ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ
ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ
ವೇದನೆ ರಾಗವ ವಿರಹದ ಲಯದಲಿ
ಹೃದಯದೆ ಮೀಟಿದೆಯಾ
|| ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ…||
ಗೆಜ್ಜೆಗಳು ಕುಣಿದಾಗ ಮೂಜಗವು ಮರೆತಾಗ
ಹೊಮ್ಮಿರಲು ಅನುರಾಗ ಸುಖ ಕಂಡೆನು
ನಿನ್ನ ನಗು ಮರೆಯಾಗೆ ವೇಣುವಿದು ಮೂಕಾಗೆ
ಕಂಬನಿ ಹೊಳೆಯಲ್ಲಿ ನಾ ಮಿಂದೆನು
ದೈವವದು ಇರದಂತ ಗುಡಿಯಾದೆ ನಾ
ರಸಹೀನ ಇಂದಾಯ್ತು ಈ ಜೀವನ
ವೇದನೆ ರಾಗವ ವಿರಹದ ಲಯದಲಿ
ಹೃದಯದೆ ಮೀಟಿದೆಯಾ….
|| ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ…||
ಕನಸುಗಳು ಕಲೆತಾಗ ಮನಸುಗಳು ಬೆರೆತಾಗ
ಪ್ರೇಮವೆನ್ನೊ ಅಲೆಯಲ್ಲಿ ನಾ ತೇಲಿದೆ
ಜನ್ಮಗಳ ಬಂಧನವೊ ಈ ನನ್ನ ತಪ ಫಲವೊ
ಅತ್ಮಗಳ ಸಮ್ಮಿಲನ ಸವಿ ನೋಡಿದೆ
ನಿನ್ನೊಲವ ಬೆಳಕಲ್ಲಿ ನಡೆದಾಡಿದೆ
ನೊಂದಿರುವೆ ಇರುಳಲ್ಲಿ ಗುರಿ ಕಾಣದೆ
ದೇಹಕೆ ಪ್ರಾಣವು ಆಗಿದೆ ಭಾರವು
ಅಂತ್ಯವ ತೋರಿಸೆಯಾ….ಓ….
|| ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ
ವೇದನೆ ರಾಗವ ವಿರಹದ ಲಯದಲಿ
ಹೃದಯದೆ ಮೀಟಿದೆಯಾ…
ನಾದವೇ ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ…||
ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ
ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ
ವೇದನೆ ರಾಗವ ವಿರಹದ ಲಯದಲಿ
ಹೃದಯದೆ ಮೀಟಿದೆಯಾ
|| ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ…||
ಗೆಜ್ಜೆಗಳು ಕುಣಿದಾಗ ಮೂಜಗವು ಮರೆತಾಗ
ಹೊಮ್ಮಿರಲು ಅನುರಾಗ ಸುಖ ಕಂಡೆನು
ನಿನ್ನ ನಗು ಮರೆಯಾಗೆ ವೇಣುವಿದು ಮೂಕಾಗೆ
ಕಂಬನಿ ಹೊಳೆಯಲ್ಲಿ ನಾ ಮಿಂದೆನು
ದೈವವದು ಇರದಂತ ಗುಡಿಯಾದೆ ನಾ
ರಸಹೀನ ಇಂದಾಯ್ತು ಈ ಜೀವನ
ವೇದನೆ ರಾಗವ ವಿರಹದ ಲಯದಲಿ
ಹೃದಯದೆ ಮೀಟಿದೆಯಾ….
|| ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ…||
ಕನಸುಗಳು ಕಲೆತಾಗ ಮನಸುಗಳು ಬೆರೆತಾಗ
ಪ್ರೇಮವೆನ್ನೊ ಅಲೆಯಲ್ಲಿ ನಾ ತೇಲಿದೆ
ಜನ್ಮಗಳ ಬಂಧನವೊ ಈ ನನ್ನ ತಪ ಫಲವೊ
ಅತ್ಮಗಳ ಸಮ್ಮಿಲನ ಸವಿ ನೋಡಿದೆ
ನಿನ್ನೊಲವ ಬೆಳಕಲ್ಲಿ ನಡೆದಾಡಿದೆ
ನೊಂದಿರುವೆ ಇರುಳಲ್ಲಿ ಗುರಿ ಕಾಣದೆ
ದೇಹಕೆ ಪ್ರಾಣವು ಆಗಿದೆ ಭಾರವು
ಅಂತ್ಯವ ತೋರಿಸೆಯಾ….ಓ….
|| ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ
ವೇದನೆ ರಾಗವ ವಿರಹದ ಲಯದಲಿ
ಹೃದಯದೆ ಮೀಟಿದೆಯಾ…
ನಾದವೇ ನಾದವೇ ನನ್ನಿಂದ ದೂರಾದೆಯಾ
ಜೀವವೇ ಒಡಲಿಂದ ಬೇರಾದೆಯಾ…||
Naadave Nanninda song lyrics from Kannada Movie Krishna Rukmini starring Vishnuvardhan, Ramya Krishna, Devaraj, Lyrics penned by Shyamasundar Kulkarni Sung by S P Balasubrahmanyam, Music Composed by K V Mahadevan, film is Directed by Bhargava and film is released on 1988