Nanu Ninna Jodi Lyrics

in Point Parimala

LYRIC

ನಾನು ನಿನ್ನ ಜೋಡಿ
ನೀನು ನನ್ನ ಜೋಡಿ
ಜೋಡಿ ಹಕ್ಕಿ ನಾವಾಗಿ
ಬಾ ಹಾಡುವ
 
ನಾನು ನಿನ್ನ ಜೋಡಿ
ನೀನು ನನ್ನ ಜೋಡಿ
ಜೋಡಿ ಹಕ್ಕಿ ನಾವಾಗಿ
ಬಾ ಹಾಡುವ

ಸವಿ ಮಾತಿಂದ
ನುಡಿ ಮುತ್ತಿಂದ
ಸವಿ ಮಾತಿಂದ
ನುಡಿ ಮುತ್ತಿಂದ
ಚಿನ್ನ ಇಂದು
ಕಂಡೆ ನಾನು ಆನಂದ

|| ನಾನು ನಿನ್ನ ಜೋಡಿ
ನೀನು ನನ್ನ ಜೋಡಿ
ಜೋಡಿ ಹಕ್ಕಿ ನಾವಾಗಿ
ಬಾ ಹಾಡುವ….||
 
ಹೇಹೇಹೇ ...
ಡಿಡಿರರ ಡಿಡಿಏಏಏ..
ರುರೂರೂರ 
ರುರೂರೂರ  ರುರೂರೂರ
ಲೇ... ಹೇಹೇಹೇಹೇ
ಡಿಡಿರರ ಡಿಡಿಏಏಏ..

ರುರೂರೂರು 
ರುರೂರೂರು  ರುರೂರೂರು
ಡಿಡಿರರ ಡಿಡಿಏಏಏ..
ಡಿಡಿರರ ಡಿಡಿಏಏಏ..
ಡಿಡಿರರ ಡಿಡಿಏಏಏ..

ಹಗಲಿಗೆ ಸೂರ್ಯ ಜೋಡಿಯು
ಇರುಳಿಗೆ ಚಂದ್ರ ಜೋಡಿಯು
ಮುದ್ದು ಹೆಣ್ಣೆ ನನಗೆಂದು ನೀನು
ಹಿತವಾದ ಸರಿಯಾದ ಜೋಡಿ
ಹಿತವಾದ ಸರಿಯಾದ ಜೋಡಿ
ಬಾನಿಗೆ ಮೋಡ ಜೋಡಿಯು
ಬಳ್ಳಿಗೆ ಮರವು ಜೋಡಿಯು
ನಿನ್ನೊಡನೆ ನಾನು ಎಂದೆಂದು
ಹೀಗೆ ಇರುವಾಸೆ ನಿನ್ನನ್ನು ನೋಡಿ
ಇರುವಾಸೆ ನಿನ್ನನ್ನು ಕೂಡಿ
ಎಲ್ಲೂ ಇಲ್ಲ ಇಂದು
ಇಂಥ ಒಳ್ಳೆ ಜೋಡಿಯು
 
|| ನಾನು ನಿನ್ನ ಜೋಡಿ
ಹ್ಹ ನೀನು ನನ್ನ ಜೋಡಿ
ಜೋಡಿ ಹಕ್ಕಿ ನಾವಾಗಿ
ಬಾ ಹಾಡುವ….||

ಲಲಲ್ಲಲ್ಲಲಾ... ಲಲಲ್ಲಲ್ಲ
ಲಾರರಾ ಓಹೋಹೋ  
 
ಕಣ್ಣಲಿ ನಿನ್ನ ಆಸೆಯು
ಮನದಲೀ ನಿನ್ನ ಆಸೆಯು
ಕಡಲಂತೆ ಆಸೆ ಎದೆಯಲ್ಲಿ ತುಂಬಿ
ನಾ ಕಂಡೆ ಸಂತೋಷವನ್ನು
ನಾ ಕಂಡೆ ಸಂತೋಷವನ್ನು
ಹೆಣ್ಣಿಗೆ ಗಂಡಿನಾಸೆಯು
ಗಂಡಿಗೆ ಹೆಣ್ಣಿನಾಸೆಯು
ಆಸೆ ತರುವ ಸಂಸಾರದಲ್ಲಿ
ಕಾಣೋಣ ಆನಂದವನ್ನು
ಕಾಣೋಣ ಆನಂದವನ್ನು
ನಿನ್ನ ಬಿಟ್ಟು ಇನ್ನು
ನಾನು ಬಾಳಲಾರೆನು
 
|| ನಾನು ನಿನ್ನ ಜೋಡಿ
ನೀನು ನನ್ನ ಜೋಡಿ
ಜೋಡಿ ಹಕ್ಕಿ ನಾವಾಗಿ
ಬಾ ಹಾಡುವ

ಸವಿ ಮಾತಿಂದ
ನುಡಿ ಮುತ್ತಿಂದ
ಚಿನ್ನ ಇಂದು ಕಂಡೆ
ನಾನು ಆನಂದ
 
ನಾನು ನಿನ್ನ ಜೋಡಿ
ಹ್ಹ ನೀನು ನನ್ನ ಜೋಡಿ
ಜೋಡಿ ಹಕ್ಕಿ ನಾವಾಗಿ
ಬಾ ಹಾಡುವ.... ||

Nanu Ninna Jodi song lyrics from Kannada Movie Point Parimala starring Srinath, Manjula,, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by V Somashekar and film is released on 1980