ಕೇಳಿದ್ದು ಸುಳ್ಳಾಗಬಹುದು
ನೋಡಿದ್ದು ಸುಳ್ಳಾಗಬಹುದು
ಕೇಳಿದ್ದು ಸುಳ್ಳಾಗಬಹುದು
ನೋಡಿದ್ದು ಸುಳ್ಳಾಗಬಹುದು
ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು
ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು
ಆ......ಆ.....ಆ....ಆ.....
ದೂರದೊಲ್ಲೊಂದು ಕಾಡಿತ್ತು
ಕಾಡಲ್ಲಿ ಒಂದು ಮನೆಯಿತ್ತು
ಮುಂಗುಸಿಯೊಂದು ಅಲ್ಲಿತ್ತು
ಮನೆಯನು ಕಾವಲು ಕಾಯ್ತಿತ್ತು
ಆ ಮನೆಯೊಡತಿ ಗಂಗಮ್ಮ
ತೊಟ್ಟಿಲಲವಳ ಕಂದಮ್ಮಾ
ಮುಂಗುಸಿಯಲ್ಲದೆ ಬೇರೇನು
ಮಗುವಿನ ಆಟಕೆ ಇಲ್ಲಮ್ಮ
ಮುಂಗುಸಿಯೊಡನೆ ಪ್ರೀತಿಯಲಿ
ಕಂದನ ಜೊತೆಗೆ ಪ್ರೇಮದಲಿ
ಬಾಳುತಲಿದ್ದಳು ಗಂಗಮ್ಮಾ
ಮುಂದೇನಾಯಿತು ಕೇಳಮ್ಮ..
ಮನೆಯಲಿ ನೀರು ಮುಗಿದಿರಲು
ಹೊಳೆಯ ಕಡೆಗೆ ಹೊರಟಿರಲು
ಕಂದನು ಇನ್ನೂ ಮಲಗಿರಲು
ಮುಂಗುಸಿಯನ್ನು ಕೂಗಿದಳು
ಮನೆಯಲಿ ಬೇರೆ ಯಾರಿಲ್ಲ
ಮಗುವಿಗೆ ಯಾರೂ ಜೊತೆಯಿಲ್ಲ
ತೊಟ್ಟಿಲ ಬಳಿಯೆ ಕಾವಲಿರು
ಹೊರಗಡೆ ಎಲ್ಲೂ ಹೋಗದಿರು
ಗಂಗೆಯು ಹೊಳೆಗೆ ಹೊರಟಾಗ
ಬೇಲಿಯಲಿದ್ದ ಕರಿನಾಗ
ಸರಸರ ಹರಿಯಿತು ರಭಸದಲಿ
ಮನೆಯನು ಸೇರಿತು ನಿಮಿಷದಲಿ
ಮುಂಗುಸಿ ನೋಡಿತು ಹಾವನ್ನು
ತೊಟ್ಟಿಲ ಬಳಿಗೆ ಬರುವುದನು
ಮೇಲೆ ಬಿದ್ದಿತು ವೇಗದಲಿ
ಕಾಳಗ ನಡೆಯಿತು ರೋಷದಲಿ
ಸೋತಿತು ಹಾವು ಜಗಳದಲಿ
ಮುಂಗುಸಿ ಗೆಲುವಿನ ಹರುಷದಲಿ
ಹಾವಿನ ಪ್ರಾಣವ ಹೀರಿತ್ತು
ಬಾಯಲಿ ರಕ್ತವು ಜಿನುಗಿತ್ತು
ಗಂಗೆಯು ನೀರನು ತರುತಿರಲು
ಕೈಬಳೆ ನಾದವು ಕೇಳಿಸಲು
ಮುಂಗುಸಿ ಬಾಗಿಲ ಬಳಿ ಬರಲು
ಬಾಯಲಿ ರಕ್ತದ ಕಲೆಯಿರಲೂ
ಬೆಚ್ಚುತ ಗಂಗೆಯು ನೋಡಿದಳು
ಮಗುವನು ಕೊಂದಿದೆ ಇದು ಎಂದು
ಮುಂಗುಸಿಯನ್ನು ಚಚ್ಚಿದಳು
ಅಳುತಾ ಒಳಗೆ ಓಡಿದಳು
ತೊಟ್ಟಲ ಕಂದನು ನಗುತ್ತಿತ್ತು
ನೆಲದಲಿ ಹಾವು ಸತ್ತಿತ್ತು
ದುಡುಕಿನ ಬುದ್ದಿಗೆ ಬಲಿಯಾಗಿ
ಮುಂಗುಸಿ ಕಥೆಯೂ ಮುಗಿದಿತ್ತು..
|| ಕೇಳಿದ್ದು ಸುಳ್ಳಾಗಬಹುದು
ನೋಡಿದ್ದು ಸುಳ್ಳಾಗಬಹುದು
ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು
ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು…||
ಕೇಳಿದ್ದು ಸುಳ್ಳಾಗಬಹುದು
ನೋಡಿದ್ದು ಸುಳ್ಳಾಗಬಹುದು
ಕೇಳಿದ್ದು ಸುಳ್ಳಾಗಬಹುದು
ನೋಡಿದ್ದು ಸುಳ್ಳಾಗಬಹುದು
ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು
ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು
ಆ......ಆ.....ಆ....ಆ.....
ದೂರದೊಲ್ಲೊಂದು ಕಾಡಿತ್ತು
ಕಾಡಲ್ಲಿ ಒಂದು ಮನೆಯಿತ್ತು
ಮುಂಗುಸಿಯೊಂದು ಅಲ್ಲಿತ್ತು
ಮನೆಯನು ಕಾವಲು ಕಾಯ್ತಿತ್ತು
ಆ ಮನೆಯೊಡತಿ ಗಂಗಮ್ಮ
ತೊಟ್ಟಿಲಲವಳ ಕಂದಮ್ಮಾ
ಮುಂಗುಸಿಯಲ್ಲದೆ ಬೇರೇನು
ಮಗುವಿನ ಆಟಕೆ ಇಲ್ಲಮ್ಮ
ಮುಂಗುಸಿಯೊಡನೆ ಪ್ರೀತಿಯಲಿ
ಕಂದನ ಜೊತೆಗೆ ಪ್ರೇಮದಲಿ
ಬಾಳುತಲಿದ್ದಳು ಗಂಗಮ್ಮಾ
ಮುಂದೇನಾಯಿತು ಕೇಳಮ್ಮ..
ಮನೆಯಲಿ ನೀರು ಮುಗಿದಿರಲು
ಹೊಳೆಯ ಕಡೆಗೆ ಹೊರಟಿರಲು
ಕಂದನು ಇನ್ನೂ ಮಲಗಿರಲು
ಮುಂಗುಸಿಯನ್ನು ಕೂಗಿದಳು
ಮನೆಯಲಿ ಬೇರೆ ಯಾರಿಲ್ಲ
ಮಗುವಿಗೆ ಯಾರೂ ಜೊತೆಯಿಲ್ಲ
ತೊಟ್ಟಿಲ ಬಳಿಯೆ ಕಾವಲಿರು
ಹೊರಗಡೆ ಎಲ್ಲೂ ಹೋಗದಿರು
ಗಂಗೆಯು ಹೊಳೆಗೆ ಹೊರಟಾಗ
ಬೇಲಿಯಲಿದ್ದ ಕರಿನಾಗ
ಸರಸರ ಹರಿಯಿತು ರಭಸದಲಿ
ಮನೆಯನು ಸೇರಿತು ನಿಮಿಷದಲಿ
ಮುಂಗುಸಿ ನೋಡಿತು ಹಾವನ್ನು
ತೊಟ್ಟಿಲ ಬಳಿಗೆ ಬರುವುದನು
ಮೇಲೆ ಬಿದ್ದಿತು ವೇಗದಲಿ
ಕಾಳಗ ನಡೆಯಿತು ರೋಷದಲಿ
ಸೋತಿತು ಹಾವು ಜಗಳದಲಿ
ಮುಂಗುಸಿ ಗೆಲುವಿನ ಹರುಷದಲಿ
ಹಾವಿನ ಪ್ರಾಣವ ಹೀರಿತ್ತು
ಬಾಯಲಿ ರಕ್ತವು ಜಿನುಗಿತ್ತು
ಗಂಗೆಯು ನೀರನು ತರುತಿರಲು
ಕೈಬಳೆ ನಾದವು ಕೇಳಿಸಲು
ಮುಂಗುಸಿ ಬಾಗಿಲ ಬಳಿ ಬರಲು
ಬಾಯಲಿ ರಕ್ತದ ಕಲೆಯಿರಲೂ
ಬೆಚ್ಚುತ ಗಂಗೆಯು ನೋಡಿದಳು
ಮಗುವನು ಕೊಂದಿದೆ ಇದು ಎಂದು
ಮುಂಗುಸಿಯನ್ನು ಚಚ್ಚಿದಳು
ಅಳುತಾ ಒಳಗೆ ಓಡಿದಳು
ತೊಟ್ಟಲ ಕಂದನು ನಗುತ್ತಿತ್ತು
ನೆಲದಲಿ ಹಾವು ಸತ್ತಿತ್ತು
ದುಡುಕಿನ ಬುದ್ದಿಗೆ ಬಲಿಯಾಗಿ
ಮುಂಗುಸಿ ಕಥೆಯೂ ಮುಗಿದಿತ್ತು..
|| ಕೇಳಿದ್ದು ಸುಳ್ಳಾಗಬಹುದು
ನೋಡಿದ್ದು ಸುಳ್ಳಾಗಬಹುದು
ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು
ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು…||
Keliddu Sullaagabahudu Nodiddu Sullaagabahudu song lyrics from Kannada Movie Rama Lakshmana starring M P Shankar, Ashok, Manjula, Lyrics penned by Chi Udayashankar Sung by S Janaki, Music Composed by Rajan-Nagendra, film is Directed by Rave-Shankar and film is released on 1980