Alli Purna Chandramma Elli Lyrics

in Maduve Maduve Maduve

Video:

LYRIC

ಅಲ್ಲಿ ಪೂರ್ಣ ಚಂದ್ರಮ
ಇಲ್ಲಿ ಕಣ್ಣ ಸಂಗಮ
ಇಂದು ನಮ್ಮ ಬಾಳಿನಲ್ಲಿ    
ಮಧುರ ಮಿಲನ ಸಂಭ್ರಮ
ಪ್ರೇಮ ಪೂರ್ಣಿಮ
ಪ್ರೇಮ ಪೂರ್ಣಿಮ
 
ನೀ ಮುಡಿದಿಹ ಮಲ್ಲಿಗೆ
ಪ್ರೀತಿ ಸುಗಂಧವ
ಈ ದಿನ ಚೆಲ್ಲುತಿರೆ  
ಈ ದಿನ ಚೆಲ್ಲುತಿರೆ
ಕೆಂಪಗೆ ಆಗಿದೆ ಗುಲಾಬಿ ಕೆನ್ನೆ
ನಾಚಿಕೆ ನಲಿಯುತಿರೆ   
ನಾಚಿಕೆ ನಲಿಯುತಿರೆ
ಮುಂಗುರುಳ ಮಂಟಪದೆ   
ನಿನ್ನಯ ಮುಖವು ಮಿಂಚುತಿರೆ
 
ಪ್ರೇಮ ಪೂರ್ಣಿಮ  
ಪ್ರೇಮ ಪೂರ್ಣಿಮ…
 
ಕಾಮನಬಿಲ್ಲಿನ ಬಣ್ಣಗಳೆಲ್ಲ
ನಿನ್ನಯ ಕಣ್ಣಲಿ ಮೂಡುತಿದೆ
ನಿನ್ನಯ ಕಣ್ಣಲಿ ಮೂಡುತಿದೆ
ಆ ಬಣ್ಣಗಳೆಲ್ಲವ ನೀನಿಂದು
ಈ ಎನ್ನಯ ಕಣ್ಣಲಿ ತುಂಬುತಿಹೆ
ಎನ್ನಯ ಕಣ್ಣಲಿ ತುಂಬುತಿಹೆ
ಒಡವೆಗಳು ನಿನಗೇಕೆ
ಆಗಿದೆ ಲಜ್ಜೆಯೆ ಆಭರಣ
 
ಪ್ರೇಮ ಪೂರ್ಣಿಮ
ಪ್ರೇಮ ಪೂರ್ಣಿಮ…
 
|| ಅಲ್ಲಿ ಪೂರ್ಣ ಚಂದ್ರಮ
ಇಲ್ಲಿ ಕಣ್ಣ ಸಂಗಮ
ಇಂದು ನಮ್ಮ ಬಾಳಿನಲ್ಲಿ    
ಮಧುರ ಮಿಲನ ಸಂಭ್ರಮ
ಪ್ರೇಮ ಪೂರ್ಣಿಮ
ಪ್ರೇಮ ಪೂರ್ಣಿಮ…||

Alli Purna Chandramma Elli song lyrics from Kannada Movie Maduve Maduve Maduve starring Udayakumar, Jayanthi,, Lyrics penned by Geethapriya Sung by P B Srinivas, Music Composed by Sathyam, film is Directed by Geethapriya and film is released on 1969