Manmatha Kuniyalu Lyrics

in Kula Puthra

LYRIC

ಮನ್ಮಥ ಕುಣಿಯಲು
ಯೌವ್ವನ ಕುಣಿವುದು
ಮನ್ಮಥ ನಲಿಯಲು
ಆಸೆಯೂ ನಲಿವುದು
ಹೂವಾಗಿ ಮನಸು
ಆಗ ನೂರಾರು ಕನಸು ....
(ಲಲ್ಲಲ್ಲಲ್ಲಲ್ಲಾ.. )
ನೂರಾರು ಕನಸು….

ಆಆಆ... ಆಆಆ... ಆಆಆ...

ಮಾವಿನ ಮರವು ಮುದಿಯಾಗುತಿರೆ
ಹಣ್ಣಿನ ರುಚಿ ಕಹಿಯೇನು
ಸಂಪಿಗೆ ಮರವು ಮುಡಿಯಾದರೆ
ಹೂವಲಿ ಕಂಪಿರದೇನು
( ಆಆಆ... ಲಲ್ಲಲ್ಲಲ್ಲಲ್ಲಾ.. ಆಆಆ.. )
ಕಣ್ಣಲಿ ಕರೆಯುವ ಹೆಣ್ಣಿನ ನೋಟಕೆ
ಸೋಲದ ಜನರುಂಟೇನು
ಚೆಲುವೆಯ ಸ್ನೇಹವ ಅಂಗನೆ
ಸಂಗವ ಬೇಡದ ಮನಸುಂಟೆನು
ಮದನನ ಬಾಣ ಸೋಕಿದ ಮೇಲೆ
ಮುದಿಯನ ಬದುಕು ಶೃಂಗಾರ ಲೀಲೆ

|| ಮನ್ಮಥ ಕುಣಿಯಲು
ಯೌವ್ವನ ಕುಣಿವುದು
ಮನ್ಮಥ ನಲಿಯಲು
ಆಸೆಯೂ ನಲಿವುದು
ಹೂವಾಗಿ ಮನಸು
ಆಗ ನೂರಾರು ಕನಸು ...||
 
(ಆಆಆ... ಆಆಆ... ಆಆಆ  )
 
ಮೂರನೇ ಕಣ್ಣಲಿ ಮಾರನ ಈಶ್ವರ
ಸುಟ್ಟನು ಎಂಬುದು ಸುಳ್ಳು
ಕಾಮಿನಿ ಕಂಗಳ ಅಂಚಲಿ ಇನ್ನೂ
ತೋರುವ ಸಕ್ಕರೆ ಬಿಲ್ಲು
(ಆಆಆ... ಪಪ್ಪಪ್ಪ .. ಆಆಆ  )
ತಾಳೆನು ವಿರಹದ ನೋವನು
ಸುಂದರಿ ಸನಿಹಕೆ ಬಂದು ನಿಲ್ಲು
ಅನುದಿನ ತಾಪವ ತೀರಿಸಿ
ನಂತರ ನಿನ್ನಾ ನಗುವಲಿ ಕೊಲ್ಲು
ಸುಂದರ ತಾರೆ ಪ್ರೀತಿಯ ಧಾರೆ
ಮಲ್ಲಿಗೆ ಹಾಸಿಗೆ ಹಾಸುವೇ ಬಾರೆ
 
|| ಮನ್ಮಥ (ಕುಣಿಯಲು ()
ಯೌವ್ವನ (ಕುಣಿವುದು
(ಮನ್ಮಥ () ನಲಿಯಲು (
ಆಸೆಯೂ (ನಲಿವುದು
ಹೂವಾಗಿ ಮನಸು ಆಗ
ನೂರಾರು ಕನಸು ....(ಪಪ್ಪಪ್ಪಪ್ಪ   )
ಹೂವಾಗಿ ಮನಸು
ಆಗ ನೂರಾರು ಕನಸು ...||

Manmatha Kuniyalu song lyrics from Kannada Movie Kula Puthra starring Shankarnag, Dwarakish, Gayathri, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by T R Ramanna and film is released on 1981