Andavo Andavu Kannada Naadu Lyrics

in Mallige Hoove

Video:

LYRIC

ಅಂದವೋ ಅಂದವು ಕನ್ನಡ ನಾಡು (ಹೇ. . ಹೇ. .)
ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯ ಗೂಡು (ಹೇ. . ಹೇ. .)
ನನ್ನ ಹಾಡು ಅಲ್ಲಿದೆ ನೋಡು ಕಾವೇರಿ ಹರಿವಳು
ನನ್ನ ಮನೆಯ ಅಂಗಳದಲ್ಲಿ ಕಸ್ತೂರಿ ಮೆರೆವಳು
ನನ್ನ ಮಡದಿ ಮಲ್ಲಿಗೆಯಲ್ಲಿ
ಅಂದವೋ ಅಂದವು ಕನ್ನಡ ನಾಡು (ಹೇ. . ಹೇ. .)
ನನ್ನ ಗೂಡು ಅಲ್ಲಿದೆ ನೋಡು

ನನ್ನ ಮನೆಯ ಮುಂದೆ ಸಹ್ಯಾದ್ರಿ ಗಿರಿಯ ಹಿಂದೆ
ದಿನವು ನೂರು ಶಶಿಯು ಹುಟ್ಟಿ ಬಂದರೂ
ನನ್ನ ರತಿಯ ಮೊಗವ ಮರೆಮಾಚದಂತ ನಗುವ
ಅವನೆಂದು ತಾರಲಿಲ್ಲವೇ ಪ್ರಿಯೇ.. ಓಹೋ.. ಓ
ನನ್ನ ಕಣ್ಣ ಮುಂದೆ ಮರಗಿಡದ ಮಂದೆ ಮಂದೆ
ಕೋಟಿ ಪಕ್ಷಿ ಕೂಗು ಕೇಳಿ ಬಂದರೂ
ನನ್ನ ಚೆಲುವೆ ಹಾಡು ಅನುರಾಗದಿಂದ ನೋಡು
ರಾಗ ನೋಟ ಕಾಣದೇ ಪ್ರಿಯೇ..ಹೇ ಹೇ…
ಸಹ್ಯಾದ್ರಿ ಕಾಯ್ವಳು ನನ್ನ ಮನೆಯ ಕರುಣೆಯಮೇಲೆ
ಆಗುಂಬೆ ನಗುವಳು ನನ್ನ ಮಡದಿ ನೊಸಲಿನ ಮೇಲೆ

|| ಅಂದವೋ ಅಂದವು ಕನ್ನಡ ನಾಡು (ಹೇ. . ಹೇ. .)
ನನ್ನ ಗೂಡು ಅಲ್ಲಿದೆ ನೋಡು ||

ನಾಳೆಗಿಂತ ಇಂದೆ ಸಿಹಿಯಾದ ದಿವಸವಂತೆ
ಇಂದು ನಾಳೆ ಸಿಹಿಯ ಸ್ನೇಹವೆಂಬುದು
ಅಂತರಾಳವೆಂಬ ನೇತ್ರಾವತಿಯ ತುಂಬ
ಸ್ನೇಹ ಜಲದ ಸೆಲೆಯು ನಿಲ್ಲದೋ..ಹೇ ಹೇ…
ಉಸಿರು ಎಂಬ ಹಕ್ಕಿ ಇದೆ ಗೂಡಿನಲ್ಲಿ ಸಿಕ್ಕಿ
ಕುಹು ಕುಹು ಎಂದರೇನೆ ಜೀವನ
ಬೆಚ್ಚಗಿರುವ ಮನೆಯ ತನ್ನ ಇಚ್ಚೆಯರಿವ ಸತಿಯ
ಸವಿ ಪ್ರೇಮ ದೊರೆತ ಬಾಳು ಧನ್ಯವೋ.. ಹೇ ಹೇ..
ನಾಡ ನುಡಿ ಇದೂ ನನಗೆ ಎಂದು ಕೋಟಿ ರುಪಾಯಿ
ಬಾಳ ಗುಡಿಯಲಿ ನಿಜದ ಮುಂದೆ ನಾನು ಸಿಪಾಯಿ

|| ಅಂದವೋ ಅಂದವು ಕನ್ನಡ ನಾಡು (ಹೇ. . ಹೇ. .)
ನನ್ನ ಗೂಡು ಅಲ್ಲಿದೆ ನೋಡು
ಚಂದವೋ ಚಂದವು ನನ್ನಯ ಗೂಡು (ಹೇ. . ಹೇ. .)
ನನ್ನ ಹಾಡು ಅಲ್ಲಿದೆ ನೋಡು ಕಾವೇರಿ ಹರಿವಳು
ನನ್ನ ಮನೆಯ ಅಂಗಳದಲ್ಲಿ ಕಸ್ತೂರಿ ಮೆರೆವಳು
ನನ್ನ ಮಡದಿ ಮಲ್ಲಿಗೆಯಲ್ಲಿ||

Andavo Andavu Kannada Naadu song lyrics from Kannada Movie Mallige Hoove starring Ambarish, Shashikumar, Roopini, Lyrics penned by Hamsalekha Sung by K J Yesudas, Chithra, Music Composed by Hamsalekha, film is Directed by Raj Kishor and film is released on 1992