O Malebille Lyrics

in Karpoorada Gombe

LYRIC

ಮಳೆ ಬಿಲ್ಲೆ.. ಮಳೆ ಬಿಲ್ಲೆ
ಬಾನಲ್ಲಿ ನೀನು ಭೂಮಿಲಿ ನಾನು
ಬಾನಲ್ಲಿ ನೀನು ಭೂಮಿಲಿ ನಾನು
ಏಳು ಬಣ್ಣ ಏಳು ಬಣ್ಣ ನಿನ್ನ ಮೈಯಲ್ಲಿ
ನೂರು ಬಣ್ಣ ಪ್ರೇಮ ಬಣ್ಣ ನನ್ನ ಕಣ್ಣಲ್ಲಿ 
ಮಳೆ ಬಿಲ್ಲೆ.. ಮಳೆ ಬಿಲ್ಲೆ

ಚೆದುರದೆ ನಿಲ್ಲೆ ಮಳೆಯ ಬಿಲ್ಲೆ ಬಾಳಿನ ಬಾನಿನಲಿ
ಪ್ರೀತಿಯ ಅರಮನೆಗೆ ರಂಗು ರಂಗೋಲಿ ನೀನಾಗೆ
ಭಾವಗಳೆಲ್ಲಾ ಕೂಡಿಕೊಂಡು ಜೀವನವಾದಂತೆ
ನಿನ್ನ ರಂಗೆಲ್ಲ ಒಂದಾಯ್ತು ನೋಡಿ
ಮನಸೆರಡು ಒಂದಾಯ್ತು
ನೀ ಸಂಗಮಕೆ ಸಾಕ್ಷಿ
ನೀ ಜೀವನಕೆ ಸಾಕ್ಷಿ

|| ಬಾನಲ್ಲಿ ನೀನು ಭೂಮಿಲಿ ನಾನು
ಬಾನಲ್ಲಿ ನೀನು ಭೂಮಿಲಿ ನಾನು
ಏಳು ಬಣ್ಣ ಏಳು ಬಣ್ಣ ನಿನ್ನ ಮೈಯಲ್ಲಿ
ನೂರು ಬಣ್ಣ ಪ್ರೇಮ ಬಣ್ಣ ನನ್ನ ಕಣ್ಣಲ್ಲಿ 
ಮಳೆ ಬಿಲ್ಲೆ.. ಮಳೆ ಬಿಲ್ಲೆ ||

 
ಅರಿಷಣ ಗಂಧ ಸ್ನಾನದಲಿ ನೆನೆಯಲು ಕಾದಿಹಳು
ಹೊಮ್ಮಿನ ಹೊಳಪಿನಲ್ಲಿ ನಾಚಿ ಕೆಂಪಾಗಿ ಹೋಗುವಳು
ಕೆಂಪಾದ ನನ್ನ ಕೊರಳಿಗೆ ಚಿನ್ನ ತೊಡಿಸಲು ಕಾದಿಹನು
ಆ ಕಲ್ಯಾಣ ಸಮಯದಲಿ ನನ್ನ ಬಂಗಾರವಾಗುವನು
ನೀ ಸಂತಸಕೆ ಸಾಕ್ಷಿ
ನೀ ಸಂಭ್ರಮಕೆ ಸಾಕ್ಷಿ

|| ಬಾನಲ್ಲಿ ನೀನು ಭೂಮಿಲಿ ನಾನು
ಬಾನಲ್ಲಿ ನೀನು ಭೂಮಿಲಿ ನಾನು
ಏಳು ಬಣ್ಣ ಏಳು ಬಣ್ಣ ನಿನ್ನ ಮೈಯಲ್ಲಿ
ನೂರು ಬಣ್ಣ ಪ್ರೇಮ ಬಣ್ಣ ನನ್ನ ಕಣ್ಣಲ್ಲಿ 
ಮಳೆ ಬಿಲ್ಲೆ.. ಮಳೆ ಬಿಲ್ಲೆ. . ||

O Malebille song lyrics from Kannada Movie Karpoorada Gombe starring Ramesh Aravind, Shruthi, Shwetha, Lyrics penned by Hamsalekha Sung by Manu, Chithra, Music Composed by Hamsalekha, film is Directed by S Mahendar and film is released on 1996