ಕಿರುದೀಪ ನೀ ಬೆಳಗುತಿರು ಸುಳಿಗಾಳಿಗು ಅಂಜದಿರು
ನಿನ್ನೊಂದಿಗೆ ಹೆತ್ತವರು ಇನ್ನೇತಕೆ ಕಣ್ಣೀರು
ನೇಸರನ ಕಾಡೊ ಗ್ರಹಣ ಪ್ರತಿ ಜೀವಿಗು ಇದೆಯೊ ಮರಣ
ಬೀಳ್ಕೊಡು ನಿನ್ನೆಲ್ಲ ಮೌನ ಮರುಜೀವನ ನಿನ್ನ ಭೇಟಿಗೆ ಕಾಯುತ್ತಿದೆ
ಹೋರಾಡು ಜಯವೆಂದು ನಿನ್ನದು
ತಂದೆಯ ಒಲವಲ್ಲೆ ಇದೆ ಗೆಲ್ಲೊ ಛಲವು
ಆ ವೀರಭದ್ರನ ದಯೆ ಎಂದು ಇಹುದು
ಪೂರ್ವಜರ ಕನಸ್ಸೆ ನಿನ್ನ ಬಲವು
ನೂರು ನೋವನ್ನು ಬಲಿಕೊಟ್ಟು ಸಜ್ಜಾಗುವ
ಒಬ್ಬ ಯೋಧನಿಗೆ ಕಾಲ್ದಳವು ಸರಿಸಾಟಿಯೆ
ಬೀಳೊ ಪೆಟ್ಟನ್ನು ಸಹಿಸುತ್ತ ಶಿಲೆಯಾಗು ನೀ
ನೋಡೊ ಪರಶಿವಗು ಕೇಳುವುದು ನಿನ್ನ ಮಾರ್ದನಿ
ಧರಣಿಯೆ ದಣಿಯಲಿ ನೀನಿಡೊ ಹೆಜ್ಜೆಗೆ
ಜಗವಿದು ಕುಣಿಯಲಿ ನೀನು ಕಟ್ಟಿದ ಗೆಜ್ಜೆನಾದಕ್ಕೆ
ಕೈಯಲಿ ಹಿಡಿದಿರೊ ಖಡ್ಗದ ತುದಿಯಲೆ
ಗೀಚು ನೀ ಭುವಿಯಿದು ಎಂದು ಅಳಿಸದ ಅಮರ ಇತಿಹಾಸ
ಕಿರುದೀಪ ನೀ ಬೆಳಗುತಿರು ಸುಳಿಗಾಳಿಗು ಅಂಜದಿರು
ನಿನ್ನೊಂದಿಗೆ ಹೆತ್ತವರು ಇನ್ನೇತಕೆ ಕಣ್ಣೀರು
ನೇಸರನ ಕಾಡೊ ಗ್ರಹಣ ಪ್ರತಿ ಜೀವಿಗು ಇದೆಯೊ ಮರಣ
ಬೀಳ್ಕೊಡು ನಿನ್ನೆಲ್ಲ ಮೌನ ಮರುಜೀವನ ನಿನ್ನ ಭೇಟಿಗೆ ಕಾಯುತ್ತಿದೆ
ಹೋರಾಡು ಜಯವೆಂದು ನಿನ್ನದು
ತಂದೆಯ ಒಲವಲ್ಲೆ ಇದೆ ಗೆಲ್ಲೊ ಛಲವು
ಆ ವೀರಭದ್ರನ ದಯೆ ಎಂದು ಇಹುದು
ಪೂರ್ವಜರ ಕನಸ್ಸೆ ನಿನ್ನ ಬಲವು
ನೂರು ನೋವನ್ನು ಬಲಿಕೊಟ್ಟು ಸಜ್ಜಾಗುವ
ಒಬ್ಬ ಯೋಧನಿಗೆ ಕಾಲ್ದಳವು ಸರಿಸಾಟಿಯೆ
ಬೀಳೊ ಪೆಟ್ಟನ್ನು ಸಹಿಸುತ್ತ ಶಿಲೆಯಾಗು ನೀ
ನೋಡೊ ಪರಶಿವಗು ಕೇಳುವುದು ನಿನ್ನ ಮಾರ್ದನಿ
ಧರಣಿಯೆ ದಣಿಯಲಿ ನೀನಿಡೊ ಹೆಜ್ಜೆಗೆ
ಜಗವಿದು ಕುಣಿಯಲಿ ನೀನು ಕಟ್ಟಿದ ಗೆಜ್ಜೆನಾದಕ್ಕೆ
ಕೈಯಲಿ ಹಿಡಿದಿರೊ ಖಡ್ಗದ ತುದಿಯಲೆ
ಗೀಚು ನೀ ಭುವಿಯಿದು ಎಂದು ಅಳಿಸದ ಅಮರ ಇತಿಹಾಸ
Kirudeepa Nee song lyrics from Kannada Movie Paramvah starring Prem Sidegal, Mytri, Ganesh Heggodu, Lyrics penned by Nagesh Kundapura ,Sanketh Ambali & Kiran N R pura. Sung by Mehaboob Saab, Music Composed by Aparajith, Jos Jossey, film is Directed by Santosh Kaidalaand film is released on 2023