಮ್ಮ ಕೈಲಿ
ಒಳ್ಳೆಯ ಸರಕಾರ ಬರುವುದು ನಮ್ಮ ಕೈಲಿ
ಅರಿತರೆ ತಾನೆ ಜೀವನ…
||ಹಳ್ಳಿ ರೈತಂಗೆ ನೆರವಾಗಬೇಕು...
ಡಿಲ್ಲಿ ಹಳ್ಳಿಗೆ ವರವಾಗಬೇಕು
ಧಣಿ ಒಕ್ಕಲಿಗೆ ನೆರಳಾಗಬೇಕು...
ಮನುಷ್ಯ ಮನುಷ್ಯಂಗೆ ನೆರವಾಗಬೇಕು||