LYRIC
-
ಪ್ರೇಮವೆಂಬ ಪಂದ್ಯದಲ್ಲಿ
ಪ್ರೇಮವೆಂಬ ಪಂದ್ಯದಲ್ಲಿ
ನಾನೂ ಸೋಲಲಿಲ್ಲಾ
ನೀನೂ ಗೆಲ್ಲಲಿಲ್ಲಾ
ಮನಸಿನಲಿ ಹುದುಗಿರಲು
ಯಾವುದೋ ಯೋಚನೆ
ನೋಡುವ ಈ ನೋಟವಿದೆ
ನೀಡಿದೆ ಸೂಚನೆ….
ನಿನ್ನೆ ಇಂದು.. ಇಂದು ನಾಳೆ
ಎಂದೂ ಆಗದು
ಸಂದು ಹೋದ ಕಾಲವೆಂದೂ
ಹಿಂದೆ ಬಾರದು
ಮಿಂಚಿ ಹೋದ ಮೋಹಗಾಗಿ
ಚಿಂತೆ ಏತಕೆ
|| ಪ್ರೇಮವೆಂಬ ಪಂದ್ಯದಲ್ಲಿ
ಪ್ರೇಮವೆಂಬ ಪಂದ್ಯದಲ್ಲಿ
ನಾನೂ ಸೋಲಲಿಲ್ಲಾ
ನೀನೂ ಗೆಲ್ಲಲಿಲ್ಲಾ…..||
ನವರಸದ ಸರಿಗಮವೆ
ಬಾಳಿನ ತೀಡಿಕೆ...
ಬೆರೆತಿರುವಾ ಮನಗಳಿಗೆ
ಪ್ರೇಮವೇ ಕಾಣಿಕೆ
ಹಗಲು ರಾತ್ರಿ ರಾತ್ರಿ ಹಗಲು
ಒಂದೇ ಆಗದು
ಒಲವು ಇರಲು ಶೋಕ
ಸೋಲು ಎಂದೂ ಕಾಣದು
ನೋವು ಕೂಡಾ ನಲಿವೇ
ನಮಗೆ ಒಂದುಗೂಡಲು...
|| ಪ್ರೇಮವೊಂದು ಪಂದ್ಯವಲ್ಲಾ
ಪ್ರೇಮವೊಂದು ಪಂದ್ಯವಲ್ಲಾ
ಸೋಲು ಗೆಲುವುಯೆಂಬ
ಮಾತೇ…ಅದರಲಿಲ್ಲಾ…..||
ಒಳಒಳಗೆ ತಳಮಳಿಸಿ
ಸೋತು ಸಾಕಾಗದೆ
ಕಳಕಳವೇ ಹಗಲಿರಳು
ಬೇಕೆ ಬೇಕಾಯಿತೆ…
ನೆಟ್ಟ ನೋಟ ಬಿಟ್ಟ ಬಾಣ
ಎಲ್ಲಿ ಹೊಕ್ಕಿತೋ
ಹುಟ್ಟಿನಲ್ಲೇ ಕೊಟ್ಟ ಆಸೆ
ಎಲ್ಲಿ ತಪ್ಪಿತೋ
ಬೆಟ್ಟದಂತ ಬಯಕೆ ಈಗ
ಏನು ದಕ್ಕಿತೋ
|| ಪ್ರೇಮವೆಂಬ ಪಂದ್ಯದಲ್ಲಿ
ಪ್ರೇಮವೆಂಬ ಪಂದ್ಯದಲ್ಲಿ
ನಾನೂ ಸೋಲಲಿಲ್ಲಾ
ನೀನೂ ಗೆಲ್ಲಲಿಲ್ಲಾ…..||
Please log in to see the full lyrics of this song.
-
ಪ್ರೇಮವೆಂಬ ಪಂದ್ಯದಲ್ಲಿ
ಪ್ರೇಮವೆಂಬ ಪಂದ್ಯದಲ್ಲಿ
ನಾನೂ ಸೋಲಲಿಲ್ಲಾ
ನೀನೂ ಗೆಲ್ಲಲಿಲ್ಲಾ
ಮನಸಿನಲಿ ಹುದುಗಿರಲು
ಯಾವುದೋ ಯೋಚನೆ
ನೋಡುವ ಈ ನೋಟವಿದೆ
ನೀಡಿದೆ ಸೂಚನೆ….
ನಿನ್ನೆ ಇಂದು.. ಇಂದು ನಾಳೆ
ಎಂದೂ ಆಗದು
ಸಂದು ಹೋದ ಕಾಲವೆಂದೂ
ಹಿಂದೆ ಬಾರದು
ಮಿಂಚಿ ಹೋದ ಮೋಹಗಾಗಿ
ಚಿಂತೆ ಏತಕೆ
|| ಪ್ರೇಮವೆಂಬ ಪಂದ್ಯದಲ್ಲಿ
ಪ್ರೇಮವೆಂಬ ಪಂದ್ಯದಲ್ಲಿ
ನಾನೂ ಸೋಲಲಿಲ್ಲಾ
ನೀನೂ ಗೆಲ್ಲಲಿಲ್ಲಾ…..||
ನವರಸದ ಸರಿಗಮವೆ
ಬಾಳಿನ ತೀಡಿಕೆ...
ಬೆರೆತಿರುವಾ ಮನಗಳಿಗೆ
ಪ್ರೇಮವೇ ಕಾಣಿಕೆ
ಹಗಲು ರಾತ್ರಿ ರಾತ್ರಿ ಹಗಲು
ಒಂದೇ ಆಗದು
ಒಲವು ಇರಲು ಶೋಕ
ಸೋಲು ಎಂದೂ ಕಾಣದು
ನೋವು ಕೂಡಾ ನಲಿವೇ
ನಮಗೆ ಒಂದುಗೂಡಲು...
|| ಪ್ರೇಮವೊಂದು ಪಂದ್ಯವಲ್ಲಾ
ಪ್ರೇಮವೊಂದು ಪಂದ್ಯವಲ್ಲಾ
ಸೋಲು ಗೆಲುವುಯೆಂಬ
ಮಾತೇ…ಅದರಲಿಲ್ಲಾ…..||
ಒಳಒಳಗೆ ತಳಮಳಿಸಿ
ಸೋತು ಸಾಕಾಗದೆ
ಕಳಕಳವೇ ಹಗಲಿರಳು
ಬೇಕೆ ಬೇಕಾಯಿತೆ…
ನೆಟ್ಟ ನೋಟ ಬಿಟ್ಟ ಬಾಣ
ಎಲ್ಲಿ ಹೊಕ್ಕಿತೋ
ಹುಟ್ಟಿನಲ್ಲೇ ಕೊಟ್ಟ ಆಸೆ
ಎಲ್ಲಿ ತಪ್ಪಿತೋ
ಬೆಟ್ಟದಂತ ಬಯಕೆ ಈಗ
ಏನು ದಕ್ಕಿತೋ
|| ಪ್ರೇಮವೆಂಬ ಪಂದ್ಯದಲ್ಲಿ
ಪ್ರೇಮವೆಂಬ ಪಂದ್ಯದಲ್ಲಿ
ನಾನೂ ಸೋಲಲಿಲ್ಲಾ
ನೀನೂ ಗೆಲ್ಲಲಿಲ್ಲಾ…..||
Prema Vemba Pandyadalli song lyrics from Kannada Movie Preethisi Nodu starring Vishnuvardhan, Aarathi, Srinivasamurthy, Lyrics penned by Geethapriya Sung by S Janaki, Music Composed by Vijaya Bhaskar, film is Directed by Geethapriya and film is released on 1981