Nee Nakkare Lyrics

in Nyayakke Shikshe

Video:

LYRIC

ಗಂಡು : ನೀ ನಕ್ಕರೆ ಹಸಿರಾಯ್ತು ಜೀವನ
ಹೆಣ್ಣು : ಪ್ರೀತಿಯೇ ಸವಿಯಾದ ಹೂಬನ
ಗಂಡು : ಪ್ರತಿ ಕ್ಷಣ ನಗೆ ಚೆಲ್ಲಿದೆ..
ಹೆಣ್ಣು : ಮನದಲಿ ಸುಖ ತುಂಬಿದೆ
ಇಬ್ಬರು : ಮನೆಯ ದೀಪ ನೀನೇ..

|| ಗಂಡು : ನೀ ನಕ್ಕರೆ ಹಸಿರಾಯ್ತು ಜೀವನ
ಹೆಣ್ಣು : ಪ್ರೀತಿಯೇ ಸವಿಯಾದ ಹೂಬನ…||
 
ಹೆಣ್ಣು : ನಮಗಾಗಿ ದೇವ ತಂದ ವರವಾಗಿ ಬಂದೆ ನೀ 
               ತಾಯಿಯ ಮಮತೆಯ ಹೂವಾಗಿ ನಿಂತೆ ನೀ.. 
ಗಂಡು : ನನ್ನೋಳ ಅಂದ ಚೆಂದ ಪ್ರತಿಬಿಂಬ ಆದೆ ನೀ 
               ತಂದೆಯ ಹರಕೆಯು ಚಿರಕಾಲ ಬಾಳು ನೀ 
ಹೆಣ್ಣು : ಮುತ್ತೇ…. ಮಣಿಯೇ             
ಗಂಡು : ಚೆಲುವಾ…. ಗಣಿಯೇ..
               ಇನ್ನು ನನ್ನ ಆಸೆಯೆಲ್ಲಾ..ನಿನ್ನಲೇ..
  
|| ಹೆಣ್ಣು  : ನೀ ನಕ್ಕರೆ ಹಸಿರಾಯ್ತು ಜೀವನ
ಗಂಡು  : ಪ್ರೀತಿಯೇ ಸವಿಯಾದ ಹೂಬನ…||
 
ಗಂಡು : ಒಲವೆಂಬ ದಾರಿಯಲ್ಲಿ  ಸಂಗಾತಿಯಾದೆ ನೀ 
               ಮಳೆಯಲೂ ಬಿಸಿಲಲ್ಲೂ ಸಹಚಾರಿಯಾದೆ ನೀ 
ಹೆಣ್ಣು : ನಿನಗಾಗಿ ನನ್ನ ಜೀವ ಮುಡಿಪಾಗಿ ತಂದೆ ನಾ .. 
               ಮನಸ್ಸಿನ ಗುಡಿಯಲಿ ಅತಿ ದೈವ ಆದೆ ನೀ 
ಗಂಡು : ಇರೆನು… ಅಗಲಿ.. 
ಹೆಣ್ಣು : ಏನೇ ಬರಲಿ..
               ಸದಾ ಇದೇ ಪ್ರೀತಿ ಇರಲಿ..ಬಾಳಲಿ..

|| ಗಂಡು : ನೀ ನಕ್ಕರೆ ಹಸಿರಾಯ್ತು ಜೀವನ
ಹೆಣ್ಣು : ಪ್ರೀತಿಯೇ ಸವಿಯಾದ ಹೂಬನ
ಗಂಡು : ಪ್ರತಿ ಕ್ಷಣ ನಗೆ ಚೆಲ್ಲಿದೆ..
ಹೆಣ್ಣು : ಮನದಲಿ ಸುಖ ತುಂಬಿದೆ
ಇಬ್ಬರು : ಮನೆಯ ದೀಪ ನೀನೇ..
                 ನೀ ನಕ್ಕರೆ ಹಸಿರಾಯ್ತು ಜೀವನ
                 ಪ್ರೀತಿಯೇ ಸವಿಯಾದ ಹೂಬನ…||

Nee Nakkare song lyrics from Kannada Movie Nyayakke Shikshe starring Bharathi, Ambika, Charanraj, Lyrics penned by R N Jayagopal Sung by S P Balasubrahmanyam, Chithra, Music Composed by Vijayanand, film is Directed by Srinivas and film is released on 1987