.

0

.

Mutthaide Mutthaide Lyrics

ಮುತ್ತೈದೆ ಮುತ್ತೈದೆ Lyrics

in Naviloora Naidile

in ನವಿಲೂರ ನೈದಿಲೆ

LYRIC

Song Details Page after Lyrice

-
ಮುತ್ತೈದೆ ಮುತ್ತೈದೆ ದೀಪ ಹಚ್ಚು ಬಾರೆ ಮುತ್ತೈದೆ
ಮುತ್ತೈದೆ ಮುತ್ತೈದೆ ಗಂಧ ಹಚ್ಚು ಬಾರೆ ಮುತ್ತೈದೆ
ಗಂಡ ಗುಂಡಿಗೆಯ ನಂಟಾಗಿರಲಿ ತಾಳಿ ಮಣಿಯಲಿ ಗಂಟಾಗಿರಲಿ
ಸಾಯೋಗಂಟ ಇದು ಸತಿ ಆಸೆ ಈ ಆಸೆಯೆ ಭೀಮನ ಅಮಾವಾಸ್ಯೆ
 
ಕಣ್ಣನೀರಿನ ಕಡಲ ನಡುವಿನ
ತೀರದಾಳದ ಬೆಳ್ಳಿ ಹಕ್ಕಿ ನಾ ಬೆಳ್ಳಿ ಹಕ್ಕಿ ನಾ
 
||ಮುತ್ತೈದೆ ಮುತ್ತೈದೆ ದೀಪ ಹಚ್ಚು ಬಾರೆ ಮುತ್ತೈದೆ
ಮುತ್ತೈದೆ ಮುತ್ತೈದೆ ಗಂಧ ಹಚ್ಚು ಬಾರೆ ಮುತ್ತೈದೆ||
 
ಪತಿರಾಯ ಪತಿರಾಯ ಪತಿಯೆ ಸತಿಯರ ಮೂರುಲೋಕ
ಪಾರ್ವತಿ ಪತಿಗಿಂತ ಹೆಚ್ಚು ತೂಕ
ದುಡಿಗಾರ ಜೂಜುಕೋರ ಶಿವನೆ ಆದರು ಬೀದಿ ತಿರುಕ
ಅಂತ ಸತಿಪತಿ ಮನೆ ನರಕ
ಒಲಿಸಿಕೊ ಅಡಿಗೆಯ ಮಾಡಿ ಉಳಿಸಿಕೊ ಮಡಿಯನೆ ನೀಡಿ
ಒಲಿಸಿಕೊ ಪೂಜೆಯ ಮಾಡಿ ಉಳಿಸಿಕೊ ಮಕ್ಕಳ ನೀಡಿ
 
ಭೂಮಿ ಮೇಲಿನ ಬಾಳನಂಚಿನ ಪ್ರೀತಿಗಾಣದ
ಒಂಟಿ ಜೀವನ ಒಂಟಿ ಜೀವನ
 
||ಮುತ್ತೈದೆ ಮುತ್ತೈದೆ ದೀಪ ಹಚ್ಚು ಬಾರೆ ಮುತ್ತೈದೆ
ಮುತ್ತೈದೆ ಮುತ್ತೈದೆ ಗಂಧ ಹಚ್ಚು ಬಾರೆ ಮುತ್ತೈದೆ||
 
ಸುಕುಮಾರ ಹಮ್ಮೀರ ಗಂಡ ಸಿಗಲೆಂದು ವ್ರತ ಮಾಡು
ಸಾಕು ವರನಿಗೆ ವರಬೇಡು
ರಾಮನೊ ಭೀಮನೊ ಬೇಗ ಬರಲೆಂದು ದಾರಿ ನೋಡು
ಬಂದ ಮೇಲೆ ಕಟ್ಟು ನಿನ್ನ ಗೂಡು
ತೊಡಿಸಿಕೊ ಬೆಳ್ಳಿಯ ನೆಟ್ಟು  ಹಿಡಿಸಿಕೊ ಮೂಗುತಿ ಬೊಟ್ಟು
ತರಿಸಿಕೊ ಗಜಬೆಂಡೋಲೆ ಮುಡಿಸಿಕೊ ಮಲ್ಲಿಗೆ ಮಾಲೆ
 
ವೇದದಲ್ಲಿನ ಶಾಸ್ತ್ರದಲ್ಲಿನ ಸಂಪ್ರದಾಯದ ಬಲಿಯ ಪಶುವು ನಾ
ಬಲಿಯ ಪಶುವು ನಾ
 
|| ಮುತ್ತೈದೆ ಮುತ್ತೈದೆ ದೀಪ ಹಚ್ಚು ಬಾರೆ ಮುತ್ತೈದೆ
ಮುತ್ತೈದೆ ಮುತ್ತೈದೆ ಗಂಧ ಹಚ್ಚು ಬಾರೆ ಮುತ್ತೈದೆ
ಗಂಡ ಗುಂಡಿಗೆಯ ನಂಟಾಗಿರಲಿ ತಾಳಿ ಮಣಿಯಲಿ ಗಂಟಾಗಿರಲಿ
ಸಾಯೋಗಂಟ ಇದು ಸತಿ ಆಸೆ ಈ ಆಸೆಯೆ ಭೀಮನ ಅಮಾವಾಸ್ಯೆ||

Mutthaide Mutthaide song lyrics from Kannada Movie Naviloora Naidile starring Raghuveer, Sindhu, Thejaswini, Lyrics penned by Hamsalekha Sung by , Music Composed by Hamsalekha, film is Directed by P Chandrashekhar and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ