Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನೆ ಮನೆ ಮುದ್ದು ಮನೆ
ಮನೆ ಮನೆ ನನ್ನ ಮನೆ
ತಾಯಿ ಮುತ್ತು ಕೊಟ್ಟ ಮನೆ
ತಂದೆ ಪೆಟ್ಟು ಕೊಟ್ಟ ಮನೆ
ಮನೆಗೆ ಬಂದ ನೆಂಟರೆಲ್ಲಾ ಕೂಗಿ ಕರೆದು
ಕೊಬರಿ ಬೆಲ್ಲಗಳನು ಕೊಟ್ಟು
ಸವಿಯ ಸೊಲ್ಲನಾಡುತಿದ್ದ ನಮ್ಮ ಮನೆ..
 
|| ಮನೆ ಮನೆ ಮುದ್ದು ಮನೆ….||
 
ನಾನು ನುಡಿಯ ಕಲಿತ ಮನೆ
ನಾನು ನಡಿಗೆ ಅರಿತ ಮನೆ
ಹಕ್ಕಿ ಬಳಗ ಸುತ್ತ ಕೂಡಿ
ಬೈಗು ಬೆಳಗಿ ಹಾಡಿ ಹಾಡಿ
ಮಲೆಯನಾಡ ಸದ್ದ ಮಾಡಿ
ನಲಿಸುತ್ತಿದ್ದ…ನಮ್ಮ ಮನೆ..
 
|| ಮನೆ ಮನೆ ಮುದ್ದು ಮನೆ….||
 
ಮೊದಲ ಮಿಂಚು ಹೊಳೆದ ಮನೆ
ಮೊದಲ ಗುಡುಗು ಕೇಳ್ದ ಮನೆ
ಮೊದಲ ಮಳೆಯು ಕರೆದು ಕರೆದು
ಹೆಂಚ ಮೇಲೆ ಸದ್ದು ಹರಿದು
ಮಾಡಿನಿಂದ ನೀರು ಸುರಿದು
ಬೆರಗನಿತ್ತ…ನಮ್ಮ ಮನೆ…
 
|| ಮನೆ ಮನೆ ಮುದ್ದು ಮನೆ….||
 
ಹೆತ್ತ ತಾಯಿ ಸತ್ತ ಮನೆ…
ಮತ್ತೆ ತಂದೆ ಹೋದ ಮನೆ…
ಗಿರಿಜನರಳಿ ಬಿಟ್ಟ ಮನೆ..
ಕಿಟ್ಟಿ ಬೆಂದು ಸಂಧ ಮನೆ..
ಬಾಲ್ಯ ಬಾಡಿ ಬಿದ್ದ ಮನೆ…
ಆಗದೆನಕೆ….ನನ್ನ ಮನೆ…
 
|| ಮನೆ ಮನೆ ಮುದ್ದು ಮನೆ….||
 
ಕಬ್ಬಗಳನು ಕಂಡ ಮನೆ…
ಹಬ್ಬದೂಟ ಉಂಡ ಮನೆ..
ಅಜ್ಜಿ ಅಜ್ಜರೆಲ್ಲರಿದ್ದು
ಕೆಲಗು ಗೆಳೆಯರೆಲ್ಲರಿದ್ದು
ಬಾಳಿ ಬದುಕಿ ನರಳಿ ಬಿದ್ದು
ಮಾಯವಾದ ನಮ್ಮ ಮನೆ…
 
|| ಮನೆ ಮನೆ ಮುದ್ದು ಮನೆ….||
 
ತಾಯಿ ಮಿಂದ ಕೆರೆಯ ಮನೆ
ಬಟ್ಟೆಯೊಗೆದ ಕೆರೆಯ ಮನೆ
ತಾಯಿಯಡಿಯ ದೂಳಿಯಿಂದ
ತಂದೆಯುತ್ತ ಮಣ್ಣಿನಿಂದ
ಗಿರಿಜೆ ಬಿದ್ದ ಮಟ್ಟಿಯಿಂದ
ಮಂಗಳಾದ ನಮ್ಮ ಮನೆ…
 
|| ಮನೆ ಮನೆ ಮುದ್ದು ಮನೆ….||
 
ನಾನು ಬದುಕೊಳುಲಿವ ಮನೆ
ನಾನು ಬಾಳಿ ಅಳಿವ ಮನೆ
ನನ್ನದಲ್ಲದಿಳೆಯೊಳಿಂದು
ಹೆಮ್ಮೆಯಿಂದ ನನ್ನೊಳಿಂದು
ಬೆಂದು ಬಳಲಿದಾಗ ಬಂದು
ನೀರು ಕುಡಿವಾ ನನ್ನ ಮನೆ…
 
|| ಮನೆ ಮನೆ ಮುದ್ದು ಮನೆ
ಮನೆ ಮನೆ ನಮ್ಮ ಮನೆ….||

ಮನೆ ಮನೆ ಮುದ್ದು ಮನೆ
ಮನೆ ಮನೆ ನನ್ನ ಮನೆ
ತಾಯಿ ಮುತ್ತು ಕೊಟ್ಟ ಮನೆ
ತಂದೆ ಪೆಟ್ಟು ಕೊಟ್ಟ ಮನೆ
ಮನೆಗೆ ಬಂದ ನೆಂಟರೆಲ್ಲಾ ಕೂಗಿ ಕರೆದು
ಕೊಬರಿ ಬೆಲ್ಲಗಳನು ಕೊಟ್ಟು
ಸವಿಯ ಸೊಲ್ಲನಾಡುತಿದ್ದ ನಮ್ಮ ಮನೆ..
 
|| ಮನೆ ಮನೆ ಮುದ್ದು ಮನೆ….||
 
ನಾನು ನುಡಿಯ ಕಲಿತ ಮನೆ
ನಾನು ನಡಿಗೆ ಅರಿತ ಮನೆ
ಹಕ್ಕಿ ಬಳಗ ಸುತ್ತ ಕೂಡಿ
ಬೈಗು ಬೆಳಗಿ ಹಾಡಿ ಹಾಡಿ
ಮಲೆಯನಾಡ ಸದ್ದ ಮಾಡಿ
ನಲಿಸುತ್ತಿದ್ದ…ನಮ್ಮ ಮನೆ..
 
|| ಮನೆ ಮನೆ ಮುದ್ದು ಮನೆ….||
 
ಮೊದಲ ಮಿಂಚು ಹೊಳೆದ ಮನೆ
ಮೊದಲ ಗುಡುಗು ಕೇಳ್ದ ಮನೆ
ಮೊದಲ ಮಳೆಯು ಕರೆದು ಕರೆದು
ಹೆಂಚ ಮೇಲೆ ಸದ್ದು ಹರಿದು
ಮಾಡಿನಿಂದ ನೀರು ಸುರಿದು
ಬೆರಗನಿತ್ತ…ನಮ್ಮ ಮನೆ…
 
|| ಮನೆ ಮನೆ ಮುದ್ದು ಮನೆ….||
 
ಹೆತ್ತ ತಾಯಿ ಸತ್ತ ಮನೆ…
ಮತ್ತೆ ತಂದೆ ಹೋದ ಮನೆ…
ಗಿರಿಜನರಳಿ ಬಿಟ್ಟ ಮನೆ..
ಕಿಟ್ಟಿ ಬೆಂದು ಸಂಧ ಮನೆ..
ಬಾಲ್ಯ ಬಾಡಿ ಬಿದ್ದ ಮನೆ…
ಆಗದೆನಕೆ….ನನ್ನ ಮನೆ…
 
|| ಮನೆ ಮನೆ ಮುದ್ದು ಮನೆ….||
 
ಕಬ್ಬಗಳನು ಕಂಡ ಮನೆ…
ಹಬ್ಬದೂಟ ಉಂಡ ಮನೆ..
ಅಜ್ಜಿ ಅಜ್ಜರೆಲ್ಲರಿದ್ದು
ಕೆಲಗು ಗೆಳೆಯರೆಲ್ಲರಿದ್ದು
ಬಾಳಿ ಬದುಕಿ ನರಳಿ ಬಿದ್ದು
ಮಾಯವಾದ ನಮ್ಮ ಮನೆ…
 
|| ಮನೆ ಮನೆ ಮುದ್ದು ಮನೆ….||
 
ತಾಯಿ ಮಿಂದ ಕೆರೆಯ ಮನೆ
ಬಟ್ಟೆಯೊಗೆದ ಕೆರೆಯ ಮನೆ
ತಾಯಿಯಡಿಯ ದೂಳಿಯಿಂದ
ತಂದೆಯುತ್ತ ಮಣ್ಣಿನಿಂದ
ಗಿರಿಜೆ ಬಿದ್ದ ಮಟ್ಟಿಯಿಂದ
ಮಂಗಳಾದ ನಮ್ಮ ಮನೆ…
 
|| ಮನೆ ಮನೆ ಮುದ್ದು ಮನೆ….||
 
ನಾನು ಬದುಕೊಳುಲಿವ ಮನೆ
ನಾನು ಬಾಳಿ ಅಳಿವ ಮನೆ
ನನ್ನದಲ್ಲದಿಳೆಯೊಳಿಂದು
ಹೆಮ್ಮೆಯಿಂದ ನನ್ನೊಳಿಂದು
ಬೆಂದು ಬಳಲಿದಾಗ ಬಂದು
ನೀರು ಕುಡಿವಾ ನನ್ನ ಮನೆ…
 
|| ಮನೆ ಮನೆ ಮುದ್ದು ಮನೆ
ಮನೆ ಮನೆ ನಮ್ಮ ಮನೆ….||

Mane Mane Muddu Mane song lyrics from Kannada Movie Kanooru Heggadithi starring Thara, Mallika Prasad, Girish Karnad, Lyrics penned by Kuvempu Sung by Narasimha Nayak, Kusuma, Achala, Vishnu, Music Composed by B V Karanth, film is Directed by Girish Karnad and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ