Devaru Bareva Katheyalli Lyrics

in Kempu Surya

Video:

LYRIC

ದೇವರು ಬರೆವ ಕಥೆಯಲ್ಲಿ ಸುಖವೆಲ್ಲಿದೆ
ದೇವರು ಬರೆವ ಕಥೆಯಲ್ಲಿ ಸುಖವೆಲ್ಲಿದೆ
ಹಣೆಬರಹ ಗೀಚುವ ಉರಿವ ಬೆಂಕಿಯಲ್ಲೇ
 
|| ದೇವರು ಬರೆವ ಕಥೆಯಲ್ಲಿ ಸುಖವೆಲ್ಲಿದೆ…||
 
ಎಲ್ಲೋ ಹುಟ್ಟಿ ಬಂದೆ
ಎಲ್ಲೋ ಸಾವು ಕಂಡೆ
ನಿನ್ನ ಬಾಳು ಏತಕೆ ಹೀಗಾಯಿತು
ಈ ತಾಣ ನಿನಗಿಂದು ಮನೆಯಾಯಿತು
ಯಾರ ನೋಡಲೆಂದೋ
ಯಾರ ಸೇರಲೊಂದೋ
ಬಂದ ನಿನ್ನ ಆಸೆಯು ಏನಾಯಿತು
ಕಾಡಲ್ಲಿ ನಿನ ದೇಹ ಮಣ್ಣಾಯಿತು
ಸಾವಲ್ಲಿ ಚಿರಶಾಂತಿ ಕಂಡಾಯಿತು

|| ದೇವರು ಬರೆವ ಕಥೆಯಲ್ಲಿ ಸುಖವೆಲ್ಲಿದೆ
ದೇವರು ಬರೆವ ಕಥೆಯಲ್ಲಿ ಸುಖವೆಲ್ಲಿದೆ
ಹಣೆಬರಹ ಗೀಚುವ ಉರಿವ ಬೆಂಕಿಯಲ್ಲೇ
ದೇವರು ಬರೆವಾ ಕಥೆಯಲ್ಲಿ ಸುಖವೆಲ್ಲಿದೆ….||

ಕಲ್ಲು ಮನಸು ಬೇಕು ಮುಳ್ಳು ತುಳಿಯಬೇಕು
ಬಾಳಲಾರೆ ಎನ್ನುವಾ ಕೂಗೇತಕೆ
ನಿಜವನ್ನು ಅರಿತಾಗ ಭಯವೇತಕೆ ಅಹ್ಹಹ್ಹಾ
ಏನೇ ಬಂದರೇನು ಏನೇ ಆದರೇನು
ತಾಳಲಾರೆ ಎನ್ನುವಾ ನೋವೇತಕೆ
ಬದುಕೊಂದು ಹೂವೆಂಬ ಕನಸೇತಕೆ
ಓ ಜೀವಾ ಕಣ್ಣೀರು ಇನ್ನೇತಕೆ..

|| ದೇವರು ಬರೆವ ಕಥೆಯಲ್ಲಿ ಸುಖವೆಲ್ಲಿದೆ
ದೇವರು ಬರೆವ ಕಥೆಯಲ್ಲಿ ಸುಖವೆಲ್ಲಿದೆ
ಹಣೆಬರಹ ಗೀಚುವ ಉರಿವ ಬೆಂಕಿಯಲ್ಲೇ
ದೇವರು ಬರೆವ ಕಥೆಯಲ್ಲಿ ಸುಖವೆಲ್ಲಿದೆ….||

Devaru Bareva Katheyalli song lyrics from Kannada Movie Kempu Surya starring Ambarish, Suman Ranganath, M P Shankar, Lyrics penned by Chi Udayashankar Sung by S P Balasubrahmanyam, Music Composed by Rajan-Nagendra, film is Directed by A T Raghu and film is released on 1990