Video:
ಸಂಗೀತ ವೀಡಿಯೊ:

LYRIC

-
ಎತ್ತಲೊ ಜ್ಞಾನ ನೆಟ್ಟು ಯಾರಿಗೊ ಮನಸ್ಸು ಕೊಟ್ಟು
ಬ್ಯಾಸರ ಬಂದು ಬಿಟ್ಟು ಯಾಕೆ ಕುಂತೆ
ಒಕ್ಕಲ ಕೆಲಸ ಬಿಟ್ಟು ಹಟ್ಟಿಯ ಮನೆಯ ಬಿಟ್ಟು
ಗಲ್ಲಕ್ಕೆ ಕೈಯ್ಯ ಕೊಟ್ಟು ಯಾಕೆ ಕುಂತೆ
ಹಿಂಗೆ ಯಾಕೆ ಕುಂತೆ ನಿಂಗೆ ಏನೆ ಚಿಂತೆ
 
ತೆಂಗಿನ ತೋಟ್ದಾಗೆ ಹಂಗನು ಹರಿದೋನೆ
ತಿಂಗಳ ಬೆಳಕ್ನಾಗೆ ಸಂಗತಿ ಸೆಳೇದೋನೆ
ಏನಾಯ್ತೊ ಮುಚ್ಚುಮರೆಯ ಮರೆತ ಗೆಳೆಯ
ಏನಾಯ್ತೊ ನಿಮ್ಗೆ ಏನಾಯ್ತೊ
ಎಲ್ಲೋದ್ಯೊ ಹೃದಯ ಕದ್ದ ಬಾಳ ಗೆಳೆಯ
ಎಲ್ಲೋದ್ಯೊ ಎತ್ತೋದ್ಯೊ
 
(ಯಾಕಿಂಗೆ ಯೋಚ್ನೆ ಮಾಡ್ತ ಮೂರೊತ್ತು ದಾರಿ ನೋಡ್ತ
ನೋವಿನ ಹಾಡ ಹಾಡ್ತ ಯಾಕೆ ನಿಂತೆ
ತಬ್ಬಲಿ ಮಗುವಿನಂಗೆ ಒಬ್ಬಳೆ ಒಂಟಿಯಾಗಿ
ಗುಂಡುಕಲ್ಲಿನ ಹಾಗೆ ಯಾಕೆ ನಿಂತೆ
ಹಿಂಗೆ ಯಾಕೆ ನಿಂತೆ ನಿಂಗೆ ಏನೆ ಚಿಂತೆ)
 
ಶೂರಧೀರ ವೀರಾಧಿವೀರ ನಮ್ಮೂರ ಹಮ್ಮೀರ
ಸುಕುಮಾರ ಸೊಗಸುಗಾರ ನನ್ನ ಸರದಾರ
ಎಲ್ಲ ಬಲ್ಲ ಮಲ್ಲರ ಮಲ್ಲ ನಿನ್ನಂತೋರಿನ್ನಿಲ್ಲ
ಜಗದಗಲ ಮುಗಿಲಗಲ ನೀನೆ ನನಗೆಲ್ಲ
ಕಣ್ಮಣ ಕದ್ದವನೆ ನನ್ನ ಹೃದಯ ಗೆದ್ದವನೆ
ಪ್ರೀತಿಯ ತಂದವನೆ ನನ್ನ ಬದುಕಿಗೆ ಬಂದವನೆ
 
(ಮುತ್ತಿನ ಮಳೆಯು ಹೋಯ್ದು ಗರಿಕೆ ಚಿಗುರು ಎದ್ದು
ಸುತ್ತಲು ಸೊಬಗು ತುಂಬಿ ತುಳಕೈತಿಲ್ಲಿ
ಹಚ್ಚನೆ ಹಸಿರು ಬಾಗಿ ಪಚ್ಚೆಯ ಪೈರು ತೂಗಿ
ರೆಕ್ಕೆಯ ತೆರೆದ ಹಕ್ಕಿ ಸೊಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ)
 
ಮಾವಿನ ತೋಪ್ನಾಗೆ ಮುತ್ತನು ಕೊಟ್ಟೋಳೆ
ಜಾತ್ರೆಯ ಹೊತ್ನಾಗೆ ಮನಸ್ಸನು ನೆಟ್ಟೋಳೆ
ಏನಾಯ್ತೆ ಪ್ರೀತಿ ಹುಡುಗಿ ತಂಟೆ ತುಡುಗಿ ಏನಾಯ್ತೆ
ನಿಂಗೆ ಏನಾಯ್ತೆ
ಯಾಕಿಂಗೆ ಕುಂತೆ ಬೆಡಗಿ ಕುಳಿತೆ ಸೊರಗಿ ಏನಾಯ್ತೆ ನಿಂಗೆ ಏನಾಯ್ತೆ
 
(ಒತ್ತಾರೆ ಮನೆಯ ಬಿಟ್ಟು ಬೆವರು ಸುರಿಸಿ ದುಡಿದು
ಫಸಲು ನಕ್ಕು ನಲಿದು ಹೊಳೆದೈತಿಲ್ಲಿ
ಎತ್ತನ್ನು ನೊಗಕ್ಕೆ ಕಟ್ಟಿ ಕಬ್ಬಿಲೆ ಹೊಡೆದು ಹೊಡೆದು
ಗದ್ದೆಗೆ ನೀರು ಕಟ್ಟಿ ಬೆಳೆದೈತಿಲ್ಲಿ ಪೈರು ನಲಿದೈತಿಲ್ಲಿ
ತೆನೆಯು ಪಡೆದೈತಿಲ್ಲಿ)
 
ಸುಗುಣೆ ಜಾಣೆ ಚಂದುಳ್ಳಿ ಚೆಲುವೆ ಚತುರೆ ಓ ಹೆಣ್ಣೆ
ಸುಕುಮಾರಿ ಸೊಗಸುಗಾತಿ ನನ್ನ ಸಂಗಾತಿ
ಕೀಟಲೆ ಕಳ್ಳಿ ಮಾತಿನ ಮಳ್ಳಿ ಸಂಪನ್ನೆ ಓ ರನ್ನೆ
ಬಂಗಾರಿ ಬಲು ಸಿಂಗಾರಿ ನೀನೆ ಐನಾತಿ
ಕಣ್ಣನು ಕದ್ದವಳೆ ನನ್ನ ಹೃದಯನ ಗೆದ್ದವಳೆ
ಪ್ರೀತಿಯ ತಂದವಳೆ ನನ್ನ ಬಾಳಿಗೆ ಬಂದವಳೆ
 
(ಗುಟ್ಟಿನ ಹಾದಿ ಬಿಟ್ಟು ಕಣ್ಣಲ್ಲಿ ಕಣ್ಣು ನೆಟ್ಟು
ಪ್ರಾಣಕ್ಕೆ ಪ್ರಾಣ ಕೊಟ್ಟು ನಂಬಿ ಬಾಳು
ಪ್ರೀತಿಗೆ ಪ್ರೀತಿ ಕೊಟ್ಟು ದಿಟ್ಟಿಗೆ ನಿಟ್ಟಿ ನೆಟ್ಟು
ತುಟಿಗೆ ತುಟಿಯನಿಟ್ಟು ಪ್ರೀತಿ ಬಾಳು
ಎಂದು ನಗುತ ಬಾಳು ಹೊಂದಿ ಚೆಂದ ಬಾಳು
 
ಹಳ್ಳದ ದಂಡ್ಯಾಗೆ ಮೊದಲಿಗೆ ಕಂಡೋನೆ
ಹುಚ್ಚೆಳ್ಳು ಹೊಲದಾಗೆ ಹುಚ್ಚೆದ್ದು ಕುಣಿದೋನೆ
ಏನಾಯ್ತೊ ಪ್ರೀತಿ ಹುಡುಗ ತಂಟೆ ತುಡುಗ
ಏನಾಯ್ತೊ ನಿಂಗೆ ಏನಾಯ್ತೊ
ಬೇಕಾಯ್ತೊ ಬೆಂಕಿ ಬೆಡಗ ಅಂಗ ಸಂಗ ಮುಂದಾಯ್ತೊ
ಜೀವ ಒಂದಾಯ್ತೊ
 
(ಮುತ್ತಿನ ಮಳೆಯು ಹೋಯ್ದು ಗರಿಕೆ ಚಿಗುರು ಎದ್ದು
ಸುತ್ತಲು ಸೊಬಗು ತುಂಬಿ ತುಳಕೈತಿಲ್ಲಿ
ಹಚ್ಚನೆ ಹಸಿರು ಬಾಗಿ ಪಚ್ಚೆಯ ಪೈರು ತೂಗಿ
ರೆಕ್ಕೆಯ ತೆರೆದ ಹಕ್ಕಿ ಸೊಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ)
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ

-
ಎತ್ತಲೊ ಜ್ಞಾನ ನೆಟ್ಟು ಯಾರಿಗೊ ಮನಸ್ಸು ಕೊಟ್ಟು
ಬ್ಯಾಸರ ಬಂದು ಬಿಟ್ಟು ಯಾಕೆ ಕುಂತೆ
ಒಕ್ಕಲ ಕೆಲಸ ಬಿಟ್ಟು ಹಟ್ಟಿಯ ಮನೆಯ ಬಿಟ್ಟು
ಗಲ್ಲಕ್ಕೆ ಕೈಯ್ಯ ಕೊಟ್ಟು ಯಾಕೆ ಕುಂತೆ
ಹಿಂಗೆ ಯಾಕೆ ಕುಂತೆ ನಿಂಗೆ ಏನೆ ಚಿಂತೆ
 
ತೆಂಗಿನ ತೋಟ್ದಾಗೆ ಹಂಗನು ಹರಿದೋನೆ
ತಿಂಗಳ ಬೆಳಕ್ನಾಗೆ ಸಂಗತಿ ಸೆಳೇದೋನೆ
ಏನಾಯ್ತೊ ಮುಚ್ಚುಮರೆಯ ಮರೆತ ಗೆಳೆಯ
ಏನಾಯ್ತೊ ನಿಮ್ಗೆ ಏನಾಯ್ತೊ
ಎಲ್ಲೋದ್ಯೊ ಹೃದಯ ಕದ್ದ ಬಾಳ ಗೆಳೆಯ
ಎಲ್ಲೋದ್ಯೊ ಎತ್ತೋದ್ಯೊ
 
(ಯಾಕಿಂಗೆ ಯೋಚ್ನೆ ಮಾಡ್ತ ಮೂರೊತ್ತು ದಾರಿ ನೋಡ್ತ
ನೋವಿನ ಹಾಡ ಹಾಡ್ತ ಯಾಕೆ ನಿಂತೆ
ತಬ್ಬಲಿ ಮಗುವಿನಂಗೆ ಒಬ್ಬಳೆ ಒಂಟಿಯಾಗಿ
ಗುಂಡುಕಲ್ಲಿನ ಹಾಗೆ ಯಾಕೆ ನಿಂತೆ
ಹಿಂಗೆ ಯಾಕೆ ನಿಂತೆ ನಿಂಗೆ ಏನೆ ಚಿಂತೆ)
 
ಶೂರಧೀರ ವೀರಾಧಿವೀರ ನಮ್ಮೂರ ಹಮ್ಮೀರ
ಸುಕುಮಾರ ಸೊಗಸುಗಾರ ನನ್ನ ಸರದಾರ
ಎಲ್ಲ ಬಲ್ಲ ಮಲ್ಲರ ಮಲ್ಲ ನಿನ್ನಂತೋರಿನ್ನಿಲ್ಲ
ಜಗದಗಲ ಮುಗಿಲಗಲ ನೀನೆ ನನಗೆಲ್ಲ
ಕಣ್ಮಣ ಕದ್ದವನೆ ನನ್ನ ಹೃದಯ ಗೆದ್ದವನೆ
ಪ್ರೀತಿಯ ತಂದವನೆ ನನ್ನ ಬದುಕಿಗೆ ಬಂದವನೆ
 
(ಮುತ್ತಿನ ಮಳೆಯು ಹೋಯ್ದು ಗರಿಕೆ ಚಿಗುರು ಎದ್ದು
ಸುತ್ತಲು ಸೊಬಗು ತುಂಬಿ ತುಳಕೈತಿಲ್ಲಿ
ಹಚ್ಚನೆ ಹಸಿರು ಬಾಗಿ ಪಚ್ಚೆಯ ಪೈರು ತೂಗಿ
ರೆಕ್ಕೆಯ ತೆರೆದ ಹಕ್ಕಿ ಸೊಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ)
 
ಮಾವಿನ ತೋಪ್ನಾಗೆ ಮುತ್ತನು ಕೊಟ್ಟೋಳೆ
ಜಾತ್ರೆಯ ಹೊತ್ನಾಗೆ ಮನಸ್ಸನು ನೆಟ್ಟೋಳೆ
ಏನಾಯ್ತೆ ಪ್ರೀತಿ ಹುಡುಗಿ ತಂಟೆ ತುಡುಗಿ ಏನಾಯ್ತೆ
ನಿಂಗೆ ಏನಾಯ್ತೆ
ಯಾಕಿಂಗೆ ಕುಂತೆ ಬೆಡಗಿ ಕುಳಿತೆ ಸೊರಗಿ ಏನಾಯ್ತೆ ನಿಂಗೆ ಏನಾಯ್ತೆ
 
(ಒತ್ತಾರೆ ಮನೆಯ ಬಿಟ್ಟು ಬೆವರು ಸುರಿಸಿ ದುಡಿದು
ಫಸಲು ನಕ್ಕು ನಲಿದು ಹೊಳೆದೈತಿಲ್ಲಿ
ಎತ್ತನ್ನು ನೊಗಕ್ಕೆ ಕಟ್ಟಿ ಕಬ್ಬಿಲೆ ಹೊಡೆದು ಹೊಡೆದು
ಗದ್ದೆಗೆ ನೀರು ಕಟ್ಟಿ ಬೆಳೆದೈತಿಲ್ಲಿ ಪೈರು ನಲಿದೈತಿಲ್ಲಿ
ತೆನೆಯು ಪಡೆದೈತಿಲ್ಲಿ)
 
ಸುಗುಣೆ ಜಾಣೆ ಚಂದುಳ್ಳಿ ಚೆಲುವೆ ಚತುರೆ ಓ ಹೆಣ್ಣೆ
ಸುಕುಮಾರಿ ಸೊಗಸುಗಾತಿ ನನ್ನ ಸಂಗಾತಿ
ಕೀಟಲೆ ಕಳ್ಳಿ ಮಾತಿನ ಮಳ್ಳಿ ಸಂಪನ್ನೆ ಓ ರನ್ನೆ
ಬಂಗಾರಿ ಬಲು ಸಿಂಗಾರಿ ನೀನೆ ಐನಾತಿ
ಕಣ್ಣನು ಕದ್ದವಳೆ ನನ್ನ ಹೃದಯನ ಗೆದ್ದವಳೆ
ಪ್ರೀತಿಯ ತಂದವಳೆ ನನ್ನ ಬಾಳಿಗೆ ಬಂದವಳೆ
 
(ಗುಟ್ಟಿನ ಹಾದಿ ಬಿಟ್ಟು ಕಣ್ಣಲ್ಲಿ ಕಣ್ಣು ನೆಟ್ಟು
ಪ್ರಾಣಕ್ಕೆ ಪ್ರಾಣ ಕೊಟ್ಟು ನಂಬಿ ಬಾಳು
ಪ್ರೀತಿಗೆ ಪ್ರೀತಿ ಕೊಟ್ಟು ದಿಟ್ಟಿಗೆ ನಿಟ್ಟಿ ನೆಟ್ಟು
ತುಟಿಗೆ ತುಟಿಯನಿಟ್ಟು ಪ್ರೀತಿ ಬಾಳು
ಎಂದು ನಗುತ ಬಾಳು ಹೊಂದಿ ಚೆಂದ ಬಾಳು
 
ಹಳ್ಳದ ದಂಡ್ಯಾಗೆ ಮೊದಲಿಗೆ ಕಂಡೋನೆ
ಹುಚ್ಚೆಳ್ಳು ಹೊಲದಾಗೆ ಹುಚ್ಚೆದ್ದು ಕುಣಿದೋನೆ
ಏನಾಯ್ತೊ ಪ್ರೀತಿ ಹುಡುಗ ತಂಟೆ ತುಡುಗ
ಏನಾಯ್ತೊ ನಿಂಗೆ ಏನಾಯ್ತೊ
ಬೇಕಾಯ್ತೊ ಬೆಂಕಿ ಬೆಡಗ ಅಂಗ ಸಂಗ ಮುಂದಾಯ್ತೊ
ಜೀವ ಒಂದಾಯ್ತೊ
 
(ಮುತ್ತಿನ ಮಳೆಯು ಹೋಯ್ದು ಗರಿಕೆ ಚಿಗುರು ಎದ್ದು
ಸುತ್ತಲು ಸೊಬಗು ತುಂಬಿ ತುಳಕೈತಿಲ್ಲಿ
ಹಚ್ಚನೆ ಹಸಿರು ಬಾಗಿ ಪಚ್ಚೆಯ ಪೈರು ತೂಗಿ
ರೆಕ್ಕೆಯ ತೆರೆದ ಹಕ್ಕಿ ಸೊಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ)
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ
ಭೂಮಿ ನಕ್ಕೈತಿಲ್ಲಿ ಸ್ವರ್ಗ ಸಿಕ್ಕೈತಿಲ್ಲಿ

Thengina Thotadage song lyrics from Kannada Movie Keralida Kesari starring Shashikumar, Shivaranjini, Tiger Prabhakar, Lyrics penned by Doddarange Gowda Sung by S P Balasubrahmanyam, Vani Jairam, Chorus, Music Composed by Sangeetha Raja, film is Directed by K V Jayaram and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ