Gaali Gaali Nammoora Gayyali Lyrics

in Nammoora Hammeera

Video:

LYRIC

ಏ ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೊ
ಸುಯ್ ಸುಯ್ ಬಂದಳೊ
ಭಾರಿ ಭಾರಿ ಬಿರುಗಾಳಿ ಜೊತೇಲಿ ತಂದಳು
ಸುಯ್ ಸುಯ್ ತಂದಳು
ನವ ನಾರಿ ಇದು  ನರಿ ಜಾತಿಯದು
ಮದವೇರಿರುವ ಮರಿ ಕೋತಿ ಇದು
ತಲೆ ನಿಲ್ಲದ ಮೂದೇವಿಗೆ
ಮೇಲೆ ಥಳಕು ಒಳಗೆ ಹುಳುಕು
ಲೇಯ್ಯ್... ಡಿಂಗರಿ ಡಿಂಗ

|| ಏ ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೊ
ಸುಯ್ ಸುಯ್ ಬಂದಳೊ
ಭಾರಿ ಭಾರಿ ಬಿರುಗಾಳಿ ಜೊತೇಲಿ ತಂದಳು
ಸುಯ್ ಸುಯ್ ತಂದಳು ||..
 
ಕೋಳಿ ಮೊಟ್ಟೆ ಒಡೆದು ನಿವಾಳಿಸಿ ಹಾಕುವೆ
ಎಡಗೈ ನಾಕು ಬಲಗೈ ನಾಕು...
ಎಡಗೈ ನಾಕು ಬಲಗೈ ನಾಕು
ಪೊರಕೆ ಪೂಜೆ ಮಾಡಿ ಮೈ ಧೂಳ ಕುಡಿಸುವೆ
ಎಡಗಡೆ ಸಾಕು ಬಲಗಡೆ ಹಾಕು
ಹಾಕು ಹಾಕು ಒಳಗ್ ಹಾಕು
ಚಿಗರೆ ನಿನಗೆ ಒಳಗೆ ಪೊಗರೇ
ಅರೆರೇ.. ಹೊರಗೆ ಹಣದ ಜವರೆ
ಯಾರಿಗುಂಟು ಯಾರಿಗಿಲ್ಲ
ನಿನ್ನ ಅಂದ ಚಂದವೆಲ್ಲ
ಹೆಣ್ಣೋ ಇದು ಹೆಣ್ಣೋ 
ಕರಿ ಮಣ್ಣೋ ಇದು ಕಣ್ಣೋ
ಉರಿಗಣ್ಣೋ ಹಣ್ಣಣ್ಣೊ ಹುಳಿ ಹಣ್ಣೋ ಹೆಣ್ಣೋ

 || ಏ ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೊ
ಸುಯ್ ಸುಯ್ ಬಂದಳೊ
ಭಾರಿ ಭಾರಿ ಬಿರುಗಾಳಿ ಜೊತೇಲಿ ತಂದಳು
ಸುಯ್ ಸುಯ್ ತಂದಳು ||..
 
ಅಹ ಶಬಾಷ್... 
ಓದು ಕಲಿತ ಮೇಲೆ ಕೊಂಬೇನು ಬಾರದು
ಪೊಗರಿನ ಭೂತ ಹೊಡೆಯುವೆ ಗೋತ
ಗೋ ಗೋತ ಗೊತ್ತಾ ಸಾಯ್ತಾ
ಮೇಲು ಕೀಳು ಎಂಬ ಗಡಿ ಮೀರಿ ಹೋಗದೆ
ಮಾನವಳಾಗು ಪ್ರೀತಿಗೆ ಬಾಗು..
ಬಾಗು  ಬಾಗು  ತಲೆ ಬಾಗು
ಅರೆರೆ... ನಿನಗೆ ತರವೇ ಮರುಳೆ
ತರುಣಿ ನಿನಗೆ ಗುಣವೇ ನೇರಳೆ
ಕಾರು ತೇರು ಕಾರು ಬಾರು ಕಾಯದಮ್ಮ.. ನಿನ್ನ ಜೋರು..
ಹುಡುಗಿ ಗುಡುಗುಡುಡುಗಿ ನಿನ್ನ ಸಹನೆ ನಿನ್ನ ಒಡವೆ
ನಯ ವಿನಯ ನಿನ್ನ ವಿಜಯ ತಿಳಿ ತಿಳಿಯೆ ಬೆಡಗಿ

||ಗಾಳಿ ಗಾಳಿ ನಮ್ಮೂರ ಗಯ್ಯಾಳಿ ಬಂದಳೋ..
ಸುಯ್ ಸುಯ್ ಬಂದಳೋ
ಭಾರಿ ಭಾರಿ ಬಿರುಗಾಳಿ ಜೊತೇಲಿ ತಂದಳು ..
ಸುಯ್ ಸುಯ್ ತಂದಳೊ
ನವ ನಾರಿ ಇದು  ನರಿ ಜಾತಿಯದು
ಮದವೇರಿರುವ ಮರಿ ಕೋತಿ ಇದು
ತಲೆ ನಿಲ್ಲದ ಮೂದೇವಿಗೆ ಮೇಲೆ ಥಳಕು ಒಳಗೆ ಹುಳುಕು
ಲೇಯ್ಯ್... ಡಿಂಗರಿ ಡಿಂಗ||
 

Gaali Gaali Nammoora Gayyali song lyrics from Kannada Movie Nammoora Hammeera starring Ambarish, Suman Ranganath, Devaraj, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Perala and film is released on 1990