ಸತ್ಯಕೆ ಎಂದಿಗು ಜಯವೆಂಬ
ಸತ್ಯವ ಸಾರುವ ಕಥೆಯೊಂದ
ಹೇಳುವೆ ಕೇಳಿರಿ ಮಕ್ಕಳಿರಾ
ಕನ್ನಡ ಮಾತೆಯ ಮಕ್ಕಳಿರಾ
|| ಸತ್ಯಕೆ ಎಂದಿಗು ಜಯವೆಂಬ
ಸತ್ಯವ ಸಾರುವ ಕಥೆಯೊಂದ
ಹೇಳುವೆ ಕೇಳಿರಿ ಮಕ್ಕಳಿರಾ
ಕನ್ನಡ ಮಾತೆಯ ಮಕ್ಕಳಿರಾ||
ಊರಿನ ಹೊರಗೆ ಕಾಡೊಂದು
ಅದರಲಿ ಜಿಂಕೆಯ ಹಿಂಡೊಂದು
ಸಂಜೆಗೆ ತಿರುಗಿ ಬರುವಂದು
ಹಿಂದೆಯೇ ಉಳಿಯಿತು ಹೆಣ್ಣೊಂದು
ಸಂಜೆಗೆ ತಿರುಗಿ ಬರುವಂದು
ಹಿಂದೆಯೇ ಉಳಿಯಿತು ಹೆಣ್ಣೊಂದು
ತೆರೆಯೊಂದರಿಂದ ಹುಲಿರಾಯ ಬಂದ
ಆ ಜಿಂಕೆ ಎದುರು ನಿಂದ
ನಾ ತಿಂದು ಬಿಡುವೆ ನಿನ್ನೀಗಲೆಂದ
ಖಳನವನ ರೋಷದಿಂದ…
ಹುಲಿರಾಯ ಅಣ್ಣಾ ಕೈ ಮುಗಿವೆನೆ
ಹೋಗಲು ಬಿಡೆಯಾ ಈ ಸಲಕೆ
ಕಾದಿದೆ ಕಂದನು ಎನಗಾಗಿ
ಹಾಲನು ಉಣಿಸಿ ನಾ ಬರುವೆ
ಹುಲಿರಾಯ ಅಣ್ಣಾ ಕೈ ಮುಗಿವೆನೆ
ಹೋಗಲು ಬಿಡೆಯಾ ಈ ಸಲಕೆ
ಈ ನಿನ್ನ ಮಾತೆಲ್ಲ ಸುಳ್ಳೆಂದು ನಾ ಬಲ್ಲೆ
ಬಿಡಲಾರೆ ನೀ ನಿಲ್ಲು ಇಲ್ಲೆ
ಕೊಲ್ಲುವೆನು ನಾನೀಗ ಹುಲ್ಲೇ...
ನಿನ್ನ ಕೊಲ್ಲುವೆನು ನಾನೀಗ ಹುಲ್ಲೇ
ಆಡಿದ ಮಾತಿಗೆ ತಪ್ಪೆನು ನಾನು
ಸತ್ಯವನೆಂದಿಗೂ ಪಾಲಿಸೆ ನಾ
ಗೆಳೆಯರ ರಕ್ಷಣೆಗೆ ಒಪ್ಪಿಸಿ ಕಂದನ
ಹೇಳಿದ ಸಮಯಕೆ ಬರುವೆನು ನಾ
ಆಡಿದ ಮಾತಿಗೆ ತಪ್ಪೆನು ನಾ..
ಹೋಗಲು ಬಿಡುವೇ ಮನೆಗೆ
ನಾ ಕಾಯುವೆನಿಲ್ಲಿ ನಿನಗೆ
ಬೇಗನೆ ಬಂದು ಎದುರುಗೆ ನಿಂದು
ಉಳಿಸಿಕೋ ಮಾತನು ಇಂದು
ನೀ ಉಳಿಸಿಕೋ ಮಾತನು ಇಂದು
ಕಂದ ಕಂದ ಮನದಾನಂದ
ನೀಡುವೆ ಕೊನೆಯ ಮಾತೊಂದ
ನೆನಪಿರಲಿ ಇನ್ನು ಇಂದಿನಿಂದ
ಸಲಹುವರಿವರು ನಿನ್ನನು ಕಂದ
ತೀರಿತು ನಮ್ಮಯ ಬಂಧ
ತಾಯಿಯಿರಾ ತಂದೆಯಿರಾ ಸೋದರಿರಾ ಗೆಳೆಯರಿರಾ
ಈ ತಬ್ಬಲಿಯ ಪ್ರೇಮಿಸಿರಿ ತಪ್ಪುಗಳ ಮನ್ನಿಸಿರಿ
ತಾಯಿಯಿರಾ ತಂದೆಯಿರಾ ಸೋದರಿರಾ ಗೆಳೆಯರಿರಾ
ಹಣ್ಣನು ತರುವೆ ನಾನು ಜೇನನು ತರುವೆ ನಾನು
ಆಡುವೆ ಜೊತೆಗೆ ನಾನು ರಕ್ಷಣೆ ಮಾಡುವೆ ನಾನು
ವಚನವ ನೀನು ಉಳಿಸು ವಂಶಕೆ ಕೀರ್ತಿಯ ಗಳಿಸು
ಅಮ್ಮಾ... ಅಮ್ಮಾ.. ಕಂದ.. ಕಂದ...
ಅಮ್ಮಾ... ಅಮ್ಮಾ.. ಕಂದ.. ಕಂದ...
ಕಂದನಿಗೆ ನಾ ಹಾಲನುಣಿಸಿ ಬಂದೆ ಎನ್ನಯ ಮಾತಿನಂತೆ
ಕೊಂದು ಎನ್ನನು ಹಸಿವ ತೀರಿಕೊ ನಿಂದಿರುವೆ ಹುಲಿರಾಯನೆ
ಕಂದನಿಗೆ ನಾ ಹಾಲನುಣಿಸಿ ಬಂದೆ ಎನ್ನಯ ಮಾತಿನಂತೆ
ಮೆಚ್ಚಿದೆ ನಿನ್ನಯ ಸತ್ಯವ
ನಾ ಉಳಿಸುವೆ ನಿನ್ನಯ ಪ್ರಾಣವ
ಬೇಗನೆ ಓಡಿ ಕಂದನ ಕೂಡಿ
ಪಡೆ ನೀ ಚಿರಸಂತೋಷವ
ಪಡಿ ನೀ ಚಿರಸಂತೋಷವ..
|| ಆಆಆಆ ಆಆಆ ಆಆಆ
ಸತ್ಯಕೆ ಎಂದಿಗೂ ಜಯವೆಂಬ
ಸತ್ಯವ ಸಾರುವ ಕಥೆಯೊಂದ
ಹೇಳುವೆ ಕೇಳಿರಿ ಮಕ್ಕಳಿರಾ
ಕನ್ನಡ ಮಾತೆಯ ಮಕ್ಕಳಿರಾ
ಕನ್ನಡ ಮಾತೆಯ ಮಕ್ಕಳಿರಾ ..
ಕನ್ನಡ ಮಾತೆಯ ಮಕ್ಕಳಿರಾ
ಕನ್ನಡ ಮಾತೆಯ ಮಕ್ಕಳಿರಾ ...
ಕನ್ನಡ ಮಾತೆಯ ಮಕ್ಕಳಿರಾ….||
ಸತ್ಯಕೆ ಎಂದಿಗು ಜಯವೆಂಬ
ಸತ್ಯವ ಸಾರುವ ಕಥೆಯೊಂದ
ಹೇಳುವೆ ಕೇಳಿರಿ ಮಕ್ಕಳಿರಾ
ಕನ್ನಡ ಮಾತೆಯ ಮಕ್ಕಳಿರಾ
|| ಸತ್ಯಕೆ ಎಂದಿಗು ಜಯವೆಂಬ
ಸತ್ಯವ ಸಾರುವ ಕಥೆಯೊಂದ
ಹೇಳುವೆ ಕೇಳಿರಿ ಮಕ್ಕಳಿರಾ
ಕನ್ನಡ ಮಾತೆಯ ಮಕ್ಕಳಿರಾ||
ಊರಿನ ಹೊರಗೆ ಕಾಡೊಂದು
ಅದರಲಿ ಜಿಂಕೆಯ ಹಿಂಡೊಂದು
ಸಂಜೆಗೆ ತಿರುಗಿ ಬರುವಂದು
ಹಿಂದೆಯೇ ಉಳಿಯಿತು ಹೆಣ್ಣೊಂದು
ಸಂಜೆಗೆ ತಿರುಗಿ ಬರುವಂದು
ಹಿಂದೆಯೇ ಉಳಿಯಿತು ಹೆಣ್ಣೊಂದು
ತೆರೆಯೊಂದರಿಂದ ಹುಲಿರಾಯ ಬಂದ
ಆ ಜಿಂಕೆ ಎದುರು ನಿಂದ
ನಾ ತಿಂದು ಬಿಡುವೆ ನಿನ್ನೀಗಲೆಂದ
ಖಳನವನ ರೋಷದಿಂದ…
ಹುಲಿರಾಯ ಅಣ್ಣಾ ಕೈ ಮುಗಿವೆನೆ
ಹೋಗಲು ಬಿಡೆಯಾ ಈ ಸಲಕೆ
ಕಾದಿದೆ ಕಂದನು ಎನಗಾಗಿ
ಹಾಲನು ಉಣಿಸಿ ನಾ ಬರುವೆ
ಹುಲಿರಾಯ ಅಣ್ಣಾ ಕೈ ಮುಗಿವೆನೆ
ಹೋಗಲು ಬಿಡೆಯಾ ಈ ಸಲಕೆ
ಈ ನಿನ್ನ ಮಾತೆಲ್ಲ ಸುಳ್ಳೆಂದು ನಾ ಬಲ್ಲೆ
ಬಿಡಲಾರೆ ನೀ ನಿಲ್ಲು ಇಲ್ಲೆ
ಕೊಲ್ಲುವೆನು ನಾನೀಗ ಹುಲ್ಲೇ...
ನಿನ್ನ ಕೊಲ್ಲುವೆನು ನಾನೀಗ ಹುಲ್ಲೇ
ಆಡಿದ ಮಾತಿಗೆ ತಪ್ಪೆನು ನಾನು
ಸತ್ಯವನೆಂದಿಗೂ ಪಾಲಿಸೆ ನಾ
ಗೆಳೆಯರ ರಕ್ಷಣೆಗೆ ಒಪ್ಪಿಸಿ ಕಂದನ
ಹೇಳಿದ ಸಮಯಕೆ ಬರುವೆನು ನಾ
ಆಡಿದ ಮಾತಿಗೆ ತಪ್ಪೆನು ನಾ..
ಹೋಗಲು ಬಿಡುವೇ ಮನೆಗೆ
ನಾ ಕಾಯುವೆನಿಲ್ಲಿ ನಿನಗೆ
ಬೇಗನೆ ಬಂದು ಎದುರುಗೆ ನಿಂದು
ಉಳಿಸಿಕೋ ಮಾತನು ಇಂದು
ನೀ ಉಳಿಸಿಕೋ ಮಾತನು ಇಂದು
ಕಂದ ಕಂದ ಮನದಾನಂದ
ನೀಡುವೆ ಕೊನೆಯ ಮಾತೊಂದ
ನೆನಪಿರಲಿ ಇನ್ನು ಇಂದಿನಿಂದ
ಸಲಹುವರಿವರು ನಿನ್ನನು ಕಂದ
ತೀರಿತು ನಮ್ಮಯ ಬಂಧ
ತಾಯಿಯಿರಾ ತಂದೆಯಿರಾ ಸೋದರಿರಾ ಗೆಳೆಯರಿರಾ
ಈ ತಬ್ಬಲಿಯ ಪ್ರೇಮಿಸಿರಿ ತಪ್ಪುಗಳ ಮನ್ನಿಸಿರಿ
ತಾಯಿಯಿರಾ ತಂದೆಯಿರಾ ಸೋದರಿರಾ ಗೆಳೆಯರಿರಾ
ಹಣ್ಣನು ತರುವೆ ನಾನು ಜೇನನು ತರುವೆ ನಾನು
ಆಡುವೆ ಜೊತೆಗೆ ನಾನು ರಕ್ಷಣೆ ಮಾಡುವೆ ನಾನು
ವಚನವ ನೀನು ಉಳಿಸು ವಂಶಕೆ ಕೀರ್ತಿಯ ಗಳಿಸು
ಅಮ್ಮಾ... ಅಮ್ಮಾ.. ಕಂದ.. ಕಂದ...
ಅಮ್ಮಾ... ಅಮ್ಮಾ.. ಕಂದ.. ಕಂದ...
ಕಂದನಿಗೆ ನಾ ಹಾಲನುಣಿಸಿ ಬಂದೆ ಎನ್ನಯ ಮಾತಿನಂತೆ
ಕೊಂದು ಎನ್ನನು ಹಸಿವ ತೀರಿಕೊ ನಿಂದಿರುವೆ ಹುಲಿರಾಯನೆ
ಕಂದನಿಗೆ ನಾ ಹಾಲನುಣಿಸಿ ಬಂದೆ ಎನ್ನಯ ಮಾತಿನಂತೆ
ಮೆಚ್ಚಿದೆ ನಿನ್ನಯ ಸತ್ಯವ
ನಾ ಉಳಿಸುವೆ ನಿನ್ನಯ ಪ್ರಾಣವ
ಬೇಗನೆ ಓಡಿ ಕಂದನ ಕೂಡಿ
ಪಡೆ ನೀ ಚಿರಸಂತೋಷವ
ಪಡಿ ನೀ ಚಿರಸಂತೋಷವ..
|| ಆಆಆಆ ಆಆಆ ಆಆಆ
ಸತ್ಯಕೆ ಎಂದಿಗೂ ಜಯವೆಂಬ
ಸತ್ಯವ ಸಾರುವ ಕಥೆಯೊಂದ
ಹೇಳುವೆ ಕೇಳಿರಿ ಮಕ್ಕಳಿರಾ
ಕನ್ನಡ ಮಾತೆಯ ಮಕ್ಕಳಿರಾ
ಕನ್ನಡ ಮಾತೆಯ ಮಕ್ಕಳಿರಾ ..
ಕನ್ನಡ ಮಾತೆಯ ಮಕ್ಕಳಿರಾ
ಕನ್ನಡ ಮಾತೆಯ ಮಕ್ಕಳಿರಾ ...
ಕನ್ನಡ ಮಾತೆಯ ಮಕ್ಕಳಿರಾ….||
Sathyake Endigu Jayavemba song lyrics from Kannada Movie Naandi starring Dr Rajkumar, Balakrishna, Sorat Ashwath, Lyrics penned by R N Jayagopal Sung by P B Srinivas, S Janaki, Music Composed by Vijaya Bhaskar, film is Directed by N Lakshminarayan and film is released on 1964