Ellellu Neene Yelliruve Jane Lyrics

in Magiya Kanasu

Video:

LYRIC

ಆಹಾ... ಓಹೋ... ಹೇ....
ಎಲ್ಲೆಲ್ಲು ನೀನೇ | ಎಲ್ಲಿರುವೆ ಜಾಣೆ  ||2||
ಕರುನಾಡ ಸಿರಿದೇವಿ | ಐಸಿರಿಯ ಸೋನೆ |
 
ಹಸಿರೊಡೆದು ಉಸಿರಾಡಿ | ನಗುತಿರುವ ಮಡಿಲಲ್ಲಿ
ಕಾವೇರಿ ಮೈದೋರಿ | ಬೆಳೆದಿರುವಳು |
ಆಹಾ….
ಕವಲೊಡೆದ ಜವಳಿಗಳು | ಒಡಲಾಡಿ ಎದೆಯಲ್ಲಿ
ತುಂಗಭದ್ರೆಯ | ಸೇರಿ ನಲಿದಿರುವಳು |
ನವರೂಪ ತಾಳಿದ | ಗಾಳಿಗೆ ಸಮನೆಂದು ||
ಗೋದಾವರಿ ಮನೆಯ ತುಂಬಿರುವಳು |
 
ಎಲ್ಲೆಲ್ಲು ನೀನೇ | ಎಲ್ಲಿರುವೆ ಜಾಣೆ    
ಕರುನಾಡ ಸಿರಿದೇವಿ | ಐಸಿರಿಯ ಸೋನೆ |
 
ಮುಗಿಲೇರಿ ಮುತ್ತಿಡುವ ಆಗಸದ ಆಚೆಗೆ |
ಗಿರಿಸಾಲು ಸಾಲಾಗಿ ಮೆರೆದಾಡಿದೆ |
ಆಹಾ...
ಕೋಗಿಲೆಯ ಇಂಚರದ ಇಂಪನ್ನು ಹಂಚುತ್ತಾ ||
ಸಾಲಾಗಿ ತರುಲತೆಯು ಕರೆ ಕೂಗಿದೆ ||
ಚೆಲುವಿನ ರಾಶಿಯ ಗೆಲುವನೂ ಸಾರಲು |
ಮಲೆನಾಡ ಮೈಸಿರಿಯು ನೆಲೆ ನಿಂತಿದೆ ||
 
ಎಲ್ಲೆಲ್ಲು ನೀನೇ | ಎಲ್ಲಿರುವೆ ಜಾಣೆ  
ಕರುನಾಡ ಸಿರಿದೇವಿ | ಐಸಿರಿಯ ಸೋನೆ |
 

Ellellu Neene Yelliruve Jane song lyrics from Kannada Movie Magiya Kanasu starring Srinath, Aarathi,, Lyrics penned by M N Vyasa Rao Sung by S P Balasubrahmanyam, Music Composed by Vijaya Bhaskar, film is Directed by K S L Swamy and film is released on 1977