ಆಡೊ ಮಾತೆ
ಕೇಳೊ ಮಾತೆ
ಆಡೊ ಮಾತೆ
ಕೇಳೊ ಮಾತೆ
ತಿದ್ದಿ ಓದೋ ಬುದ್ದಿ ಮಾತೆ
ಹಲವು ತಾಯನುಡಿಯ ತನ್ನ
ಕನ್ನಡದೊಳು ಸಲಹಿ ತಂದ ನಾಡಿಗೀತೆ
ನಮ್ಮ ನಾಡಿಗೀತೆ
ಒಡನಾಡಿಗೀತೆ
ನಮ್ಮ ನಾಡಿಗೀತೆ
ಗಾದೆ ಮಾತೇ
ಗಗನ ಗಹನದ ಮಾತೇ
ಜನಪದರ ಜಾಣಪದರ ಮಾತೇ
||ನಾಡೀಗೀತೆ ನಮ್ಮ ನಾಡಗೀತೆ
ಕರುನಾಡಿನ ನಗುವೇ
ನಮ್ಮ ನಾಡಿಗೀತೆ||
ಅನ್ನಕ್ಕೆ ಅನ್ನವಿದು
ಚಿನ್ನಕ್ಕೆ ಚಿನ್ನವಿದು
ಮಾನಕ್ಕೆ ಮಾನವಿದು ಮಹಾಕನ್ನಡ
ರಾಜ್ಯಕ್ಕೆ ರಾಜನಿದು
ರಾಷ್ಟ್ರಕ್ಕೆ ರಕ್ಷೆಯಿದು
ಭಾಷಾ ಬಂಧುತ್ವದಲ್ಲಿ ಹಿರಿ ಕನ್ನಡ
ರಸಋಷಿಗಳಿಗೆ
ಇದು ಸೃಷ್ಟಿಯ ತಾಣ
ಜನತಂತ್ರಕ್ಕೆ
ಇದು ಸುಲಲಿತ ಗಾಣ
ಸಮಪಾಲು ಸಮಬಾಳು
ನನ್ನಾತ್ಮವೆಂದುನಡೆವ
ತಾಯ್ನುಡಿಗೆ ತಲೆಬಾಗಿರೋ
ಕನ್ನಡಮಾತೆ ನಮ್ಮ ಜೀವನದಾತೆ
ಮಾದೇವ್ನ ಮನಮೆಚ್ಚೊ ಮಾತೆ
||ನಾಡಿಗೀತೆ ನಮ್ಮ ನಾಡಿಗೀತೆ
ಮೃದುವಚನಗಳೇ ನಮ್ಮ ನಾಡಿಗೀತೆ||
ಸಂಯುಕ್ತ ರಾಜ್ಯಗಳ
ಶ್ರೀಮಂತ ಭಾಷೆಗಳ
ಹಕ್ಕಿನ ಆದೇಶದಲ್ಲಿ ಇದೆ ಇಂಡಿಯಾ
ಸಂಪತ್ತನ್ನು ವಿತರಿಸುತ
ಬಡತನವ ಎದುರಿಸುತ
ಧರ್ಮಗಳ ರಕ್ಷಿಸುತ
ಇದೇ ಭಾರತ
ಸಂವಿಧಾನವೇ
ಪ್ರತಿ ಭಾಷೆಯ ಮಿತ್ರ
ಸಿರಿಗನ್ನಡವೇ
ನಮ್ಮ ಹಕ್ಕಿನ ಪತ್ರ
ಹಕ್ಕಿನ ನೆಲ
ಹಕ್ಕಿನ ಜಲ
ನಮ್ಮದೆಂದು ವಾದಿಸಲು
ಕನ್ನಡವ ಕಾಪಾಡಿರೊ
ನೀಡೊ ಮಾತೆ
ನೀಡಿ ಪಡೆಯೊ ಮಾತೆ
ಅಭಿಮಾನ ಉಕ್ಕೇರಿಸೊ ಮಾತೆ
||ನಾಡಿಗೀತೆ ನಮ್ಮ ನಾಡಿಗೀತೆ
ಜಯಜಯಜಯತೇ ಕರ್ನಾಟಕ ಮಾತೆ||
ಆಡೊ ಮಾತೆ
ಕೇಳೊ ಮಾತೆ
ಆಡೊ ಮಾತೆ
ಕೇಳೊ ಮಾತೆ
ತಿದ್ದಿ ಓದೋ ಬುದ್ದಿ ಮಾತೆ
ಹಲವು ತಾಯನುಡಿಯ ತನ್ನ
ಕನ್ನಡದೊಳು ಸಲಹಿ ತಂದ ನಾಡಿಗೀತೆ
ನಮ್ಮ ನಾಡಿಗೀತೆ
ಒಡನಾಡಿಗೀತೆ
ನಮ್ಮ ನಾಡಿಗೀತೆ
ಗಾದೆ ಮಾತೇ
ಗಗನ ಗಹನದ ಮಾತೇ
ಜನಪದರ ಜಾಣಪದರ ಮಾತೇ
||ನಾಡೀಗೀತೆ ನಮ್ಮ ನಾಡಗೀತೆ
ಕರುನಾಡಿನ ನಗುವೇ
ನಮ್ಮ ನಾಡಿಗೀತೆ||
ಅನ್ನಕ್ಕೆ ಅನ್ನವಿದು
ಚಿನ್ನಕ್ಕೆ ಚಿನ್ನವಿದು
ಮಾನಕ್ಕೆ ಮಾನವಿದು ಮಹಾಕನ್ನಡ
ರಾಜ್ಯಕ್ಕೆ ರಾಜನಿದು
ರಾಷ್ಟ್ರಕ್ಕೆ ರಕ್ಷೆಯಿದು
ಭಾಷಾ ಬಂಧುತ್ವದಲ್ಲಿ ಹಿರಿ ಕನ್ನಡ
ರಸಋಷಿಗಳಿಗೆ
ಇದು ಸೃಷ್ಟಿಯ ತಾಣ
ಜನತಂತ್ರಕ್ಕೆ
ಇದು ಸುಲಲಿತ ಗಾಣ
ಸಮಪಾಲು ಸಮಬಾಳು
ನನ್ನಾತ್ಮವೆಂದುನಡೆವ
ತಾಯ್ನುಡಿಗೆ ತಲೆಬಾಗಿರೋ
ಕನ್ನಡಮಾತೆ ನಮ್ಮ ಜೀವನದಾತೆ
ಮಾದೇವ್ನ ಮನಮೆಚ್ಚೊ ಮಾತೆ
||ನಾಡಿಗೀತೆ ನಮ್ಮ ನಾಡಿಗೀತೆ
ಮೃದುವಚನಗಳೇ ನಮ್ಮ ನಾಡಿಗೀತೆ||
ಸಂಯುಕ್ತ ರಾಜ್ಯಗಳ
ಶ್ರೀಮಂತ ಭಾಷೆಗಳ
ಹಕ್ಕಿನ ಆದೇಶದಲ್ಲಿ ಇದೆ ಇಂಡಿಯಾ
ಸಂಪತ್ತನ್ನು ವಿತರಿಸುತ
ಬಡತನವ ಎದುರಿಸುತ
ಧರ್ಮಗಳ ರಕ್ಷಿಸುತ
ಇದೇ ಭಾರತ
ಸಂವಿಧಾನವೇ
ಪ್ರತಿ ಭಾಷೆಯ ಮಿತ್ರ
ಸಿರಿಗನ್ನಡವೇ
ನಮ್ಮ ಹಕ್ಕಿನ ಪತ್ರ
ಹಕ್ಕಿನ ನೆಲ
ಹಕ್ಕಿನ ಜಲ
ನಮ್ಮದೆಂದು ವಾದಿಸಲು
ಕನ್ನಡವ ಕಾಪಾಡಿರೊ
ನೀಡೊ ಮಾತೆ
ನೀಡಿ ಪಡೆಯೊ ಮಾತೆ
ಅಭಿಮಾನ ಉಕ್ಕೇರಿಸೊ ಮಾತೆ
||ನಾಡಿಗೀತೆ ನಮ್ಮ ನಾಡಿಗೀತೆ
ಜಯಜಯಜಯತೇ ಕರ್ನಾಟಕ ಮಾತೆ||