Krishnaswamy Ramaswamy Lyrics

in Kiladi Jodi

Video:

LYRIC

ಹೆಣ್ಣು : ಕೃಷ್ಣಸ್ವಾಮಿ...   
ಗಂಡು : ಎಸ್ ಮೇಡಂ     
ಹೆಣ್ಣು : ರಾಮಸ್ವಾಮಿ... 
ಗಂಡು : ಏನ್ ಮೇಡಂ
ಹೆಣ್ಣು :  ಯೂ ಮಸ್ಟ್ ಒಬೆ ಮೀ
              ಫಾಲೋ ಮೀ

ಹೆಣ್ಣು : ಕೃಷ್ಣಸ್ವಾಮಿ.....
ಗಂಡು : ಎಸ್ ಮೇಡಂ     
ಹೆಣ್ಣು : ರಾಮಸ್ವಾಮಿ.....
ಗಂಡು : ಹೇಳಿ ಮೇಡಂ     
ಹೆಣ್ಣು : ಕೆಲಸವೇನು ನಾ ಹೇಳುವೆ
               ಎಚ್ಚರ ತಪ್ಪಿ ನೀವ್ ನಡೆದಾಗ
               ಸಂಬಳವಿಲ್ಲ ಉಂಬಳವಿಲ್ಲ
             ಲಾಯದಲ್ಲೆ ಬಿದ್ದು ಸಾಯಬೇಕು......

ಗಂಡು : ಕೃಷ್ಣಸ್ವಾಮಿ.....ಯಾ ಯಾ  
               ರಾಮಸ್ವಾಮಿ.....ಓ ಓ
               ಕೆಲಸವನ್ನು ಮಾಡೋಣವೇ...,
               ಕೆಲಸವನ್ನು ಮಾಡೋಣವೇ..

ಹೆಣ್ಣು : ಬೆಳ್ಳಿ ಮಿಂಚು ಹೊಳೆಯೊ ಹಾಗೆ
               ಮಾಲೀಶ್ ಮಾಡಬೇಕು
               ಒಳ್ಳೆ ಹುರುಳಿ ನೋಡಿ ತಂದು
               ಬೇಯಿಸಿ ತಿನ್ಸಬೇಕು
             ಬೆಳ್ಳಿ ಮಿಂಚು ಹೊಳೆಯೊ ಹಾಗೆ
               ಮಾಲೀಶ್ ಮಾಡಬೇಕು
               ಒಳ್ಳೆ ಹುರುಳಿ ನೋಡಿ ತಂದು
               ಬೇಯಿಸಿ ತಿನ್ಸಬೇಕು
               ಹೇಳಿದಂತೆ ಮಾಡಿ ಆಗ ನೀವು ನೋಡಿ ....
               ದುಡಿಯೋತನಕ ಕೆಲಸ ಖಾಯಂ
               ಪೆನ್ಷನ್ ಕೊಡಲ್ಲ......

               
 ಗಂಡು : ರಮ್ ಪಮ್ ಪಮ್ ಪಮ್ ಪಮ್.......
                ಮುಂಜಾವಿಂದ ಸಂಜೆವರೆಗು ಮಾಲೀಷ್ ಮಾಡ್ತೀವಿ
                ಒಳ್ಳೆ ಹುರುಳಿ ನೋಡಿ ತಂದು ಬೇಯ್ಸಿ ಬಿಸಾಕ್ತೀವಿ....
                ಅಡ್ವಾನ್ಸ್ ಕೇಳೊದಿಲ್ಲ ಬೋನಸ್ ಬೇಡೊದಿಲ್ಲ
                ಕೆಲಸ ಖಾಯಂ ಮಾಡಿ ಸಾಕು ಬಡ್ತಿ ಬೇಕಿಲ್ಲ........
 
|| ಹೆಣ್ಣು : ಕೃಷ್ಣಸ್ವಾಮಿ........   
ಗಂಡು : ಕಮಿಂಗ್ ಮೇಡಂ 
ಹೆಣ್ಣು : ರಾಮಸ್ವಾಮಿ.....   
ಗಂಡು : ರೆಡಿ ಮೇಡಂ 
ಹೆಣ್ಣು :  ಕೆಲಸವೇನು ನಾ ಹೇಳುವೆ
ಗಂಡು : ಕೃಷ್ಣಸ್ವಾಮಿ.....ಯಾ...ಯಾ...
               ರಾಮಸ್ವಾಮಿ.....ಓ...ಓ
               ಕೆಲಸವನ್ನು ಮಾಡೋಣವೇ.....
               ಕೆಲಸವನ್ನು ಮಾಡೋಣವೇ…..||
 
ಹೆಣ್ಣು : ಅಲ್ಲಿ ಇಲ್ಲಿ ಬಿದ್ದ ಲದ್ದಿ ನೀವೇ ಬಾಚಬೇಕು...
               ಸೊಳ್ಳೆ ಗಿಳ್ಳೆ ಬಾರದಂತೆ ಲಾಯ ತೊಳೆಯಬೇಕು.....
               ಅಲ್ಲಿ ಇಲ್ಲಿ ಬಿದ್ದ ಲದ್ದಿ
               ನೀವೇ ಬಾಚಬೇಕು
               ಸೊಳ್ಳೆ ಗಿಳ್ಳೆ ಬಾರದಂತೆ
               ಲಾಯ ತೊಳೆಯಬೇಕು
               ಬಾಲ ನೀವಬೇಕು...ಲಾಳ ಹೊಡೆಯಬೇಕು....
               ರಾತ್ರಿ ಹಗಲು ಮೈಯ ಮುರಿದು ಕೆಲಸ ಮಾಡಬೇಕು.....

ಗಂಡು : ಹ ಹ ಹ ಹ ಹ ಹಾ….
              ಲದ್ದಿ ಏನು ಗಿದ್ದಿ ಏನು ಬಾಚಿ ತಳ್ತೀವಿ
              ಚಿಗಟ ಗಿಗಟ ಏನೇ ಬಂದ್ರು ಬಡದು ಬಿಸಾಕ್ತೀವಿ....
              ಮಾಡೋ ಕೆಲ್ಸ ನೋಡಿ ಆಮೇಲ್ ಮಾತನಾಡಿ
              ನೀವೇ ಮೆಚ್ಚುವಂತ ಜೋಡಿ...ಕಿಲಾಡಿ ಜೋಡಿ.......
 
|| ಗಂಡು : ಕೃಷ್ಣಸ್ವಾಮಿ.....ಯಾ...ಯಾ...
               ರಾಮಸ್ವಾಮಿ
               ಕೆಲಸವನ್ನು ಮಾಡೋಣವೇ.....
             ಕೃಷ್ಣಸ್ವಾಮಿ.....ಯಾ...ಯಾ...
               ರಾಮಸ್ವಾಮಿ
               ಲಲಲಲ ಲಲಲಲ ಲಲಲಲ
               ಲಲಲಲ ಲಲಲಲ….||

Krishnaswamy Ramaswamy song lyrics from Kannada Movie Kiladi Jodi starring Srinath, Vishnuvardhan, Lakshmi, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by S V Rajendra Singh Babu and film is released on 1978