ರಾಯರು ಬಂದರು
ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು…
ತುಂಬಿದ ಚಂದಿರ ಬಂದಿತ್ತು
ರಾಯರು ಬಂದರು
ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು…
ತುಂಬಿದ ಚಂದಿರ ಬಂದಿತ್ತು
ಮಾವನ ಮನೆಯಲಿ ಮಲ್ಲಿಗೆ ಹೂಗಳ
ಪರಿಮಳ ತುಂಬಿತ್ತು
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ
ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು
ಘಮ ಘಮಿಸುವ ಮೃಷ್ಟಾನ್ನದ ಭೋಜನ
ರಾಯರ ಕಾದಿತ್ತು… ಬೆಳ್ಳಿಯ ಬಟ್ಟಲ
ಗಸಗಸೆ ಪಾಯಸ ರಾಯರ ಕರೆದಿತ್ತು
ಭೂಮಿಗೆ ಸ್ವರ್ಗವೆ ಇಳಿದಿತ್ತು….
ಚಪ್ಪರ ಗಾಲಿನ…. ಚಪ್ಪರ ಗಾಲಿನ….
ಮಂಚದ ಮೇಗಡೆ ಮೆತ್ತನೆ ಹಾಸಿತ್ತು
ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು
ಪದುಮಳು ಹಾಕಿದ ಹೂವಿತ್ತು….
|| ರಾಯರು ಬಂದರು …
ರಾಯರು ಬಂದರು
ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು…
ತುಂಬಿದ ಚಂದಿರ ಬಂದಿತ್ತು…||
ಚಿಗುರೆಲೆ ಬಣ್ಣದ ಅಡಿಕೆಯ ತಂದಳು
ನಾದಿನಿ ನಗುನಗುತಾ
ಬಿಸಿಬಿಸಿ ಹಾಲಿನ ಬಟ್ಟಲು ತಂದರು
ಅಕ್ಕರೆಯಲಿ ಮಾವ……..
ಮಡದಿಯ ಸದ್ದೇ ಇರಲಿಲ್ಲ
ಮಡದಿಯ ತಂಗಿಯ ಕರೆದಿಂತೆಂದರು
ಅಕ್ಕನ ಕರೆಯಮ್ಮಾ….
ಮೆಲುದನಿಯಲಿ ನಾದಿನಿ ಇಂತೆಂದಳು
ಪದುಮಳು ಒಳಗಿಲ್ಲ …
ನಕ್ಕಳು…ರಾಯರು ನಗಲಿಲ್ಲ..
|| ರಾಯರು ಬಂದರು …
ರಾಯರು ಬಂದರು
ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು…
ತುಂಬಿದ ಚಂದಿರ ಬಂದಿತ್ತು…||
ಏರುತ ಎಳೆಯುತ ಬಂದರು
ರಾಯರು ದೂರದ ಊರಿಂದ…
ಪೊನ್ನನು ಕಡಿದರು ನಿದ್ದೆಯು ಬಾರದು
ಪದುಮಳು ಒಳಗಿಲ್ಲ..
ಪದುಮಳ ಬಳೆಗಳ ದನಿಯಿಲ್ಲ…
ಬೆಳಗಾಯಿತು ಸರಿ ಹೊರಡುವೆನೆಂದರು
ರಾಯರು ಮುನಿಸಿನಲಿ..
ಒಳಮನೆಯಲಿ ನೀರಾಯಿತು ಎಂದಳು
ನಾದಿನಿ ರಾಗದಲಿ…..
ಯಾರಿಗೆ ಎನ್ನಲು ಹರುಷದಲಿ
ಪದುಮಳು ಬಂದಳು ಹೂವನು ಮುಡಿಯುತ
ರಾಯರ ಕೋಣೆಯಲಿ.....
ಪದುಮಳು ಬಂದಳು ಹೂವನು ಮುಡಿಯುತ
ರಾಯರ ಕೋಣೆಯಲಿ.....
ರಾಯರ ಕೋಣೆಯಲಿ......
ರಾಯರ ಕೋಣೆಯಲಿ......
ರಾಯರು ಬಂದರು
ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು…
ತುಂಬಿದ ಚಂದಿರ ಬಂದಿತ್ತು
ರಾಯರು ಬಂದರು
ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು…
ತುಂಬಿದ ಚಂದಿರ ಬಂದಿತ್ತು
ಮಾವನ ಮನೆಯಲಿ ಮಲ್ಲಿಗೆ ಹೂಗಳ
ಪರಿಮಳ ತುಂಬಿತ್ತು
ಬಾಗಿಲ ಬಳಿ ಕಾಲಿಗೆ ಬಿಸಿ ನೀರಿನ
ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು
ಘಮ ಘಮಿಸುವ ಮೃಷ್ಟಾನ್ನದ ಭೋಜನ
ರಾಯರ ಕಾದಿತ್ತು… ಬೆಳ್ಳಿಯ ಬಟ್ಟಲ
ಗಸಗಸೆ ಪಾಯಸ ರಾಯರ ಕರೆದಿತ್ತು
ಭೂಮಿಗೆ ಸ್ವರ್ಗವೆ ಇಳಿದಿತ್ತು….
ಚಪ್ಪರ ಗಾಲಿನ…. ಚಪ್ಪರ ಗಾಲಿನ….
ಮಂಚದ ಮೇಗಡೆ ಮೆತ್ತನೆ ಹಾಸಿತ್ತು
ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು
ಪದುಮಳು ಹಾಕಿದ ಹೂವಿತ್ತು….
|| ರಾಯರು ಬಂದರು …
ರಾಯರು ಬಂದರು
ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು…
ತುಂಬಿದ ಚಂದಿರ ಬಂದಿತ್ತು…||
ಚಿಗುರೆಲೆ ಬಣ್ಣದ ಅಡಿಕೆಯ ತಂದಳು
ನಾದಿನಿ ನಗುನಗುತಾ
ಬಿಸಿಬಿಸಿ ಹಾಲಿನ ಬಟ್ಟಲು ತಂದರು
ಅಕ್ಕರೆಯಲಿ ಮಾವ……..
ಮಡದಿಯ ಸದ್ದೇ ಇರಲಿಲ್ಲ
ಮಡದಿಯ ತಂಗಿಯ ಕರೆದಿಂತೆಂದರು
ಅಕ್ಕನ ಕರೆಯಮ್ಮಾ….
ಮೆಲುದನಿಯಲಿ ನಾದಿನಿ ಇಂತೆಂದಳು
ಪದುಮಳು ಒಳಗಿಲ್ಲ …
ನಕ್ಕಳು…ರಾಯರು ನಗಲಿಲ್ಲ..
|| ರಾಯರು ಬಂದರು …
ರಾಯರು ಬಂದರು
ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚಂದಿರ ಬಂದಿತ್ತು…
ತುಂಬಿದ ಚಂದಿರ ಬಂದಿತ್ತು…||
ಏರುತ ಎಳೆಯುತ ಬಂದರು
ರಾಯರು ದೂರದ ಊರಿಂದ…
ಪೊನ್ನನು ಕಡಿದರು ನಿದ್ದೆಯು ಬಾರದು
ಪದುಮಳು ಒಳಗಿಲ್ಲ..
ಪದುಮಳ ಬಳೆಗಳ ದನಿಯಿಲ್ಲ…
ಬೆಳಗಾಯಿತು ಸರಿ ಹೊರಡುವೆನೆಂದರು
ರಾಯರು ಮುನಿಸಿನಲಿ..
ಒಳಮನೆಯಲಿ ನೀರಾಯಿತು ಎಂದಳು
ನಾದಿನಿ ರಾಗದಲಿ…..
ಯಾರಿಗೆ ಎನ್ನಲು ಹರುಷದಲಿ
ಪದುಮಳು ಬಂದಳು ಹೂವನು ಮುಡಿಯುತ
ರಾಯರ ಕೋಣೆಯಲಿ.....
ಪದುಮಳು ಬಂದಳು ಹೂವನು ಮುಡಿಯುತ
ರಾಯರ ಕೋಣೆಯಲಿ.....
ರಾಯರ ಕೋಣೆಯಲಿ......
ರಾಯರ ಕೋಣೆಯಲಿ......
Rayaru Bandaru song lyrics from Kannada Movie Mysore Mallige starring Girish Karnad, Anand, Sudharani, Lyrics penned by K S Narasimha Swamy Sung by Rathnamala Prakash, Music Composed by C Ashwath, film is Directed by T S Nagabharana and film is released on 1992