Savi Savi Nenapu Lyrics

in My Autograph

Video:

LYRIC

ಆಆಆಆ ಆಆಆಆ
ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಸವೆಯದ ನೆನಪು
ಎದೆಯಾಳದಲಿ ಬಚ್ಚಿಕೊಂಡಿರುವ
ಅಚ್ಚಳಿಯದ ನೂರೊಂದು ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು  
ಸಾವಿರ ನೆನಪು….
ಎದೆಯಾಳದಲಿ ಬಚ್ಚಿಕೊಂಡಿರುವ
ಅಚ್ಚಳಿಯದ ನೂರೊಂದು ನೆನಪು
ಏನೋ ಒಂದು ತೊರೆದ ಹಾಗೆ
ಯಾವುದೋ ಒಂದು ಪಡೆದ ಹಾಗ
ಅಮ್ಮನ ಮಡಿಲ ಅಪ್ಪಿದ ಹಾಗೆ
ಕಣ್ಣಂಚಲ್ಲಿ ಕಣ್ಣೀರ ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು…..
ಮೊದಮೊದಲ್ ಹಿಡಿದ ಬಣ್ಣದ ಚಿಟ್ಟೆ
ಮೊದಮೊದಲ್ ಕದ್ದ ಜಾತ್ರೆಯ ವಾಚು
ಮೊದಮೊದಲ್ ಸೇದಿದ ಗಣೇಶ ಬೀಡಿ....
ಮೊದಮೊದಲ್ ಕೂಡಿಟ್ಟ ಹುಂಡಿಯ ಕಾಸು
ಮೊದಮೊದಲ್ ಕಂಡ ಟೂರಿನ್ ಸಿನಿಮಾ
ಮೊದಮೊದಲ್ ಗೆದ್ದ ಕಬ್ಬಡ್ಡಿ ಆಟ....
ಮೊದಮೊದಲ್ ಇದ್ದ ಹಳ್ಳಿಯ ಗರಿಮನೆ
ಮೊದಮೊದಲ್ ತಿಂದ ಕೈ ತುತ್ತೂಟ
ಮೊದಮೊದಲ್ ಆಡಿದ ಚುಕುಬುಕು ಪಯಣ
ಮೊದಮೊದಲ್ ಅಳಿಸಿದ ಗೆಳೆಯನ ಮರಣ

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು….
ಮೊದಮೊದಲ್ ಕಲಿತ ಅರೆಬರೆ ಈಜು
ಮೊದಮೊದಲ್ ಕೊಂಡ ಹೀರೊ ಸೈಕಲ್
ಮೊದಮೊದಲ್ ಕಲಿಸಿದ ಕಮಲ ಟೀಚರ್...
ಮೊದಮೊದಲ್ ತಿಂದ ಅಪ್ಪನ ಏಟು
ಮೊದಮೊದಲ್ ಆದ ಮೊಣಕೈ ಗಾಯ
ಮೊದಮೊದಲ್ ತೆಗೆಸಿದ ಕಲರ್ ಕಲರ್ ಫೋಟೊ...
ಮೊದಮೊದಲಾಗಿ ಚಿಗುರಿದ ಮೀಸೆ
ಮೊದಮೊದಲಾಗಿ ಮೆಚ್ಚಿದ ಹೃದಯ
ಮೊದಮೊದಲ್ ಬರೆದ ಪ್ರೇಮದ ಪತ್ರ
ಮೊದಮೊದಲಾಗಿ ಪಡೆದ ಮುತ್ತು ಮುತ್ತು ಮುತ್ತು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು
ಸವಿ ಸವಿ ನೆನಪು ಸವಿ ಸವಿ ನೆನಪು ಸಾವಿರ ನೆನಪು

Savi Savi Nenapu song lyrics from Kannada Movie My Autograph starring Sudeep, Meena, Sridevika, Lyrics penned by K Kalyan Sung by Hariharan, Music Composed by Bharadwaj, film is Directed by Sudeep and film is released on 2006