Naana Bannada Lyrics

ನಾನಾಬಣ್ಣದ Lyrics

in Masth Mohabbath

in ಮಸ್ತ್ ಮೊಹಬ್ಬತ್

LYRIC

Song Details Page after Lyrice

ನಾನಾಬಣ್ಣದ ಮಾಯಾ ಪ್ರಪಂಚವು
ಎಲ್ಲೊ ಹೋಯಿತೆ ಮರೆಯಾಗಿ
ನನ್ನ ಸ್ವಪ್ನದ ಆಶಾತರಂಗವು
ನನ್ನೆ ನುಂಗಿತೆ ಸುಳಿಯಾಗಿ
ಸಾವಿರ ನೋವು ಪೀಡಿಸುವಾಗ
ಕನ್ನಡಿ ಕೂಡ ಛೇಡಿಸುವಾಗ
ದೂರುತ್ತ ಕೂರಬೇಕೆ ನನ್ನನ್ನೆ ನಾನೀಗ
 
||ನಾನಾಬಣ್ಣದ ಮಾಯಾ ಪ್ರಪಂಚವು
ಎಲ್ಲೊ ಹೋಯಿತೆ ಮರೆಯಾಗಿ
ನನ್ನ ಸ್ವಪ್ನದ ಆಶಾತರಂಗವು
ನನ್ನೆ ನುಂಗಿತೆ ಸುಳಿಯಾಗಿ
ಸಾವಿರ ನೋವು ಪೀಡಿಸುವಾಗ
ಕನ್ನಡಿ ಕೂಡ ಛೇಡಿಸುವಾಗ
ದೂರುತ್ತ ಕೂರಬೇಕೆ ನನ್ನನ್ನೆ ನಾನೀಗ||
 
ಇತ್ತು ಕೋಮಲವಾದಂತ ಸಣ್ಣ ಹಂಬಲ ನನ್ನಲ್ಲಿ
ನಿನ್ನ ಕೈಯಲಿ ಕೈ ಇಟ್ಟು ಹಗುರಾದಂತ ಕ್ಷಣ ಇನ್ನೆಲ್ಲಿ
ನನ್ನ ಕಂಬನಿ ಕಣ್ಣಿಂದ ಹೇಗೆ ಕಾಣಲಿ ಏನನ್ನು
ಇನ್ನು ಆಲಿಸಬಲ್ಲೆ ನಾ ಮರೆಯಾದಂತ ಪಿಸುಮಾತನ್ನು
ಮಲ್ಲಿಗೆ ಹೂವ ಮಂಟಪದಲ್ಲಿ
ಬಂದಿರುವಾಗ ಸುಂಟರಗಾಳಿ
ಆಯುತ್ತ ಕೂರಬೇಕೆ ಹೂವನ್ನು ನಾನೀಗ
 
ನನ್ನ ಗೀತೆಯ ಸಾಲಿಂದ ದೂರವಾಯಿತೆ ಸಂಗೀತ
ಸಂತೆ ಮಧ್ಯವೆ  ನಿನ್ನಿಂದ ಕರೆ ಬಂದಂತೆ ಭ್ರಮೆಯಾದೀತ
ಏನೊ ಹಾಡಲು ನಾ ಹೋಗಿ
ಬೇರೆಯಾಯಿತೆ ರಾಗ
ನನ್ನ ಕೇಳಿದೆ ತಂಗಾಳಿ ಕಥೆ ಇನ್ನೇನು ಜೊತೆ ಯಾರೀಗ
ಮುಂದಿನ ದಾರಿ ಕಾಣುವ ಮುನ್ನ
ಚಂದಿರ ಹಾರಿ ಹೋಗುವ ಮುನ್ನ
ಕಾಯುತ್ತ ಕೂರಬೇಕೆ ನಿನ್ನನ್ನೆ ನಾನೀಗ
 
||ನಾನಾಬಣ್ಣದ ಮಾಯಾ ಪ್ರಪಂಚವು
ಎಲ್ಲೊ ಹೋಯಿತೆ ಮರೆಯಾಗಿ
ನನ್ನ ಸ್ವಪ್ನದ ಆಶಾತರಂಗವು
ನನ್ನೆ ನುಂಗಿತೆ ಸುಳಿಯಾಗಿ||

ನಾನಾಬಣ್ಣದ ಮಾಯಾ ಪ್ರಪಂಚವು
ಎಲ್ಲೊ ಹೋಯಿತೆ ಮರೆಯಾಗಿ
ನನ್ನ ಸ್ವಪ್ನದ ಆಶಾತರಂಗವು
ನನ್ನೆ ನುಂಗಿತೆ ಸುಳಿಯಾಗಿ
ಸಾವಿರ ನೋವು ಪೀಡಿಸುವಾಗ
ಕನ್ನಡಿ ಕೂಡ ಛೇಡಿಸುವಾಗ
ದೂರುತ್ತ ಕೂರಬೇಕೆ ನನ್ನನ್ನೆ ನಾನೀಗ
 
||ನಾನಾಬಣ್ಣದ ಮಾಯಾ ಪ್ರಪಂಚವು
ಎಲ್ಲೊ ಹೋಯಿತೆ ಮರೆಯಾಗಿ
ನನ್ನ ಸ್ವಪ್ನದ ಆಶಾತರಂಗವು
ನನ್ನೆ ನುಂಗಿತೆ ಸುಳಿಯಾಗಿ
ಸಾವಿರ ನೋವು ಪೀಡಿಸುವಾಗ
ಕನ್ನಡಿ ಕೂಡ ಛೇಡಿಸುವಾಗ
ದೂರುತ್ತ ಕೂರಬೇಕೆ ನನ್ನನ್ನೆ ನಾನೀಗ||
 
ಇತ್ತು ಕೋಮಲವಾದಂತ ಸಣ್ಣ ಹಂಬಲ ನನ್ನಲ್ಲಿ
ನಿನ್ನ ಕೈಯಲಿ ಕೈ ಇಟ್ಟು ಹಗುರಾದಂತ ಕ್ಷಣ ಇನ್ನೆಲ್ಲಿ
ನನ್ನ ಕಂಬನಿ ಕಣ್ಣಿಂದ ಹೇಗೆ ಕಾಣಲಿ ಏನನ್ನು
ಇನ್ನು ಆಲಿಸಬಲ್ಲೆ ನಾ ಮರೆಯಾದಂತ ಪಿಸುಮಾತನ್ನು
ಮಲ್ಲಿಗೆ ಹೂವ ಮಂಟಪದಲ್ಲಿ
ಬಂದಿರುವಾಗ ಸುಂಟರಗಾಳಿ
ಆಯುತ್ತ ಕೂರಬೇಕೆ ಹೂವನ್ನು ನಾನೀಗ
 
ನನ್ನ ಗೀತೆಯ ಸಾಲಿಂದ ದೂರವಾಯಿತೆ ಸಂಗೀತ
ಸಂತೆ ಮಧ್ಯವೆ  ನಿನ್ನಿಂದ ಕರೆ ಬಂದಂತೆ ಭ್ರಮೆಯಾದೀತ
ಏನೊ ಹಾಡಲು ನಾ ಹೋಗಿ
ಬೇರೆಯಾಯಿತೆ ರಾಗ
ನನ್ನ ಕೇಳಿದೆ ತಂಗಾಳಿ ಕಥೆ ಇನ್ನೇನು ಜೊತೆ ಯಾರೀಗ
ಮುಂದಿನ ದಾರಿ ಕಾಣುವ ಮುನ್ನ
ಚಂದಿರ ಹಾರಿ ಹೋಗುವ ಮುನ್ನ
ಕಾಯುತ್ತ ಕೂರಬೇಕೆ ನಿನ್ನನ್ನೆ ನಾನೀಗ
 
||ನಾನಾಬಣ್ಣದ ಮಾಯಾ ಪ್ರಪಂಚವು
ಎಲ್ಲೊ ಹೋಯಿತೆ ಮರೆಯಾಗಿ
ನನ್ನ ಸ್ವಪ್ನದ ಆಶಾತರಂಗವು
ನನ್ನೆ ನುಂಗಿತೆ ಸುಳಿಯಾಗಿ||

Naana Bannada song lyrics from Kannada Movie Masth Mohabbath starring Prem Kumar, Poonam Bajwa, Chikkanna, Lyrics penned by Jayanth Kaikini Sung by Shreya Ghoshal, Music Composed by Mano Murthy, film is Directed by Mohan Malagi and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ