-
ಓ ಶಂಕರ ಜಗದೀಶ ದಾಕ್ಷಾಯಿಣಿ ಹೃದಯೇಶ
ಗಂಗಾಧರ ಸರ್ವೇಶ ಮದನಾರಿ ವಿಶ್ವೇಶ ಕಾಪಾಡೆಯ
ಈ ಬಾಳಿನ ಸಂಜೆಯಲ್ಲಿ ಈ ವೇದನೆ ಸುಳಿಯಲ್ಲಿ
ನಾನಿನ್ನು ಇರಲಾರೆನೆ ನನೊಡೆಯ ಶ್ರೀ ಕಂಠನೆ
ಓಓಓ ದಯೆತೋರು ಮಹಾದೇವನೆ
ನನ್ನ ಮೇಲೆ ರೋಷವೇಕೆ
ನನ್ನ ಮೇಲೆ ದ್ವೇಷವೇಕೆ
ನಿನ್ನ ಭಕ್ತನಾದ ನನಗೆ ಇಂತ ಘೋರ ಶಾಪವೇಕೆ
ಕರುಣಾಳು ನನ ಬಾಳು ಹೀಗೇತಕೆ
ನಿನ್ನ ಪಾದವನ್ನೆ ನಂಬಿಕೊಂಡೆನಲ್ಲ
ನೀನೆ ನನ್ನ ತಂದೆ ತಾಯಿ ಎಂದುಕೊಂಡೆನಲ್ಲ
ಶಿವನೆ ಭವನೆ ಹರನೆ ಶರಣರೊಡೆಯ ಮೃಡನೆ
ಕರ ಮುಗಿವೆ ಶರಣೆನುವೆ ತಾಳೆಲಾರೆನಯ್ಯ
ಓ ಕಂದ ನಾ ಬಂದೆ ಎಂದೆನ್ನಲಾರೆಯ
||ಓ ಶಂಕರ ಜಗದೀಶ ದಾಕ್ಷಾಯಿಣಿ ಹೃದಯೇಶ
ಗಂಗಾಧರ ಸರ್ವೇಶ ಮದನಾರಿ ವಿಶ್ವೇಶ ಕಾಪಾಡೆಯ||
ಈ ಲೋಕವ ಕಾಪಾಡಲು ವಿಷವನ್ನೆ ನೀ ಉಂಡೆ
ಮುನಿಬಾಲನ ಸಂತೈಸಲು ಯಮನನ್ನೆ ಹೋಗೆಂದೆ
ಆ ನಿನ್ನ ಗುಣವಿಂದು ಎಲ್ಲಿ ಹೋಯಿತು
ಬಳ್ಳಿ ಮರವ ದೂರ ಮಾಡಿ ಮಣ್ಣನೆಸೆಯುವಂತೆ
ತಾಯ ಕರುಳ ಚಿವುಟಿ ಚಿವುಟಿ ನೋವ ತುಂಬುವಂತೆ
ತಂದೆ ಮಕ್ಕಳನ್ನು ದೂರ ಮಾಡಿ ನೀನು
ಕ್ಷಣದಲ್ಲಿ ಗುಡಿಯಲ್ಲಿ ಕಲ್ಲಾಗಿ ಹೋದೆಯ
ಮಹೇಶ ಮಹೇಶ ಭುವಿಗೆ ತಿರುಗಿ ಬಾರೆಯ
ನನ್ನ ನೀನು ಮರೆತೆಯ
||ಓ ಶಂಕರ ಜಗದೀಶ ದಾಕ್ಷಾಯಿಣಿ ಹೃದಯೇಶ
ಗಂಗಾಧರ ಸರ್ವೇಶ ಮದನಾರಿ ವಿಶ್ವೇಶ ಕಾಪಾಡೆಯ
ಈ ಬಾಳಿನ ಸಂಜೆಯಲ್ಲಿ ಈ ವೇದನೆ ಸುಳಿಯಲ್ಲಿ
ನಾನಿನ್ನು ಇರಲಾರೆನೆ ನನೊಡೆಯ ಶ್ರೀ ಕಂಠನೆ
ಓಓಓ ದಯೆತೋರು ಮಹಾದೇವನೆ||
-
ಓ ಶಂಕರ ಜಗದೀಶ ದಾಕ್ಷಾಯಿಣಿ ಹೃದಯೇಶ
ಗಂಗಾಧರ ಸರ್ವೇಶ ಮದನಾರಿ ವಿಶ್ವೇಶ ಕಾಪಾಡೆಯ
ಈ ಬಾಳಿನ ಸಂಜೆಯಲ್ಲಿ ಈ ವೇದನೆ ಸುಳಿಯಲ್ಲಿ
ನಾನಿನ್ನು ಇರಲಾರೆನೆ ನನೊಡೆಯ ಶ್ರೀ ಕಂಠನೆ
ಓಓಓ ದಯೆತೋರು ಮಹಾದೇವನೆ
ನನ್ನ ಮೇಲೆ ರೋಷವೇಕೆ
ನನ್ನ ಮೇಲೆ ದ್ವೇಷವೇಕೆ
ನಿನ್ನ ಭಕ್ತನಾದ ನನಗೆ ಇಂತ ಘೋರ ಶಾಪವೇಕೆ
ಕರುಣಾಳು ನನ ಬಾಳು ಹೀಗೇತಕೆ
ನಿನ್ನ ಪಾದವನ್ನೆ ನಂಬಿಕೊಂಡೆನಲ್ಲ
ನೀನೆ ನನ್ನ ತಂದೆ ತಾಯಿ ಎಂದುಕೊಂಡೆನಲ್ಲ
ಶಿವನೆ ಭವನೆ ಹರನೆ ಶರಣರೊಡೆಯ ಮೃಡನೆ
ಕರ ಮುಗಿವೆ ಶರಣೆನುವೆ ತಾಳೆಲಾರೆನಯ್ಯ
ಓ ಕಂದ ನಾ ಬಂದೆ ಎಂದೆನ್ನಲಾರೆಯ
||ಓ ಶಂಕರ ಜಗದೀಶ ದಾಕ್ಷಾಯಿಣಿ ಹೃದಯೇಶ
ಗಂಗಾಧರ ಸರ್ವೇಶ ಮದನಾರಿ ವಿಶ್ವೇಶ ಕಾಪಾಡೆಯ||
ಈ ಲೋಕವ ಕಾಪಾಡಲು ವಿಷವನ್ನೆ ನೀ ಉಂಡೆ
ಮುನಿಬಾಲನ ಸಂತೈಸಲು ಯಮನನ್ನೆ ಹೋಗೆಂದೆ
ಆ ನಿನ್ನ ಗುಣವಿಂದು ಎಲ್ಲಿ ಹೋಯಿತು
ಬಳ್ಳಿ ಮರವ ದೂರ ಮಾಡಿ ಮಣ್ಣನೆಸೆಯುವಂತೆ
ತಾಯ ಕರುಳ ಚಿವುಟಿ ಚಿವುಟಿ ನೋವ ತುಂಬುವಂತೆ
ತಂದೆ ಮಕ್ಕಳನ್ನು ದೂರ ಮಾಡಿ ನೀನು
ಕ್ಷಣದಲ್ಲಿ ಗುಡಿಯಲ್ಲಿ ಕಲ್ಲಾಗಿ ಹೋದೆಯ
ಮಹೇಶ ಮಹೇಶ ಭುವಿಗೆ ತಿರುಗಿ ಬಾರೆಯ
ನನ್ನ ನೀನು ಮರೆತೆಯ
||ಓ ಶಂಕರ ಜಗದೀಶ ದಾಕ್ಷಾಯಿಣಿ ಹೃದಯೇಶ
ಗಂಗಾಧರ ಸರ್ವೇಶ ಮದನಾರಿ ವಿಶ್ವೇಶ ಕಾಪಾಡೆಯ
ಈ ಬಾಳಿನ ಸಂಜೆಯಲ್ಲಿ ಈ ವೇದನೆ ಸುಳಿಯಲ್ಲಿ
ನಾನಿನ್ನು ಇರಲಾರೆನೆ ನನೊಡೆಯ ಶ್ರೀ ಕಂಠನೆ
ಓಓಓ ದಯೆತೋರು ಮಹಾದೇವನೆ||