Preethi Dhaivavu Lyrics

in Krishna Mecchida Radhe

LYRIC

ಪ್ರೀತಿ ದೈವವು ನಮ್ಮ ಅಕ್ಕ ಅಕ್ಕ
ನಮ್ಮ ಜೀವವು ನಮ್ಮ ಭಾವ ಭಾವ
ತಂದೆ ಯಾರೋ ತಾಯಿ ಯಾರೋ
ನಾವು ಕಾಣೆವಲ್ಲ ಎಂದು ನಮಗೆ ನೀವೇ ಎಲ್ಲ
ಅಕ್ಕ ಅಕ್ಕ ನಮ್ಮ ಅಮ್ಮನು ನೀನೇ
ಭಾವ ಭಾವ ನಮ್ಮ ಅಪ್ಪನು ನೀನೇ
ನಾವೇ ನಿಮ್ಮ ಮಕ್ಕಳು ತಾನೇ

 
|| ಪ್ರೀತಿ ದೈವವು ನಮ್ಮ ಅಕ್ಕ ಅಕ್ಕ
ನಮ್ಮ ಜೀವವು ನಮ್ಮ ಭಾವ ಭಾವ
ತಂದೆ ಯಾರೋ ತಾಯಿ ಯಾರೋ
ನಾವು ಕಾಣೆವಲ್ಲ ಎಂದು ನಮಗೆ ನೀವೇ ಎಲ್ಲ
ಅಕ್ಕ ಅಕ್ಕ ನಮ್ಮ ಅಮ್ಮನು ನೀನೇ
ಭಾವ ಭಾವ ನಮ್ಮ ಅಪ್ಪನು ನೀನೇ
ನಾವೇ ನಿಮ್ಮ ಮಕ್ಕಳು ತಾನೇ...||  
 
ಪ್ರೇಮ ಎಂಬುದ ಪಾಶ ಎಂಬುದ
ಪ್ರೀತಿ ಎಂಬುದ ಅಕ್ಕ ತಿಳಿಸಿದೆ
ಸತ್ಯ ನೀತಿಯ ಪಾಪ ಭೀತಿಯ
ಲೋಕ ರೀತಿಯ ಭಾವ ಕಲಿಸಿದೆ
ಅಕ್ಕನ ಮಾತಿಗೆಂದು ಎದುರೇ ಇಲ್ಲ
ಭಾವ ಎಳೆದ ಗೆರೆಯ ದಾಟುವುದಿಲ್ಲ
ನಿಮ್ಮೆದುರು ಬಾಲ ಬಿಚ್ಚೊ ಧೈರ್ಯವು ಇಲ್ಲ
ಕೋಪ ನಿಮಗೆ ಬಂದುದನ್ನು ಕಂಡೆ ಇಲ್ಲ
ಶಾಂತಿ ಸಹನೆ ಮೂರ್ತಿಯು ನೀವೇ ಎಲ್ಲ
ನೀವಲ್ಲದೆ ನಮಗೆ ಬೇರೆ ದೇವರೇ ಇಲ್ಲ

|| ಪ್ರೀತಿ ದೈವವು ನಮ್ಮ ಅಕ್ಕ ಅಕ್ಕ
ನಮ್ಮ ಜೀವವು ನಮ್ಮ ಭಾವ ಭಾವ
ತಂದೆ ಯಾರೋ ತಾಯಿ ಯಾರೋ
ನಾವು ಕಾಣೆವಲ್ಲ ಎಂದು ನಮಗೆ ನೀವೇ ಎಲ್ಲ
ಅಕ್ಕ ಅಕ್ಕ ನಮ್ಮ ಅಮ್ಮನು ನೀನೇ
ಭಾವ ಭಾವ ನಮ್ಮ ಅಪ್ಪನು ನೀನೇ
ನಾವೇ ನಿಮ್ಮ ಮಕ್ಕಳು ತಾನೇ...
 
ಪ್ರೀತಿ ದೈವವು ನಮ್ಮ ಅಕ್ಕ ಅಕ್ಕ
ನಮ್ಮ ಜೀವವೂ ನಮ್ಮ ಭಾವ ಭಾವ…||  
 
ನಮಗೆ ಜನ್ಮವು ಮತ್ತೆ ಇದ್ದರೆ
ನಿಮ್ಮ ಮಕ್ಕಳಾಗಿ ಹುಟ್ಟಿ ಬರುವೆವು 
ಮಮತೆ ಮೂರ್ತಿಯೇ ಕರುಣ ಜ್ಯೋತಿಯೇ
ನಿಮ್ಮ ಭಾರವ ನಾವು ಹೊರೆವೆವು 
ಅಕ್ಕನಿಗೆ ಇದುವರೆಗೆ ಮಕ್ಕಳೇ ಇಲ್ಲ
ನಮ್ಮನ್ನು ಸಾಕಲೆಂದು ಹೆರಲೇ ಇಲ್ಲ 
ನಿಮ್ಮ ಋಣ ತೀರಿಸೋ ಬಗೆ ಗೊತ್ತೇ ಇಲ್ಲ
ಧನ್ಯವಾದ ಹೇಳಲು ಮಾತುಗಳಿಲ್ಲ 
ನಿಮ್ಮ ಋಣ ತೀರಿಸೋ ಬಗೆ ಗೊತ್ತೇ ಇಲ್ಲ
ಧನ್ಯವಾದ ಹೇಳಲು ಮಾತುಗಳಿಲ್ಲ

|| ಪ್ರೀತಿ ದೈವವು ನಮ್ಮ ಅಕ್ಕ ಅಕ್ಕ
ನಮ್ಮ ಜೀವವು ನಮ್ಮ ಭಾವ ಭಾವ
ತಂದೆ ಯಾರೋ ತಾಯಿ ಯಾರೋ
ನಾವು ಕಾಣೆವಲ್ಲ ಎಂದು ನಮಗೆ ನೀವೇ ಎಲ್ಲ
ಅಕ್ಕ ಅಕ್ಕ ನಮ್ಮ ಅಮ್ಮನು ನೀನೇ
ಭಾವ ಭಾವ ನಮ್ಮ ಅಪ್ಪನು ನೀನೇ
ನಾವೇ ನಿಮ್ಮ ಮಕ್ಕಳು ತಾನೇ...||  
 

Preethi Dhaivavu song lyrics from Kannada Movie Krishna Mecchida Radhe starring Srinath, Vinod Kumar (Vinod Alva), Madhusudan, Lyrics penned by R N Jayagopal Sung by S P Balasubrahmanyam, Ramesh, Music Composed by Shankar-Ganesh, film is Directed by A T Raghu and film is released on 1988