ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೆ
ಏಕೆ ದೂರವೆ ನಿಲ್ಲುವೆ ಏನು ಹೇಳದೆ
ಜೀವಭಾವದ ಸ್ಪಂದನ ನನ್ನ ಕಣ್ಣಲೆ ನಿಂತಿದೆ
ಏಕೆ ಹೀಗೆಯೆ ಕಾಡುವೆ ಚೂರು ನೋಡದೆ
ಒಲಿದ ಬಳಿಕ ಬೇಕೆ ವಿವರಣೆ
ಮನದಿ ಸ್ವೀಕರಿಸು ನಾನಂತು ನಿನ್ನವನೆ
ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೆ
ಏಕೆ ದೂರವೆ ನಿಲ್ಲುವೆ ಏನು ಹೇಳದೆ
ಅರಳಿ ನೋಡುವೆಯ ಮರುಳನ ಕರೆಗೆ
ಏನು ಹೇಳದೇನೆ ಹೇಳು ಯಾರು ನೀ ನನಗೆ
ವಿಷಯವಿದು ನಾಜೂಕು ಉಸಿರಿನಲ್ಲಿ ನೀ ಬೇಕು
||ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೆ
ಏಕೆ ದೂರವೆ ನಿಲ್ಲುವೆ ಏನು ಹೇಳದೆ||
ಕವಿದ ಮೋಡವಿದು ಹನಿವುದೆ ಕರಗಿ
ಬಿರಿವ ಮೌನ ಮುರಿದು ಮಾತು ಮೂಡುವುದೆ ತಿರುಗಿ
ಉಳಿದಿರುವೆ ಹೊಸ್ತಿಲಲಿ ಬೀಸುವುದೆ ಹೊಸಗಾಳಿ
ಕೇಳಲಾಗದು ಭಾವನೆ ಹೇಳದಿದ್ದರೆ ಬೇಗನೆ
ಕಾಣದ ನಾಳೆಗೆ ಒಂದು ವಂದನೆ
ಒಲಿದ ಬಳಿಕ ಬೇಕೆ ವಿವರಣೆ
ಮನದಿ ಸ್ವೀಕರಿಸು ನಾನಂತು ನಿನ್ನವನೆ
||ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೆ
ಏಕೆ ದೂರವೆ ನಿಲ್ಲುವೆ ಏನು ಹೇಳದೆ||
ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೆ
ಏಕೆ ದೂರವೆ ನಿಲ್ಲುವೆ ಏನು ಹೇಳದೆ
ಜೀವಭಾವದ ಸ್ಪಂದನ ನನ್ನ ಕಣ್ಣಲೆ ನಿಂತಿದೆ
ಏಕೆ ಹೀಗೆಯೆ ಕಾಡುವೆ ಚೂರು ನೋಡದೆ
ಒಲಿದ ಬಳಿಕ ಬೇಕೆ ವಿವರಣೆ
ಮನದಿ ಸ್ವೀಕರಿಸು ನಾನಂತು ನಿನ್ನವನೆ
ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೆ
ಏಕೆ ದೂರವೆ ನಿಲ್ಲುವೆ ಏನು ಹೇಳದೆ
ಅರಳಿ ನೋಡುವೆಯ ಮರುಳನ ಕರೆಗೆ
ಏನು ಹೇಳದೇನೆ ಹೇಳು ಯಾರು ನೀ ನನಗೆ
ವಿಷಯವಿದು ನಾಜೂಕು ಉಸಿರಿನಲ್ಲಿ ನೀ ಬೇಕು
||ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೆ
ಏಕೆ ದೂರವೆ ನಿಲ್ಲುವೆ ಏನು ಹೇಳದೆ||
ಕವಿದ ಮೋಡವಿದು ಹನಿವುದೆ ಕರಗಿ
ಬಿರಿವ ಮೌನ ಮುರಿದು ಮಾತು ಮೂಡುವುದೆ ತಿರುಗಿ
ಉಳಿದಿರುವೆ ಹೊಸ್ತಿಲಲಿ ಬೀಸುವುದೆ ಹೊಸಗಾಳಿ
ಕೇಳಲಾಗದು ಭಾವನೆ ಹೇಳದಿದ್ದರೆ ಬೇಗನೆ
ಕಾಣದ ನಾಳೆಗೆ ಒಂದು ವಂದನೆ
ಒಲಿದ ಬಳಿಕ ಬೇಕೆ ವಿವರಣೆ
ಮನದಿ ಸ್ವೀಕರಿಸು ನಾನಂತು ನಿನ್ನವನೆ
||ಒಂದು ಬೆಚ್ಚನೆ ಭಾವನೆ ನಿನ್ನ ರೂಪದಿ ಬಂದಿದೆ
ಏಕೆ ದೂರವೆ ನಿಲ್ಲುವೆ ಏನು ಹೇಳದೆ||