Balakuva Balliyalli Lyrics

in Money Honey Shani

Balakuva Balliyalli Lyrics

in Money Honey Shani

LYRIC

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

LYRIC

ಬಳಕುವ ಬಳ್ಳಿಯಲ್ಲಿ
ಬಿರಿದ ಮೋಹದ ಮಲ್ಲಿಗೆ
ಹೇಳೇ ನನ್ನಲಿ ಈಗ ನೀನು
ಸೇರಬೇಕು…. ಎಲ್ಲಿಗೆ
 
ಬಳಕುವ ಬಳ್ಳಿಯಲ್ಲಿ
ಬಿರಿದ ಮೋಹದ ಮಲ್ಲಿಗೆ
ಹೇಳೇ ನನ್ನಲಿ ಈಗ ನೀನು
ಸೇರಬೇಕು…. ಎಲ್ಲಿಗೆ
 
ಶಿವನ ಪಾದ ಕಮಲದಲ್ಲಿ
ಸೇರಿ ಮುಕ್ತಿ ಪಡೆವೆಯಾ
ಪ್ರಿಯನ ಮನವ ಗೆದ್ದು ನೀನು
ಅವನ ಕೈಯ್ಯಾ ಹಿಡಿವೆಯಾ
ಮಸಣದಲ್ಲಿ ಶವದ ಮೇಲೆ
ಇರಲು ಬಯಕೆ ತಳೆವೆಯಾ
ಅಥವ ನೀನು ಬಳ್ಳಿಯಲ್ಲಿ
ಅರಳಿ ದುಂಬಿಯ ಕರೆವೆಯಾ
ಅರಳಿ ದುಂಬಿಯ ಕರೆವೆಯಾ
 
ನಿನ್ನ ರೂಪ ತರಲು ನನಗೆ
ಇನಿಯನ ನೆನಪ
ಅವನ ಸನಿಹ ಸಾರಿ ನಾನು
ಮರೆತೆ ನಿನ್ನ ಸ್ನೇಹವ
ಇಂದಿನಿಂದ ಇಂಥ ತಪ್ಪು
ಮಾಡಿ ಮರೆಯೆನು ಮೋಹವ
ನಿನ್ನ ಕಂಪೆ ಹಾದಿ ಎನಗೆ
ಪ್ರಿಯನ ಬಳಿಗೆ ಸೇರುವ….
ಪ್ರಿಯನ ಬಳಿಗೆ ಸೇರುವ….
 
ಇನಿಯನ ಮೊದಲಲ್ಲಿ ಪಡೆದರೆ
ಬೇಡುವೇ ಶಿವನ….
ತನ್ನ ಚರಣ ಕಮಲದಲ್ಲಿ
ಇರಿಸಲು ನಿನ್ನ….
 
ಶಿವನ ನೀ ಮೊದಲಲ್ಲಿ ಪಡೆದರೆ
ಹೇಳೋ ಓ ಸುಮನಾ..
ಜನುಮ ಜನುಮ ನನ್ನ ಪ್ರಿಯನೇ
ಬಿಡದೆ ಇರಲೆನ್ನಾ…
ಬಿಡದೆ ಇರಲೆನ್ನಾ…
 
|| ಬಳಕುವ…ಬಳ್ಳಿಯಲ್ಲಿ
ಬಿರಿದ ಮೋಹದ ಮಲ್ಲಿಗೆ
ಹೇಳೇ ನನ್ನಲಿ ಈಗ ನೀನು
ಸೇರಬೇಕು….ಎಲ್ಲಿಗೆ….||