Elle Nodu Ene Madu Lyrics

in Olavu Moodidaga

Video:

LYRIC

ಎಲ್ಲೇ ನೋಡು ಏನೇ ಮಾಡು
ಬಾಳಲಿ ಸುಖವೇ ಇಲ್ಲಾ
ಶಾಂತಿಯು ಇಲ್ಲಾ,
ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ,
ಎಲ್ಲೂ ನೆಮ್ಮದಿ ಇಲ್ಲಾ
 
ಎಲ್ಲೇ ನೋಡು ಏನೇ ಮಾಡು
ಬಾಳಲಿ ಸುಖವೇ ಇಲ್ಲಾ
ಶಾಂತಿಯು ಇಲ್ಲಾ,
ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ,
ಎಲ್ಲೂ ನೆಮ್ಮದಿ ಇಲ್ಲಾ..
 
|| ಎಲ್ಲೇ ನೋಡು ಏನೇ ಮಾಡು..||
 
ಬದುಕಿನ ಕಥೆಯನ್ನು ಬಯಸುವ ಸುಖವನ್ನು
ಕಂಬನಿಯಲ್ಲೇ ಆ ವಿಧಿ ಬರೆದ
ನಡೆಯುವ ಹಾದಿಲೀ ಕಾಲ್ಗಳ ಅಡಿಯಲ್ಲಿ
ವೇದನೆ ಕೊಡುವಾ ಮುಳ್ಳನು ಎಸೆದಾ
ಕನಸುಲೇ ಹರುಷಾ ಆ ಹರುಷವು ನಿಮಿಷ
ಎಲ್ಲೇ ಹುಡುಕು ಕೊನೆಯಿಲ್ಲ ನಿನಗೆ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ
 
|| ಎಲ್ಲೇ ನೋಡು ಏನೇ ಮಾಡು
ಬಾಳಲಿ ಸುಖವೇ ಇಲ್ಲಾ...ಓಓಓ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ 
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ 
ಎಲ್ಲೇ ನೋಡು ಏನೇ ಮಾಡು..||
 
ಬಡತನ ಬರಲೇನು ಸಿರಿತನ ಇರಲೇನು
ಆ ವಿಧಿಗೆಂದೂ ಎಲ್ಲವೂ ಒಂದೇ
ಒಳ್ಳೆಯತನವಿರಲಿ ಕೆಟ್ಟವನಾಗಿರಲಿ
ಸುಡುವ ಬೆಂಕಿಗೇ ಎಲ್ಲರೂ ಒಂದೇ
ಬೇಡದೇ ಕೊಡುವಾ ತೀರದ
ಕಷ್ಟವ ನಿಜವಾ ನುಡಿಯೇ ಏತಕೆ ಅಳುವೇ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ
 
|| ಎಲ್ಲೇ ನೋಡು ಏನೇ ಮಾಡು
ಬಾಳಲಿ ಸುಖವೇ ಇಲ್ಲಾ ... ಓಓಓ
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ 
ಶಾಂತಿಯು ಇಲ್ಲಾ, ಎಲ್ಲೂ ನೆಮ್ಮದಿ ಇಲ್ಲಾ 
ಎಲ್ಲೇ ನೋಡು ಏನೇ ಮಾಡು…||

Elle Nodu Ene Madu song lyrics from Kannada Movie Olavu Moodidaga starring Ananthnag, Lakshmi, Ramakrishna, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by B Mallesh and film is released on 1984