ಗಂಡು : ಕಣ್ಣೆರೆಡು ನನಗೆ ಕಂಬನಿಯ
ಸುರಿಸಿ ಸಾಕಾಗದಾಗಿದೆ
ಹಗಲಿರುಳು ನಿನ್ನ ನೆನಪಲ್ಲೇ
ಬೆಂದು ಎದೆ ಭಾರವಾಗಿದೇ
ತಂಗಿ ಎದೆ ಭಾರವಾಗಿದೇ
ಹೆಣ್ಣು : ನಿನಗಾಗಿ ಅತ್ತು ಕಂಬನಿಯು
ಬತ್ತಿ ಕಣ್ಣೆಲ್ಲಾ ಬರಿದಾಗಿದೆ
ನನ್ನ ಬದುಕೆಲ್ಲಾ ಗೋಳಾಗಿದೆ
ಅಣ್ಣಾ ಬದುಕೆಲ್ಲಾ ಗೋಳಾಗಿದೆ
ಗಂಡು : ಮಗುವಿನ ಮನಸು ಮದುವೆ ವಯಸು
ಹೂವಂತೆ ನಿನದು ಸೊಗಸು
ಬೆಂಕಿಯ ಮಡಿಲು ಗುಡುಗು ಸಿಡಿಲು
ಜಗವೆಲ್ಲ ಭಯದ ಒಡಲು
ಆಸರೆಯ ನೀಗಿ ಏಕಾಂಗಿಯಾಗಿ
ನೀ ಹೇಗೆ ಬಾಳುವೇ ತಂಗಿ,
ನೀ ಹೇಗೆ ಬಾಳುವೇ…
ಹೆಣ್ಣು : ಸೆರೆಮನೆಯಲ್ಲಿ ನೂರು ನೋವು
ನೀ ಹೇಗೆ ಭರಿಸುತಿರುವೇ
ಬಯಕೆಯ ಬಳ್ಳಿ ಬಾಡಿ ಹೋಗಿ
ನೀ ಹೇಗೆ ಸೈರಿಸಿರುವೇ
ನನಗಾಗಿ ಕೊರಗಿ ಕೃಷವಾಗಿ ಹೋಗಿ
ದಿನ ಹೇಗೆ ನೂಕುವೇ
ಅಣ್ಣ.. ದಿನ ಹೇಗೆ ನೂಕುವೇ
ಹೆಣ್ಣು : ಹರಿದ ರೆಕ್ಕೆಯ ಮುರಿದ
ಕಾಲ ಎಳೆಯಂತೆಯಾಗಿರುವೆ
ಗಂಡು : ಬಳಿಗೆ ಧಾವಿಸಿ ಬರಲು ತಂಗಿ
ಸೆರೆ ಕಾವಲಲ್ಲಿರುವೇ
ನೀನೊಂದು ದಡದಿ ನಾನೊಂದು ದಡದಿ
ಕಣ್ಣೀರ ನದಿ ನಡುವೆ
ತಂಗಿ ಕಣ್ಣೀರ ನದಿ ನಡುವೆ
|| ಹೆಣ್ಣು : ಕಣ್ಣೆರೆಡು ನನಗೆ ಕಂಬನಿಯ
ಸುರಿಸಿ ಸಾಕಾಗದಾಗಿದೆ
ಗಂಡು : ಹಗಲಿರುಳು ನಿನ್ನ ನೆನಪಲ್ಲೇ
ಬೆಂದು ಎದೆ ಭಾರವಾಗಿದೇ ತಂಗಿ
ಹೆಣ್ಣು : ಎದೆ ಭಾರವಾಗಿದೇ ಅಣ್ಣಾ…||
ಗಂಡು : ಕಣ್ಣೆರೆಡು ನನಗೆ ಕಂಬನಿಯ
ಸುರಿಸಿ ಸಾಕಾಗದಾಗಿದೆ
ಹಗಲಿರುಳು ನಿನ್ನ ನೆನಪಲ್ಲೇ
ಬೆಂದು ಎದೆ ಭಾರವಾಗಿದೇ
ತಂಗಿ ಎದೆ ಭಾರವಾಗಿದೇ
ಹೆಣ್ಣು : ನಿನಗಾಗಿ ಅತ್ತು ಕಂಬನಿಯು
ಬತ್ತಿ ಕಣ್ಣೆಲ್ಲಾ ಬರಿದಾಗಿದೆ
ನನ್ನ ಬದುಕೆಲ್ಲಾ ಗೋಳಾಗಿದೆ
ಅಣ್ಣಾ ಬದುಕೆಲ್ಲಾ ಗೋಳಾಗಿದೆ
ಗಂಡು : ಮಗುವಿನ ಮನಸು ಮದುವೆ ವಯಸು
ಹೂವಂತೆ ನಿನದು ಸೊಗಸು
ಬೆಂಕಿಯ ಮಡಿಲು ಗುಡುಗು ಸಿಡಿಲು
ಜಗವೆಲ್ಲ ಭಯದ ಒಡಲು
ಆಸರೆಯ ನೀಗಿ ಏಕಾಂಗಿಯಾಗಿ
ನೀ ಹೇಗೆ ಬಾಳುವೇ ತಂಗಿ,
ನೀ ಹೇಗೆ ಬಾಳುವೇ…
ಹೆಣ್ಣು : ಸೆರೆಮನೆಯಲ್ಲಿ ನೂರು ನೋವು
ನೀ ಹೇಗೆ ಭರಿಸುತಿರುವೇ
ಬಯಕೆಯ ಬಳ್ಳಿ ಬಾಡಿ ಹೋಗಿ
ನೀ ಹೇಗೆ ಸೈರಿಸಿರುವೇ
ನನಗಾಗಿ ಕೊರಗಿ ಕೃಷವಾಗಿ ಹೋಗಿ
ದಿನ ಹೇಗೆ ನೂಕುವೇ
ಅಣ್ಣ.. ದಿನ ಹೇಗೆ ನೂಕುವೇ
ಹೆಣ್ಣು : ಹರಿದ ರೆಕ್ಕೆಯ ಮುರಿದ
ಕಾಲ ಎಳೆಯಂತೆಯಾಗಿರುವೆ
ಗಂಡು : ಬಳಿಗೆ ಧಾವಿಸಿ ಬರಲು ತಂಗಿ
ಸೆರೆ ಕಾವಲಲ್ಲಿರುವೇ
ನೀನೊಂದು ದಡದಿ ನಾನೊಂದು ದಡದಿ
ಕಣ್ಣೀರ ನದಿ ನಡುವೆ
ತಂಗಿ ಕಣ್ಣೀರ ನದಿ ನಡುವೆ
|| ಹೆಣ್ಣು : ಕಣ್ಣೆರೆಡು ನನಗೆ ಕಂಬನಿಯ
ಸುರಿಸಿ ಸಾಕಾಗದಾಗಿದೆ
ಗಂಡು : ಹಗಲಿರುಳು ನಿನ್ನ ನೆನಪಲ್ಲೇ
ಬೆಂದು ಎದೆ ಭಾರವಾಗಿದೇ ತಂಗಿ
ಹೆಣ್ಣು : ಎದೆ ಭಾರವಾಗಿದೇ ಅಣ್ಣಾ…||
Kanneradu Nanage song lyrics from Kannada Movie Rowdy Ranganna starring Dr Rajkumar, Rajashankar, Balakrishna, Lyrics penned by Chi Udayashankar Sung by P B Srinivas, S Janaki, Music Composed by Sathyam, film is Directed by R Ramamurthy and film is released on 1968