ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ..
ನವಿಲೂರ ಮನೆಯಿಂದ
ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
|| ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ.. ||
ಉಡಿದ ಮಲ್ಲೆಗೆ ಅರಳು
ಬಾಡಿಲ್ಲ ರಾಯರೇ..
ತವರಿನಲಿ ತಾಯಿ ನಗುತಿಹಳು
ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೆ
ಅಮ್ಮನಿಗೆ ಬಳೆಯಾ ತೊಡಿಸಿದರು
ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು
ಅಮ್ಮನಿಗೆ ತವರಿನಲಿ
ಅಂಗಳದ ತುಂಬ ಜನರಿತ್ತು….
|| ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ.. ||
ಸಿರಿಗೌರಿಯಂತೆ ಬಂದರು
ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರೆಸಿ
ಸುಖದೊಳಗೆ ನಿಮ್ಮ ನೆನೆದರು
ತಾಯಿ ಗುಣವಂತೆ ದೀಪದಲಿ
ಬಿಡುಗಣ್ಣ ನಿರಿಸಿ
ಬೇಕಾದ ಹಣ್ಣಿಹುದು,
ಹೂವಿಹುದು ತವರಿನಲಿ
ಹೊಸ ಸೀರೆ ರತ್ನದಾಭಾರಣ
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
ನಿಮಗಿಲ್ಲ ಒಂದು ಹನಿ ಕರುಣ..
|| ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ.. ||
ದಿನವಾದ ಬಸುರಿ ಉಸ್ಸೆಂದು
ನಿಟ್ಟುಸಿರೆಳೆದು ಕುದಿಯಬಾರದು
ನನ್ನ ದೊರೆಯೇ…
ಹಿಂಡಬಾರದು ದುಂಡ
ಮಲ್ಲಿಗೆಯ ದಂಡೆಯನು
ಒಣಗಬಾರದು ಒಡಳ ಚಿಲುಮೆ
ಮುನಿಸು ಮಾವನ ಮೇಲೆ
ಮಗಳೇನ ಮಾಡಿದಳುನಿಮಗೇತಕೀ
ಕಲ್ಲು ಮನಸು..
ಹೋಗಿ ಬನ್ನಿರಿ ಒಮ್ಮೆ
ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು
ಅಮ್ಮನಿಗೆ ನಿಮ್ಮದೇ ಕನಸು...
ಅಮ್ಮನಿಗೆ ನಿಮ್ಮದೇ ಕನಸು....
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ..
ನವಿಲೂರ ಮನೆಯಿಂದ
ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
|| ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ.. ||
ಉಡಿದ ಮಲ್ಲೆಗೆ ಅರಳು
ಬಾಡಿಲ್ಲ ರಾಯರೇ..
ತವರಿನಲಿ ತಾಯಿ ನಗುತಿಹಳು
ಕುಡಿದ ನೀರಲುಗಿಲ್ಲ ಕೊರಗದಿರಿ ರಾಯರೆ
ಅಮ್ಮನಿಗೆ ಬಳೆಯಾ ತೊಡಿಸಿದರು
ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು
ಬಳೆಯ ತೊಡಿಸಿದರಂದು
ಅಮ್ಮನಿಗೆ ತವರಿನಲಿ
ಅಂಗಳದ ತುಂಬ ಜನರಿತ್ತು….
|| ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ.. ||
ಸಿರಿಗೌರಿಯಂತೆ ಬಂದರು
ತಾಯಿ ಹಸೆಮಣೆಗೆ
ಸೆರಗಿನಲಿ ಕಣ್ಣೀರನೊರೆಸಿ
ಸುಖದೊಳಗೆ ನಿಮ್ಮ ನೆನೆದರು
ತಾಯಿ ಗುಣವಂತೆ ದೀಪದಲಿ
ಬಿಡುಗಣ್ಣ ನಿರಿಸಿ
ಬೇಕಾದ ಹಣ್ಣಿಹುದು,
ಹೂವಿಹುದು ತವರಿನಲಿ
ಹೊಸ ಸೀರೆ ರತ್ನದಾಭಾರಣ
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
ನಿಮಗಿಲ್ಲ ಒಂದು ಹನಿ ಕರುಣ..
|| ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪಣೆಯೆ ದೊರೆಯೆ.. ||
ದಿನವಾದ ಬಸುರಿ ಉಸ್ಸೆಂದು
ನಿಟ್ಟುಸಿರೆಳೆದು ಕುದಿಯಬಾರದು
ನನ್ನ ದೊರೆಯೇ…
ಹಿಂಡಬಾರದು ದುಂಡ
ಮಲ್ಲಿಗೆಯ ದಂಡೆಯನು
ಒಣಗಬಾರದು ಒಡಳ ಚಿಲುಮೆ
ಮುನಿಸು ಮಾವನ ಮೇಲೆ
ಮಗಳೇನ ಮಾಡಿದಳುನಿಮಗೇತಕೀ
ಕಲ್ಲು ಮನಸು..
ಹೋಗಿ ಬನ್ನಿರಿ ಒಮ್ಮೆ
ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು
ಅಮ್ಮನಿಗೆ ನಿಮ್ಮದೇ ಕನಸು...
ಅಮ್ಮನಿಗೆ ನಿಮ್ಮದೇ ಕನಸು....
Balegaara Chennayya song lyrics from Kannada Movie Mysore Mallige starring Girish Karnad, Anand, Sudharani, Lyrics penned by K S Narasimha Swamy Sung by S P Balasubrahmanyam, Music Composed by C Ashwath, film is Directed by T S Nagabharana and film is released on 1992