Kannadada Kuladevi Kapadu Lyrics

in Post Master

Video:

LYRIC

ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ
ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀಯೆ
ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ

 
ಪ್ರೇಮ ಕರುಣೆಯ ಕಲಿಸಿ
ಶಾಂತಿ ಸಹನೆಯ ಬೆಳೆಸಿ
ಕಾಮ ಕ್ರೋಧವನಳಿಸಿ ಕಾಪಾಡು ತಾಯೆ
ಪ್ರೇಮ ಕರುಣೆಯ ಕಲಿಸಿ
ಶಾಂತಿ ಸಹನೆಯ ಬೆಳೆಸಿ
ಕಾಮ ಕ್ರೋಧವನಳಿಸಿ ಕಾಪಾಡು ತಾಯೆ
ಒಂದಾದ ದೇಶದಲಿ ಹೊಂದಿಬಾಳದ ಸುತರ
ಹೊಸ ಬೆಸಗೆಯಲಿ ಬಿಗಿದು ಒಂದುಗೂಡಿಸೆ ತಾಯೆ…

||ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ …||
               
ಯಾವೆಣ್ಣೆಯಾದರೂ ಬೆಳಗುವುದೇ ಗುರಿಯೆಂಬ 
ತತ್ವವನು ನೀನೆತ್ತಿ ತೋರು ಬಾ ತಾಯೆ… 
ಯಾವೆಣ್ಣೆಯಾದರೂ ಬೆಳಗುವುದೇ ಗುರಿಯೆಂಬ 
ತತ್ವವನು ನೀನೆತ್ತಿ ತೋರು ಬಾ ತಾಯೆ… 
ಎದೆಯಾಂತರಾಳದಲ್ಲಿ ಪುಟಿವ ಕಾರಂಜಿಯಲಿ 
ಒಂದಾಗಿ ಕೂಗಲಿ ಕನ್ನಡಕನ್ನಡ…. 
 
 
||ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ
ಮುನ್ನಡೆಯ ಕನ್ನಡದ ದಾರಿ ದೀವಿಗೆ ನೀಯೆ||
||ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ||

Kannadada Kuladevi Kapadu song lyrics from Kannada Movie Post Master starring B M Venkatesh, G V Shivaraj, Vandhana, Lyrics penned by G V Iyer Sung by P B Srinivas, Music Composed by Vijaya Bhaskar, film is Directed by G V Iyer and film is released on 1964