ಹೇ.. ಪ್ರಜಾಪ್ರಭುತ್ವವೇ ನಿನಗೆ
ಕೋಟಿ ನಮಸ್ಕಾರ
ಎಲ್ಲೆಲ್ಲೂ ನಿನ್ನ ವಿಕೃತ ವಿರಾಟ
ಸ್ವರೂಪದ ಸಾಕ್ಷಾತ್ಕಾರ
ಪ್ರಜೆಯು ಪ್ರಭುವಾಗಲಿಲ್ಲಾ ಅಹ್ಹ..
ಗುಲಾಮಗಿರಿ ಬಿಡಲಿಲ್ಲಾ
ಸ್ವಾರ್ಥಿಗಳ ಕೋಟೆಯಲೇ
ನಿನಗೆ.. ಅಹ್ಹಹ್ಹ ಸತ್ಕಾರ…
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಬಾಪೂಜಿ ಕಂಡ ಕನಸೆಲ್ಲಾ ಬರಿದಾಯ್ತೆ
ಬಡವರ ಆಸೆ ಆಕಾಂಕ್ಷೆ
ಎಲ್ಲ ಕಣ್ಣಿರಲೇ ತೇಲಿಹೋಯ್ತೆ
|| ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ…||
ಸ್ವಾರ್ಥಿಗಳಿಗೆ ಕಾಲ
ಇಲ್ಲಿ ಎಲ್ಲವೂ ಮೋಸಜಾಲ
ಲಂಚವ ಕೊಳ್ಳುವ
ಗೋಮುಖ ವ್ಯಾಘ್ರಗಳಂತೆ...
ನೋಟುಗಳನು ಚೆಲ್ಲಿ
ಬರಿ ಓಟುಗಳನು ಗಳಿಸಿ
ಅಧಿಕಾರ ದರ್ಪದೆ
ಹಾರಾಡೋ ಪಾಪಿಗಳಂತೆ...
ಅರ್ಧರಾತ್ರಿಯಲ್ಲಿ ಬಂದ ಸ್ವಾತಂತ್ರ್ಯವು
ಕತ್ತಲೆಯಲ್ಲೇ ನಿಂತಾಗ
ಅನೀತಿ ಅನ್ಯಾಯ ತಾಂಡವ ಮಾಡುತ
ಸತ್ಯ ಧರ್ಮಗಳು ಸತ್ತಾಗ
ಕೇಳೋಂಥ ಕಿವಿ ಇಲ್ಲಾ
ಕಾಣೋಂಥ ಕಣ್ಣಿಲ್ಲಾ
ನಮ್ಮ ತಾಯಿಗಿನ್ನು ಬೇಡಿ ತಪ್ಪಿಲ್ಲಾ ..
|| ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ…||
ಖುರ್ಚಿಯ ಮೋಹಕೆ
ಇಲ್ಲಿ ಕುರುಕ್ಷೇತ್ರವು ಆಗಿದೆ ನಿತ್ಯ
ತಾಯಿಯ ಒಡಲ್ಲೆಲ್ಲಾ
ಕೆಂಪಾಯ್ತು ರಕ್ತದೆ ಮಿಂದು
ಪ್ರಶ್ನೆಗೆ ಪರಿಹಾರವಿಲ್ಲಾ
ಹಣ ಧರಿಸೋಕೆ ಕಾಲವೇ ಎಲ್ಲಾ
ಹಗಲು ದರೋಡೆ ಮಾಡೋರ
ಅಂತ್ಯವು ಎಂದು
ಹೊಟ್ಟೆಗೂ ಬಟ್ಟೆಗೂ ಗತಿಯಿಲ್ಲ
ಇಲ್ಲಿ ನಿತ್ಯವೂ ಬಾಳಿನ ಹೋರಾಟ
ಭೂಮಿಯ ಮೇಲೆ ನರಕವ ಕಾಣುವ
ಬಡತನ ಬಾಳೇ ಜಂಜಾಟ
ಬದುಕಿದ್ದೂ ಸುಖವಿಲ್ಲ
ಕಣ್ಣೀರ್ಗೆ ಕೊನೆಯಿಲ್ಲ
ನಿಜ ಪ್ರಜಾ ರಾಜ್ಯ
ಎಂದೋ ಗೊತ್ತಿಲ್ಲಾ ..
|| ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಬಾಪೂಜಿ ಕಂಡ ಕನಸೆಲ್ಲಾ ಬರಿದಾಯ್ತೆ
ಬಡವರ ಆಸೆ ಆಕಾಂಕ್ಷೆ
ಎಲ್ಲ ಕಣ್ಣಿರಲೇ ತೇಲಿಹೋಯ್ತೆ
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಹೇ.. ಪ್ರಜಾ ಪ್ರಭುತ್ವ ಕೇಳು ಕೇಳು..
ನಿನ್ನ ಮಹತ್ವ ಅಹ್ಹಹ್ಹಹ್ಹ …..||
ಹೇ.. ಪ್ರಜಾಪ್ರಭುತ್ವವೇ ನಿನಗೆ
ಕೋಟಿ ನಮಸ್ಕಾರ
ಎಲ್ಲೆಲ್ಲೂ ನಿನ್ನ ವಿಕೃತ ವಿರಾಟ
ಸ್ವರೂಪದ ಸಾಕ್ಷಾತ್ಕಾರ
ಪ್ರಜೆಯು ಪ್ರಭುವಾಗಲಿಲ್ಲಾ ಅಹ್ಹ..
ಗುಲಾಮಗಿರಿ ಬಿಡಲಿಲ್ಲಾ
ಸ್ವಾರ್ಥಿಗಳ ಕೋಟೆಯಲೇ
ನಿನಗೆ.. ಅಹ್ಹಹ್ಹ ಸತ್ಕಾರ…
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಬಾಪೂಜಿ ಕಂಡ ಕನಸೆಲ್ಲಾ ಬರಿದಾಯ್ತೆ
ಬಡವರ ಆಸೆ ಆಕಾಂಕ್ಷೆ
ಎಲ್ಲ ಕಣ್ಣಿರಲೇ ತೇಲಿಹೋಯ್ತೆ
|| ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ…||
ಸ್ವಾರ್ಥಿಗಳಿಗೆ ಕಾಲ
ಇಲ್ಲಿ ಎಲ್ಲವೂ ಮೋಸಜಾಲ
ಲಂಚವ ಕೊಳ್ಳುವ
ಗೋಮುಖ ವ್ಯಾಘ್ರಗಳಂತೆ...
ನೋಟುಗಳನು ಚೆಲ್ಲಿ
ಬರಿ ಓಟುಗಳನು ಗಳಿಸಿ
ಅಧಿಕಾರ ದರ್ಪದೆ
ಹಾರಾಡೋ ಪಾಪಿಗಳಂತೆ...
ಅರ್ಧರಾತ್ರಿಯಲ್ಲಿ ಬಂದ ಸ್ವಾತಂತ್ರ್ಯವು
ಕತ್ತಲೆಯಲ್ಲೇ ನಿಂತಾಗ
ಅನೀತಿ ಅನ್ಯಾಯ ತಾಂಡವ ಮಾಡುತ
ಸತ್ಯ ಧರ್ಮಗಳು ಸತ್ತಾಗ
ಕೇಳೋಂಥ ಕಿವಿ ಇಲ್ಲಾ
ಕಾಣೋಂಥ ಕಣ್ಣಿಲ್ಲಾ
ನಮ್ಮ ತಾಯಿಗಿನ್ನು ಬೇಡಿ ತಪ್ಪಿಲ್ಲಾ ..
|| ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ…||
ಖುರ್ಚಿಯ ಮೋಹಕೆ
ಇಲ್ಲಿ ಕುರುಕ್ಷೇತ್ರವು ಆಗಿದೆ ನಿತ್ಯ
ತಾಯಿಯ ಒಡಲ್ಲೆಲ್ಲಾ
ಕೆಂಪಾಯ್ತು ರಕ್ತದೆ ಮಿಂದು
ಪ್ರಶ್ನೆಗೆ ಪರಿಹಾರವಿಲ್ಲಾ
ಹಣ ಧರಿಸೋಕೆ ಕಾಲವೇ ಎಲ್ಲಾ
ಹಗಲು ದರೋಡೆ ಮಾಡೋರ
ಅಂತ್ಯವು ಎಂದು
ಹೊಟ್ಟೆಗೂ ಬಟ್ಟೆಗೂ ಗತಿಯಿಲ್ಲ
ಇಲ್ಲಿ ನಿತ್ಯವೂ ಬಾಳಿನ ಹೋರಾಟ
ಭೂಮಿಯ ಮೇಲೆ ನರಕವ ಕಾಣುವ
ಬಡತನ ಬಾಳೇ ಜಂಜಾಟ
ಬದುಕಿದ್ದೂ ಸುಖವಿಲ್ಲ
ಕಣ್ಣೀರ್ಗೆ ಕೊನೆಯಿಲ್ಲ
ನಿಜ ಪ್ರಜಾ ರಾಜ್ಯ
ಎಂದೋ ಗೊತ್ತಿಲ್ಲಾ ..
|| ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಬಾಪೂಜಿ ಕಂಡ ಕನಸೆಲ್ಲಾ ಬರಿದಾಯ್ತೆ
ಬಡವರ ಆಸೆ ಆಕಾಂಕ್ಷೆ
ಎಲ್ಲ ಕಣ್ಣಿರಲೇ ತೇಲಿಹೋಯ್ತೆ
ಹೇ.. ಪ್ರಜಾ ಪ್ರಭುತ್ವ ಕೇಳು ನಿನ್ನ ಮಹತ್ವ
ಹೇ.. ಪ್ರಜಾ ಪ್ರಭುತ್ವ ಕೇಳು ಕೇಳು..
ನಿನ್ನ ಮಹತ್ವ ಅಹ್ಹಹ್ಹಹ್ಹ …..||