Ondirulu Kanasinali Lyrics

ಒಂದಿರುಳು ಕನಸಿನಲಿ Lyrics

in Mysore Mallige

in ಮೈಸೂರ ಮಲ್ಲಿಗೆ

LYRIC

Song Details Page after Lyrice

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
 
ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು  
ಚಂದ ನಿನಗಾವುದೆಂದು ನಮ್ಮುರು ಹೊನ್ನೂರು
ನಿಮ್ಮೂರು ನವಿಲೂರು ಚಂದ ನಿನಗಾವುದೆಂದು

ನಮ್ಮೂರು ಚಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ ನಮ್ಮೂರ ಮಂಚದಲಿ  
ನಿಮ್ಮೂರ ಕನಸಿದನು ವಿಸ್ತರಿಸಿ ಹೇಳಬೇಕೆ

ನಮ್ಮೂರು ಚೆಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ………
ಎನ್ನರಸ ಸುಮ್ಮನಿರಿ  ಎಂದಳಾಕೆ
 
ತವರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ …..
ಮಲ್ಲಿಗೆಯ ಮೊಗ್ಗುಗಳು
ಮುಳ್ಳ ಬೇಲಿಯ ಬರಿಸಿಬಳಕುತಿವೆ ಕಂಪ ಸೂಸಿ
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,ನಮ್ಮೂರಿಗಿಂತಲೂ
ಹೊನ್ನುರೆ ಸುಖವೆಂದು ನಿಲ್ಲಿಸಿತು ಪ್ರೇಮ ಕೂಗಿ

|| ನಮ್ಮೂರು ಚೆಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ  ಎನ್ನರಸ ಸುಮ್ಮನಿರಿ ಎಂದಳಾಕೆ ||

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ…..
ಪುಟ್ಟ ಕಂದನ ಕೇಕೆ
ತೊಟ್ಟಿಲನು ತುಂಬಿತ್ತು ನಿಮ್ಮೂರ ಸೇರಿದಾಗ
ಊರ ಬೇಲಿಗೆ ಬಂದು ನೀವು ನಮ್ಮನು ಕಂಡು
ಕುಶಲವನು ಕೇಳಿದಾಗ ತುಟಿಯಲೇನೋ ನಿಂದು
ಕಣ್ಣಲೇನೋ ಬಂದು ಕೆನ್ನೆ ಕೆಂಪಾದುದಾಗ

|| ನಮ್ಮೂರು ಚೆಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ ಎನ್ನರಸ ಸುಮ್ಮನಿರಿ ಎಂದಳಾಕೆ ||
 
ಲಾಲ ಲಾಲ ಲಾ ಲ ಲಾ ಲಲಾ….
ಲಾಲ ಲಾಲ ಲಾ ಲ ಲಾ ಲಲಾ….
ಲಾಲ ಲಾಲ ಲಾ ಲ ಲಾ ಲಲಾ….

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
 
ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು  
ಚಂದ ನಿನಗಾವುದೆಂದು ನಮ್ಮುರು ಹೊನ್ನೂರು
ನಿಮ್ಮೂರು ನವಿಲೂರು ಚಂದ ನಿನಗಾವುದೆಂದು

ನಮ್ಮೂರು ಚಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ ನಮ್ಮೂರ ಮಂಚದಲಿ  
ನಿಮ್ಮೂರ ಕನಸಿದನು ವಿಸ್ತರಿಸಿ ಹೇಳಬೇಕೆ

ನಮ್ಮೂರು ಚೆಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ………
ಎನ್ನರಸ ಸುಮ್ಮನಿರಿ  ಎಂದಳಾಕೆ
 
ತವರೂರ ದಾರಿಯಲಿ ತೆಂಗುಗಳು ತಲೆದೂಗಿ
ಬಾಳೆಗಳು ತೋಳ ಬೀಸಿ …..
ಮಲ್ಲಿಗೆಯ ಮೊಗ್ಗುಗಳು
ಮುಳ್ಳ ಬೇಲಿಯ ಬರಿಸಿಬಳಕುತಿವೆ ಕಂಪ ಸೂಸಿ
ನಗುನಗುತ ನಮ್ಮೂರ ಹೆಣ್ಣುಗಳು ಬರುತಿರಲು
ನಿಮ್ಮೂರ ಸಂತೆಗಾಗಿ,ನಮ್ಮೂರಿಗಿಂತಲೂ
ಹೊನ್ನುರೆ ಸುಖವೆಂದು ನಿಲ್ಲಿಸಿತು ಪ್ರೇಮ ಕೂಗಿ

|| ನಮ್ಮೂರು ಚೆಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ  ಎನ್ನರಸ ಸುಮ್ಮನಿರಿ ಎಂದಳಾಕೆ ||

ನಿಮ್ಮೂರ ಬಂಡಿಯಲಿ ನಮ್ಮೂರ ಬಿಟ್ಟಾಗ
ಓಡಿದುದು ದಾರಿ ಬೇಗ…..
ಪುಟ್ಟ ಕಂದನ ಕೇಕೆ
ತೊಟ್ಟಿಲನು ತುಂಬಿತ್ತು ನಿಮ್ಮೂರ ಸೇರಿದಾಗ
ಊರ ಬೇಲಿಗೆ ಬಂದು ನೀವು ನಮ್ಮನು ಕಂಡು
ಕುಶಲವನು ಕೇಳಿದಾಗ ತುಟಿಯಲೇನೋ ನಿಂದು
ಕಣ್ಣಲೇನೋ ಬಂದು ಕೆನ್ನೆ ಕೆಂಪಾದುದಾಗ

|| ನಮ್ಮೂರು ಚೆಂದವೊ  ನಿಮ್ಮೂರು ಚಂದವೊ
ಎಂದೆನ್ನ ಕೇಳಲೇಕೆ ಎನ್ನರಸ ಸುಮ್ಮನಿರಿ ಎಂದಳಾಕೆ ||
 
ಲಾಲ ಲಾಲ ಲಾ ಲ ಲಾ ಲಲಾ….
ಲಾಲ ಲಾಲ ಲಾ ಲ ಲಾ ಲಲಾ….
ಲಾಲ ಲಾಲ ಲಾ ಲ ಲಾ ಲಲಾ….

Ondirulu Kanasinali song lyrics from Kannada Movie Mysore Mallige starring Girish Karnad, Anand, Sudharani, Lyrics penned by K S Narasimha Swamy Sung by S P Balasubrahmanyam, S Janaki, Music Composed by C Ashwath, film is Directed by T S Nagabharana and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ