Eniyane Cheluvane Lyrics

in Odeda Halu

LYRIC

ಇನಿಯನೇ... ಚೆಲುವನೇ...
ಬಳಿಯಲ್ಲಿ ನಲ್ಲೆ ಇರುವಾಗ
ಶೋಕವೇತಕೆ, ಶೋಕವೇತಕೆ
ನಾನು ದೂರ ಹೋಗೋದುಂಟೇ..
ನಿನ್ನ ಬಿಟ್ಟು ಬಾಳೋದುಂಟೇ
ನನ್ನ ನಲ್ಲನೇ....
 
|| ಇನಿಯನೇ... ಚೆಲುವನೇ...
ಬಳಿಯಲ್ಲಿ ನಲ್ಲೆ ಇರುವಾಗ
ಶೋಕವೇತಕೆ, ಶೋಕವೇತಕೆ ||
 
ತಾರೆ ಇರುಳ ಮರೆವುದುಂಟೆ
ರವಯು ಗಗನ ತೊರೆವುದುಂಟೇ
ನೀ ಹೇಳು ಜಾಣನೇ…
ಲತೆಯು ಮರವ ಬಿಡುವುದುಂಟೆ 
ಮರವು ನೆಲವ ಮರೆವುದುಂಟೆ
ನನ್ನ ಗೆಳೆಯನೇ ...
 
|| ಇನಿಯನೇ... ಹೇ.. ಚೆಲುವನೇ...
ಬಳಿಯಲ್ಲಿ ನಲ್ಲೆ ಇರುವಾಗ
ಶೋಕವೇತಕೆ
... ಶೋಕವೇತಕೆ…||
 
ದೇವ ತಂದ ಸ್ನೇಹದಲ್ಲಿ
ನೀನು ತಂದ ಪ್ರೇಮದಲ್ಲಿ
ಅನುಮಾನ ಏತಕೆ…
ಉಸಿರು ತನುವ ತೊರೆದ ಮೇಲೆ
ನಿನ್ನಾ ನಾನು ಮರೆತ ಮೇಲೆ
ಜೀವ ನಿಲ್ಲುವುದೇ ..
 
|| ಇನಿಯನೇ... ಚೆಲುವನೇ...
ಬಳಿಯಲ್ಲಿ ನಲ್ಲೆ ಇರುವಾಗ
ಶೋಕವೇತಕೆ ಅಹ್ಹಹ್ಹ ...
ಶೋಕವೇತಕೆ….. 
ನಾನು ದೂರ ಹೋಗೋದುಂಟೇ..
ನಿನ್ನ ಬಿಟ್ಟು ಬಾಳೋದುಂಟೇ
 
ನನ್ನ ನಲ್ಲೆನೇ
ಇನಿಯನೇ... ಚೆಲುವನೇ...
ಬಳಿಯಲ್ಲಿ ನಲ್ಲೆ ಇರುವಾಗ
ಶೋಕವೇತಕೆ, ಶೋಕವೇತಕೆ…||

Eniyane Cheluvane song lyrics from Kannada Movie Odeda Halu starring Charanraj, Bhavya,, Lyrics penned by Chi Udayashankar Sung by S Janaki, Music Composed by Sathyam, film is Directed by Joe Simon and film is released on 1984