Dundu Mallige Maathaadeya Lyrics

in Nanna Devaru

Video:

LYRIC

ದುಂಡು ಮಲ್ಲಿಗೆ ಮಾತಾಡೆಯಾ 
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ,
ಸಂಕೋಚ ತುಂಬಿ ಹೋಗಿ....
ನಾಚಿ ನೀನು ಮೊಗ್ಗಾದೆಯಾ....
 
ದುಂಡು ಮಲ್ಲಿಗೆ ಮಾತಾಡೆಯಾ 
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ,
ಸಂಕೋಚ ತುಂಬಿ ಹೋಗಿ....
ನಾಚಿ ನೀನು ಮೊಗ್ಗಾದೆಯಾ....
 
|| ದುಂಡು ಮಲ್ಲಿಗೆ ಮಾತಾಡೆಯಾ…||
 
ನೀನಾಡೊ ಮಾತೆಲ್ಲ ಜೇನಂತೆ
ನೀ ಹಾಡೊ ಸಂಗೀತ ಇಂಪಂತೆ
ನೀನಾಡೊ ಮಾತೆಲ್ಲ ಜೇನಂತೆ
ನೀ ಹಾಡೊ ಸಂಗೀತ ಇಂಪಂತೆ
ಆಸೆ ಬಂದಂತೆ ಸೋತು ನಾ ನಿಂತೆ...
ಓ ಹೆಣ್ಣೆ ಬಲ್ಲೆಯಾ…..
ನಗುವಾಗ ಈ ಮೊಗವು ಶಶಿಯಂತೆ
ನಲಿದಾಗ ಕುಣಿದಾಡೊ ನವಿಲಂತೆ
ನಗುವಾಗ ಈ ಮೊಗವು ಶಶಿಯಂತೆ
ನಲಿದಾಗ ಕುಣಿದಾಡೊ ನವಿಲಂತೆ
ನಿನ್ನ ಕಂಡಂದೆ ಒಲಿದು ನಾ ಬಂದೆ
ನಿನ್ನನ್ನು ಬಯಸಿದೆ, ಬಂದೀಗ ಸೇರಿದೆ
 
|| ದುಂಡು ಮಲ್ಲಿಗೆ ಮಾತಾಡೆಯಾ 
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ,
ಸಂಕೋಚ ತುಂಬಿ ಹೋಗಿ....
ನಾಚಿ ನೀನು ಮೊಗ್ಗಾದೆಯಾ....
ದುಂಡು ಮಲ್ಲಿಗೆ ಮಾತಾಡೆಯಾ…|| 
 
ನಿನ್ನಂಥ ಹೆಣ್ಣನ್ನು ಕಂಡಿಲ್ಲ
ಯಾರಲ್ಲು ನಾ ಹೀಗೆ ಸೇರಿಲ್ಲ
ನಿನ್ನಂಥ ಹೆಣ್ಣನ್ನು ಕಂಡಿಲ್ಲ
ಯಾರಲ್ಲು ನಾ ಹೀಗೆ ಸೇರಿಲ್ಲ
ಏಕೊ ನಾ ಕಾಣೆ ನಂಬು ನನ್ನಾಣೆ...
ಒಲವಿಂದ ಸೇರೆಯಾ….
ನನ್ನಾಸೆ ನಿನ್ನಲ್ಲಿ ಏಕಿಲ್ಲ
ಈ ಮೌನ ನಿನಗಿನ್ನು ಸರಿಯಲ್ಲ
ನನ್ನಾಸೆ ನಿನ್ನಲ್ಲಿ ಏಕಿಲ್ಲ..ಹಾ..
ಈ ಮೌನ ನಿನಗಿನ್ನು ಸರಿಯಲ್ಲ
ನೋಡು ನೀನಿಲ್ಲಿ ಬೇರೆ ಯಾರಿಲ್ಲ....
ಕಣ್ಣಲ್ಲೇ ಕೊಲುವೆಯಾ…
ಇಲ್ಲಾ ಮುತ್ತೊಂದಾ ಕೊಡುವೆಯಾ
 
|| ದುಂಡು ಮಲ್ಲಿಗೆ ಮಾತಾಡೆಯಾ 
ಕೆಂಡ ಸಂಪಿಗೆ ನೀನಾದೆಯಾ
ಕೆನ್ನೆ ಕೆಂಪಗಾಗಿ,
ಸಂಕೋಚ ತುಂಬಿ ಹೋಗಿ....
ನಾಚಿ ನೀನು ಮೊಗ್ಗಾದೆಯಾ....
ದುಂಡು ಮಲ್ಲಿಗೆ ಮಾತಾಡೆಯಾ…|| 

Dundu Mallige Maathaadeya song lyrics from Kannada Movie Nanna Devaru starring Ananthnag, Sujatha, Jayanthi, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by B Mallesh and film is released on 1982