Mutthina Natthondu Lyrics

in Post Master

LYRIC

ಮುತ್ತಿನ ನತ್ತೊಂದು ಮೂಗಿಂದ ಜಾರಿತು
ಮುತ್ತಿನ ನತ್ತೊಂದು ಮೂಗಿಂದ ಜಾರಿತು
ಮೈಸೂರಿನಲ್ಲೆಲ್ಲೋ ಬಿದ್ದು ಕಳೆದೋಯ್ತು
ಬಿದ್ದು ಕಳೆದೋಯ್ತು
 
|| ಮುತ್ತಿನ ನತ್ತೊಂದು ಮೂಗಿಂದ ಜಾರಿತು...||
 
ಬೆಂಗಳೂರಿನ ರಸಿಕ ಬೇರೊಂದ ನೀ ತಾರೋ...
ಚಿಕ್ಕಮಗಳೂರಿನಲಿ ಮುತ್ತ ಕೊಡುವೆನು ಬಾರೋ ...
ಓ ಓ ಓ ಓ ಓ...
ಹಾಸನದ ಹುರಿಯಾಳೇ ದುರ್ಗದ ಬಯಲಾಳೇ
ಹಾಸನದ ಹುರಿಯಾಳೇ ದುರ್ಗದ ಬಯಲಾಳೇ
ಶಿವಮೊಗ್ಗೆ ಬಿಲ್ಲಾಳೆ ಬನ್ನಿ ಕೊಡಗಿಗೆ ನಾಳೆ...
ಶಿವಮೊಗ್ಗೆ ಬಿಲ್ಲಾಳೆ ಬನ್ನಿ ಕೊಡಗಿಗೆ ನಾಳೆ ...

 
|| ಮುತ್ತಿನ ನತ್ತೊಂದು ಮೂಗಿಂದ ಜಾರಿತು...||
 
ಎದೆಜಾರೆ ದಾವಣಿಯು ಕಣ್ಣು ತಿರುಗಿಸಿ ನಿಂತ.... 
ದಾವಣಗೆರೆಯಾತ ಹೋಗಯ್ಯಾ.. ಸಾಕು ಪಂಥ 
ಹುಬ್ಬು ಹಾರಿಸಬೇಡ ಹುಬ್ಬಳ್ಳಿ ಸರದಾರ 
ಹುಬ್ಬು ಹಾರಿಸಬೇಡ ಹುಬ್ಬಳ್ಳಿ ಸರದಾರ 
ಕಬ್ಬು ಸಿಹಿಗಿಂತ ಸಿಹಿ ಕಾರವಾರದ ಹುಡುಗಿ 
ಕಬ್ಬು ಸಿಹಿಗಿಂತ ಸಿಹಿ ಕಾರವಾರದ ಹುಡುಗಿ
 
|| ಮುತ್ತಿನ ನತ್ತೊಂದು ಮೂಗಿಂದ ಜಾರಿತು...||
 
ಮಂಗಳೂರು ಪಣಿಯಾಡಿ ತಪ್ಪಿ ಹೋದೆಯ ನೋಡಿ
ಧಾರವಾಡ ಬೆಳಗಾವಿ ಚೆಲುವೆಲ್ಲೋ ಒಡನಾಡಿ...
ಆ ಆ ಆ.... ಆ ಆ ಆ... 
ಬಳ್ಳಾರಿ ಹೊಸಪೇಟೆ ದೊಡ್ಡಪೇಟದ ಶೂರ  
ಬಳ್ಳಾರಿ ಹೊಸಪೇಟೆ ದೊಡ್ಡಪೇಟದ ಶೂರ  
ವಿಜಯಪುರಿಯ ಕಡೆಗೆ ದಯಮಾಡಿ ಬಾರಾ 
ವಿಜಯಪುರಿಯ ಕಡೆಗೆ ದಯಮಾಡಿ ಬಾರಾ
 
|| ಮುತ್ತಿನ ನತ್ತೊಂದು ಮೂಗಿಂದ ಜಾರಿತು
ಮೈಸೂರಿನಲ್ಲೆಲ್ಲೋ ಬಿದ್ದು ಕಳೆದೋಯ್ತು
ಬಿದ್ದು ಕಳೆದೋಯ್ತು
ಮುತ್ತಿನ ನತ್ತೊಂದು ಮೂಗಿಂದ ಜಾರಿತು...||
 

Mutthina Nathondu song lyrics from Kannada Movie Post Master starring B M Venkatesh, G V Shivaraj, Vandhana, Lyrics penned by G V Iyer Sung by L R Eswari, Music Composed by Vijaya Bhaskar, film is Directed by G V Iyer and film is released on 1964